ಮುಂಬೈ ಇಂಡಿಯನ್ಸ್ ತಂಡದ ಬೌಲರ್ ಲಸಿತ್ ಮಲಿಂಗ 2011ರ ಐಪಿಎಲ್ ಸೀಸನ್ನಲ್ಲಿ 5 ವಿಕೆಟ್ ಕಿತ್ತು ಮಿಂಚಿದರು. ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಮಲಿಂಗ ಈ ಸಾಧನೆ ಮಾಡಿದ್ದಾರೆ.
2/ 5
2011ರಲ್ಲಿ ಡೆಕ್ಕನ್ ಚಾರ್ಜಸ್ ತಂಡದಲ್ಲಿದ್ದ ಇಶಾಂತ್ ಶರ್ಮಾ ಕೇವಲ 3 ಓವರ್ಗೆ 12 ರನ್ ನೀಡಿ 5 ವಿಕೆಟ್ ಪಡೆದರು. ಕೊಚ್ಚಿ ಟಕ್ಕರ್ಸ್ ಕೇರಳ ತಂಡದ ವಿರುದ್ದ ಇಶಾಂತ್ ಶರ್ಮಾ ಈ ದಾಖಲೆ ಮಾಡಿದ್ದಾರೆ.
3/ 5
2009ರಲ್ಲಿ ಆರ್ಸಿಬಿ ತಂಡದಲ್ಲಿದ್ದ ಅನಿಲ್ ಕುಂಬ್ಳೆ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ 5 ವಿಕೆಟ್ ಕಿತ್ತಿದ್ದರು. 3.1 ಓವರ್ ಬೌಲಿಂಗ್ ಮಾಡಿದ ಕುಂಬ್ಳೆ 1 ಮೇಡನ್ ಜೊತೆ ಕೇವಲ 5 ರನ್ ನೀಡಿ 5 ವಿಕೆಟ್ ತಮ್ಮದಾಗಿಸಿದ್ದಾರೆ.
4/ 5
2016ರಲ್ಲಿ ರೈಸಿಂಗ್ ಪುಣೆ ತಂಡದಲ್ಲಿ ಆಡಿದ್ದ ಆಸೀಸ್ ಆಟಗಾರ ಆ್ಯಡಂ ಜಂಪಾ 6 ವಿಕೆಟ್ ಕಿತ್ತು ದಾಖಲೆ ಬರೆದರು. ಸನ್ರೈಸರ್ಸ್ ಹೈದಾರಾಬಾದ್ ವಿರುದ್ಧದ ಪಂದ್ಯದಲ್ಲಿ ಜಂಪಾ ಅವರು 4 ಓವರ್ಗೆ ಕೇವಲ 19 ರನ್ ನೀಡಿದ 6 ವಿಕೆಟ್ ಕಿತ್ತರು.
5/ 5
ಒಂದು ಪಂದ್ಯದಲ್ಲಿ ಗರಿಷ್ಠ ವಿಕೆಟ್ ಕಿತ್ತ ನಂಬರ್ 1 ಬೌಲರ್ ಎಂದರೆ ಸೋಹೆಲ್ ತನ್ವೀರ್. 2008ರ ಸೀಸನ್ನಲ್ಲಿ ಈ ದಾಖಲೆ ನಿರ್ಮಾಣವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ತನ್ವೀರ್ 4 ಓವರ್ಗೆ 16 ರನ್ ನೀಡಿ 6 ವಿಕೆಟ್ ಪಡೆದಿದ್ದಾರೆ.