Rahul Chahar Wedding:ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಯುವ ಸ್ಪಿನ್ನರ್ ರಾಹುಲ್ ಚಹಾರ್

ಐಪಿಎಲ್ 2022ರ 15ನೇ ಆವೃತ್ತಿ ಆರಂಭಕ್ಕೆ ಇನ್ನೇನು ಎರಡು ವಾರಗಳ ಸಮಯ ಉಳಿದಿದೆ. ಈ ನಡುವೆ ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್​ ಓರ್ವ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು, ಭಾರತ ತಂಡದ ಲೆಗ್‌ ಸ್ಪಿನ್ನರ್‌ ರಾಹುಲ್‌ ಚಹರ್‌ ತಮ್ಮ ಪ್ರೇಯಸಿ ಇಶಾನಿ ಜೋಹರ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೋವಾದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ರಾಹುಲ್‌ ಚಹರ್‌ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಇನಿಂಗ್ಸ್‌ ಆರಂಭಿಸಿದ್ದಾರೆ. ಇನ್ನು, ಮದುವೆಯ ಫೋಟೋಗಳನ್ನು ಚಹಾರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

First published: