Mohammed Siraj Birthday: ಮೊಹಮ್ಮದ್ ಸಿರಾಜ್​ಗೆ ಇಂದು ಜನ್ಮದಿನದ ಸಂಭ್ರಮ, 28ನೇ ವಸಂತಕ್ಕೆ ಕಾಲಿಟ್ಟ ಸಿರಾಜ್!

ಕಡಿಮೆ ಅವಧಿಯಲ್ಲಿ ಟೀಂ ಇಂಡಿಯಾದಲ್ಲಿ ಗಟ್ಟಿಯಾಗಿ ನೆಲೆನಿಂತ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಗೆ ಇಂದು 28ನೇ ವರ್ಷದ ಜನ್ಮದಿನದ ಸಂಭ್ರಮ. ಯಾರೊಬ್ಬ ಕೋಚ್​ ಸಹಾಯವಿಲ್ಲದೆ ಸ್ವತಃ ತಾನೇ ಬೌಲಿಂಗ್ ಕಲಿತು ಇಂದು ವಿಶ್ವವೇ ತಿರುಗಿ ನೋಡುವಂತಹ ಪ್ರದರ್ಶನ ನೀಡಿದಂತಹ ಭಾರತದ ವೇಗಿಯಾಗಿದ್ದಾರೆ.ಅಲ್ಲದೇ ಟೆಸ್ಟ್ ಕ್ರಿಕೆಟ್​ನಲ್ಲಿ ತನ್ನ ಮಗ ಮಿಂಚಬೇಕು ಎಂಬ ಕನಸು ಕಂಡಿದ್ದ ಸಿರಾಜ್ ತಂದೆಯ ಕನಸನ್ನು ಇಂದು ಸಿರಾಜ್ ನನಸು ಮಾಡಿದ್ದಾರೆ.

First published: