ಮುಂಬೈ ಇಂಡಿಯನ್ಸ್ ತಂಡದ ಲಸಿತ್ ಮಲಿಂಗ ಅವರು ಐಪಿಎಲ್ ಇತಿಹಾಸದಲ್ಲಿ ಈವರೆಗೆ ಗರಿಷ್ಠ ವಿಕೆಟ್ ಪಡೆದಿವರಾಗಿದ್ದಾರೆ. ಇವರು 110 ಪಂದ್ಯಗಳಲ್ಲಿ 154 ವಿಕೆಟ್ ಕಿತ್ತಿದ್ದಾರೆ. ಗರಿಷ್ಠ ವಿಕೆಟ್ ಪಡೆದ ಎರಡನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಮಿತ್ ಮಿಶ್ರಾವಿದ್ದು, 136 ಪಂದ್ಯಗಳಲ್ಲಿ 146 ವಿಕೆಟ್ ಅನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. 144 ಪಂದ್ಯಗಳಲ್ಲಿ 140 ವಿಕೆಟ್ ಪಡದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಿಯೂಶ್ ಚಾವ್ಲಾ ಅವರು 3ನೇ ಸ್ಥಾನದಲ್ಲಿದ್ದಾರೆ 4ನೇ ಸ್ಥಾನದಲ್ಲಿ ಡ್ವೇನ್ ಬ್ರಾವೋ ಇದ್ದು 122 ಪಂದ್ಯಗಳಲ್ಲಿ 136 ವಿಕೆಟ್ ಕಿತ್ತಿದ್ದಾರೆ ಸಿಎಸ್ಕೆ ತಂಡದ ಹರ್ಭಜನ್ ಸಿಂಗ್ 5ನೇ ಸ್ಥಾನದಲ್ಲಿದ್ದು, 149 ಪಂದ್ಯಗಳಲ್ಲಿ 134 ವಿಕೆಟ್ ಪಡೆದಿದ್ದಾರೆ. 6ನೇ ಸ್ಥಾನದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಭುವನೇಶ್ವರ್ ಕುಮಾರ್ ಇದ್ದು, 102 ಪಂದ್ಯಗಳಲ್ಲಿ 120 ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಕೆಕೆಆರ್ ತಂಡದ ಪ್ರಮುಖ ಸ್ಪಿನ್ನರ್ ಸುನೀಲ್ ನರೈನ್ ಅವರು ಕೇವಲ 98 ಪಂದ್ಯಗಳಲ್ಲಿ 112 ವಿಕೆಟ್ ಪಡೆದುಕೊಂಡಿದ್ದಾರೆ ಉಮೇಶ್ ಯಾದವ್ ಕೂಡ 108 ಪಂದ್ಯಗಳಲ್ಲಿ 111 ವಿಕೆಟ್ ಕಿತ್ತು ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ 9ನೇ ಸ್ಥಾನದಲ್ಲಿ 125 ಪಂದ್ಯವನ್ನಾಡಿ 110 ವಿಕೆಟ್ ಕಿತ್ತು ಆರ್ ಅಶ್ವಿನ್ ಇದ್ದಾರೆ 10ನೇ ಸ್ಥಾನದಲ್ಲಿ ಆಶೀಶ್ ನೆಹ್ರಾವಿದ್ದು, ಇವರು ಕೇವಲ 88 ಪಂದ್ಯಗಳಲ್ಲಿ 105 ವಿಕೆಟ್ ಕಿತ್ತು ಟಾಪ್ 10ರ ಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ