Murali Vijay: ವಿದೇಶಿ ಲೀಗ್ ಆಡುವ ಚಿಂತನೆ, ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಮುರಳಿ ವಿಜಯ್

ಇತ್ತೀಚೆಗಷ್ಟೇ ಮುರಳಿ ವಿಜಯ್, "ಭಾರತದಲ್ಲಿ 30 ವಯಸ್ಸು ದಾಟಿದವರನ್ನು 80 ವರ್ಷ ವಯಸ್ಸಾದವರಂತೆ ನೋಡುತ್ತಾರೆ. ನನಗೆ ಈ ವಯಸ್ಸಿನಲ್ಲೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಸಾಮರ್ಥ್ಯ ನನಗಿದೆ. ಆದರೆ ನನಗೆ ಅವಕಾಶ ಸಿಗುತ್ತಿಲ್ಲ" ಎಂದು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಂತ ಹೇಳಿದ ಒಂದು ವಾರದೊಳಗೆ ನಿವೃತ್ತಿ ಘೋಷಿಸಿದ್ದಾರೆ.

First published:

  • 17

    Murali Vijay: ವಿದೇಶಿ ಲೀಗ್ ಆಡುವ ಚಿಂತನೆ, ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಮುರಳಿ ವಿಜಯ್

    ಭಾರತ ತಂಡದಿಂದ ಅವಕಾಶ ವಂಚಿತರಾಗಿದ್ದ ಆರಂಭಿಕ ಬ್ಯಾಟರ್​ ಮುರಳಿ ವಿಜಯ್ ಸೋಮವಾರದಂದು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 38 ವರ್ಷ ವಯಸ್ಸಿನ ವಿಜಯ್ 2008 ರಿಂದ 2015 ರವರೆಗೆ 7 ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

    MORE
    GALLERIES

  • 27

    Murali Vijay: ವಿದೇಶಿ ಲೀಗ್ ಆಡುವ ಚಿಂತನೆ, ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಮುರಳಿ ವಿಜಯ್

    ಸೀಮಿತ ಓವರ್​ಗಳಲ್ಲಿ ಅಷ್ಟೇನು ಉತ್ತಮ ದಾಖಲೆ ಹೊಂದಿಲ್ಲದ ಮುರಳಿ ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತದ ಪರ ಉತ್ತಮ ಪ್ರದರ್ಶನವನ್ನೇ ತೋರಿದ್ದಾರೆ. ವೃತ್ತಿಜೀವನದಲ್ಲಿ 61 ಟೆಸ್ಟ್, 17 ಏಕದಿನ ಮತ್ತು 9 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಟೆಸ್ಟ್‌ ಪಂದ್ಯಗಳಲ್ಲಿ 12 ಶತಕ ಮತ್ತು 15 ಅರ್ಧಶತಕಗಳ ಸಹಿತ 3982 ರನ್‌ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್​ 339 ರನ್ ಮತ್ತು ಒಂಬತ್ತು ಟಿ20 ಪಂದ್ಯಗಳಲ್ಲಿ 169 ರನ್ ಗಳಿಸಿದ್ದಾರೆ.

    MORE
    GALLERIES

  • 37

    Murali Vijay: ವಿದೇಶಿ ಲೀಗ್ ಆಡುವ ಚಿಂತನೆ, ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಮುರಳಿ ವಿಜಯ್

    ತಮಿಳುನಾಡಿನ ವಿಜಯ್ 2018-19ರ ಬಾರ್ಡರ್​ ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯಲ್ಲಿ ಕೊನೆಯ ಬಾರಿಗೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಲಯ ಕಳೆದುಕೊಂಡಿದ್ದ ವಿಜಯ್ ಮತ್ತೆ ಟೀಮ್​ ಇಂಡಿಯಾದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಈಗಾಗಲೇ 35 ವಯಸ್ಸು ದಾಟಿದ್ದರಿಂದ ಆಯ್ಕೆ ಸಮಿತಿ ಮುರಳಿ ವಿಜಯ್​ಗೆ ಮತ್ತೆ ಅವಕಾಶವನ್ನು ನೀಡಲಿಲ್ಲ.

    MORE
    GALLERIES

  • 47

    Murali Vijay: ವಿದೇಶಿ ಲೀಗ್ ಆಡುವ ಚಿಂತನೆ, ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಮುರಳಿ ವಿಜಯ್

    ಬಿಸಿಸಿಐ, ಟಿಎನ್‌ಸಿ, ಚೆನ್ನೈ ಸೂಪರ್ ಕಿಂಗ್ಸ್ ನನಗೆ ನೀಡಿದ ಅವಕಾಶಗಳಿಗೆ ನಾನು ಆಭಾರಿಯಾಗಿದ್ದೇನೆ. ನನ್ನೆಲ್ಲಾ ಸಹಾ ಆಟಗಾರರಿಗೆ, ಕೋಚ್‌ಗಳಿಗೆ ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದಗಳು. ನಿಮ್ಮೆಲ್ಲರ ಜೊತೆಗೆ ಆಡುವ ಅವಕಾಶ ಸಿಕ್ಕಿದ್ದು ನನಗೆ ಲಭ್ಯವಾದ ಬಹುದೊಡ್ಡ ಗೌರವ. ನನ್ನ ಕನಸನ್ನು ನನಸನ್ನಾಗಿಸಿಕೊಳ್ಳಲು ನೆರವಾದ ಪ್ರತಿಯೊಬ್ಬರಿಗೂ ಧನ್ಯವಾದ " ಎಂದು ಮುರಳಿ ವಿಜಯ್‌ ತಮ್ಮ ನಿವೃತ್ತಿ ಪತ್ರದಲ್ಲಿ ಬರೆದುಕೊಂಡಿದ್ದಾರೆ.

    MORE
    GALLERIES

  • 57

    Murali Vijay: ವಿದೇಶಿ ಲೀಗ್ ಆಡುವ ಚಿಂತನೆ, ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಮುರಳಿ ವಿಜಯ್

    ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್​, ಡೆಲ್ಲಿ ಡೇರ್​ಡೆವಿಲ್ಸ್ ಸೇರಿದಂತೆ ಹಲವು ತಂಡಗಳನ್ನು ಪ್ರತಿನಿಧಿಸಿರುವ ಮುರಳಿ 106 ಪಂದ್ಯಗಳಿಂದ 2 ಶತಕ ಹಾಗೂ 13 ಅರ್ಧಶತಕಗಳಿಂದ 121 ರ ಸ್ಟ್ರೈಕ್​ ರೇಟ್​ನಲ್ಲಿ 2619ರನ್​ಗಳಿಸಿದ್ದಾರೆ.

    MORE
    GALLERIES

  • 67

    Murali Vijay: ವಿದೇಶಿ ಲೀಗ್ ಆಡುವ ಚಿಂತನೆ, ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಮುರಳಿ ವಿಜಯ್

    ಬಿಸಿಸಿಐನ ಎಲ್ಲಾ ಮಾದರಿಗೆ ನಿವೃತ್ತಿ ಘೋಷಿಸಿರುವ ಮುರಳಿ ವಿಜಯ್ ಭವಿಷ್ಯದಲ್ಲಿ ವಿದೇಶಿ ಲೀಗ್​ಗಳಲ್ಲಿ ಆಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ಒಪ್ಪಂದ ಇರುವ ಯಾವುದೇ ಆಟಗಾರರಿಗೆ ವಿದೇಶಿ ಫ್ರಾಂಚೈಸಿ ಲೀಗ್​ಗಳಲ್ಲಿ ಆಡುವುದನ್ನ ಬಿಸಿಸಿಐ ನಿಷೇಧಿಸಿದೆ. ಒಂದು ವೇಳೆ ವಿದೇಶಿ ಲೀಗ್​ಗಳಲ್ಲಿ ಆಡಬೇಕೆಂದರೆ ಎಲ್ಲಾ ಮಾದರಿಗೂ ನಿವೃತ್ತಿ ಘೋಷಿಸಬೇಕು. ಅಂತಹ ಆಟಗಾರನಿಗೆ ಭವಿಷ್ಯದಲ್ಲಿ ಯಾವುದೇ ಹುದ್ದೆ ಕೂಡ ಸಿಗುವುದಿಲ್ಲ.

    MORE
    GALLERIES

  • 77

    Murali Vijay: ವಿದೇಶಿ ಲೀಗ್ ಆಡುವ ಚಿಂತನೆ, ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಮುರಳಿ ವಿಜಯ್

    ಇತ್ತೀಚೆಗಷ್ಟೇ ಮುರಳಿ ವಿಜಯ್ ಭಾರತದಲ್ಲಿ 30 ವಯಸ್ಸು ದಾಟಿದವರನ್ನು 80 ವರ್ಷ ವಯಸ್ಸಾದವರಂತೆ ನೋಡುತ್ತಾರೆ. ನನಗೆ ಈ ವಯಸ್ಸಿನಲ್ಲೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಸಾಮರ್ಥ್ಯ ನನಗಿದೆ. ಆದರೆ ನನಗೆ ಅವಕಾಶ ಸಿಗುತ್ತಿಲ್ಲ ಎಂದು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು

    MORE
    GALLERIES