IPL 2022: ಅತೀ ಹೆಚ್ಚು ಫೋರ್ ಬಾರಿಸಿದ ಟಾಪ್ 5 ಆಟಗಾರರು ಇವ್ರು.. ಬೌಂಡರಿಗೆ ಬಾಲ್ ಕಳಿಸೋದ್ರಲ್ಲಿ ನಿಸ್ಸಿಮರು!
ಇದೀಗ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಫೋರ್ ಬಾರಿಸಿ ಟಾಪ್ 5 ಆಟಗಾರರ ಪಟ್ಟಿಯನ್ನು ನಾವು ನಿಮಗೆ ತೋರಿಸುತ್ತೇವೆ. ಸ್ಟಾರ್ ಆಟಗಾರರು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹಾಗಿದ್ದರೆ ಯಾವ ಆಟಗಾರ ಎಷ್ಟು ಫೋರ್ ಬಾರಿಸಿದ್ದಾರೆ ಅಂತ ನೋಡೋಣ ಬನ್ನಿ..
ಇಂಡಿಯನ್ ಪ್ರೀಮಿಯರ್ ಲೀಗ್(Indian Premier League) 15ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳಲ್ಲಿ ಈಗಾಗಲೇ ಐಪಿಎಲ್ 2022 (IPL 2022) ಫೀವರ್ ಶುರುವಾಗಿದೆ.
2/ 8
65 ದಿನಗಳ ಅವಧಿಯಲ್ಲಿ ಒಟ್ಟು 70 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್(Play Off) ಪಂದ್ಯಗಳನ್ನು ನಡೆಯಲಿದೆ. IPLಐಪಿಎಲ್ನಲ್ಲಿ ಪ್ರತೀ ಬಾರಿಯೂ ಒಂದಲ್ಲಾ ಒಂದು ದಾಖಲೆಗಳು ಸೃಷ್ಟಿಯಾಗುತ್ತಲೇ ಇರುತ್ತದೆ. ದಾಖಲೆಗಳು ಎಂದರೆ ಆಟಗಾರರು ಹಾಗೂ ತಂಡಗಳು ಸಹಜವಾಗಿಯೇ ಸಂಭ್ರಮಿಸುತ್ತವೆ.
3/ 8
ಇದೀಗ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಫೋರ್ ಬಾರಿಸಿ ಟಾಪ್ 5 ಆಟಗಾರರ ಪಟ್ಟಿಯನ್ನು ನಾವು ನಿಮಗೆ ತೋರಿಸುತ್ತೇವೆ. ಸ್ಟಾರ್ ಆಟಗಾರರು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹಾಗಿದ್ದರೆ ಯಾವ ಆಟಗಾರ ಎಷ್ಟು ಫೋರ್ ಬಾರಿಸಿದ್ದಾರೆ ಅಂತ ನೋಡೋಣ ಬನ್ನಿ..
4/ 8
ಐಪಿಎಲ್ನಲ್ಲಿನ ಸಿಕ್ಸರ್ ಸರದಾರ ಕ್ರಿಸ್ ಗೇಲ್ ಆಗಿದ್ದರೆ, ಫೋರ್ಗಳ ಕಿಂಗ್ ಶಿಖರ್ ಧವನ್. ಈ ಬಾರಿ ಕೂಡ ಧವನ್ ಅವರ ಫೋರ್ಗಳ ದಾಖಲೆಯನ್ನು ಮುರಿಯುವುದು ಕಷ್ಟಸಾಧ್ಯ ಎಂದೇ ಹೇಳಬಹುದು. ಯಾಕಂದ್ರೆ ಶಿಖರ್ ಧವನ್ ಇಲ್ಲಿಯವರೆಗೂ 654 ಫೋರ್ ಭಾರಿಸಿ ಮೊದಲ ಸ್ಥಾನದಲ್ಲಿದ್ದಾರೆ.
5/ 8
ಕಿಂಗ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.ಎಲ್ಲ ದಾಖಲೆಗಳನ್ನು ಉಡೀಸ್ ಮಾಡಿರುವ ವಿರಾಟ್ ಕೊಹ್ಲಿ, ಇಲ್ಲೂ ಕೂಡ ಒಟ್ಟು 546 ಫೋರ್ ಬಾರಿಸಿ ದಾಖಲೆ ಸೃಷ್ಟಿಸಿದ್ದಾರೆ. ಈ ಸೀಸನ್ನಲ್ಲಿ ಇನ್ನೂ ಹೆಚ್ಚಿನ ಬೌಂಡರಿಗಳನ್ನು ನಿರೀಕ್ಷಿಸಬುದಾಗಿದೆ.
6/ 8
ಆಸ್ಟ್ರೇಲಿಯಾ ತಂಡ ಡೇವಿಡ್ ವಾರ್ನರ್ ಐಪಿಎಲ್ನಲ್ಲಿ ಸನ್ರೈರ್ಸಸ್ ತಂಡ ಪರವಾಗಿ ಬ್ಯಾಟ್ ಬೀಸಿದ್ದರು. ಐಪಿಎಲ್ 2020ರಲ್ಲಿ ಕಳಪೆ ಪ್ರದರ್ಶನ ನೀಡಿ ತಂಡದಿಂದ ಹೊರಗುಳಿದಿದ್ದರು. ಆದರೂ, ಅವರು ಒಟ್ಟು 525 ಫೋರ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.
7/ 8
ಮಿಸ್ಟರ್ ಐಪಿಎಲ್ ಎಂದು ಬಿರುದು ಪಡೆದುಕೊಂಡಿದ್ದ ಸುರೇಶ್ ರೈನಾ ಈ ಬಾರಿ ಅನ್ಸೋಲ್ಡ್ ಆಗಿದ್ದಾರೆ. ಆದರೆ ಅವರ ದಾಖಲೆಗಳನ್ನು ಮಾತ್ರ ಇನ್ನೂ ಯಾರಿಂದಲೂ ಮುರಿಯೋಕೆ ಸಾಧ್ಯವಾಗಿಲ್ಲ. ಸುರೇಶ್ ರೈನಾ ಒಟ್ಟು 506 ಫೋರ್ಗಳನ್ನು ಬಾರಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
8/ 8
5ನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾ ಇದ್ದಾರೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ ಇಲ್ಲಿಯವರೆಗೂ ಒಟ್ಟು 495 ಫೋರ್ ಬಾರಿಸಿದ್ದಾರೆ.