IND vs NZ: 200 ಕ್ಲಬ್ನಲ್ಲಿ ಭಾರತೀಯರದ್ದೇ ದರ್ಬಾರ್, ಆದ್ರೂ ಗಿಲ್ಗೆ ಇದೊಂದು ದಾಖಲೆ ಮುರಿಯೋಕಾಗಿಲ್ಲ!
IND vs NZ: ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗದ ದ್ವಿಶತಕ ಪೂರೈಸಿದ ವಿಶೇಷ ದಾಖಲೆ ಭಾರತ ತಂಡದ ಯುವ ಬ್ಯಾಟ್ಸ್ಮನ್ ಇಶಾನ್ ಕಿಶನ್ ಹೆಸರಿನಲ್ಲಿದೆ. ಚಿತ್ತಗಾಂಗ್ನಲ್ಲಿ ಬಾಂಗ್ಲಾದೇಶ ವಿರುದ್ಧ ಕಿಶನ್ ಕೇವಲ 126 ಎಸೆತಗಳಲ್ಲಿ ಈ ಸಾಧನೆ ಮಾಡಿದರು.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಜನವರಿ 18 ರಂದು ಹೈದರಾಬಾದ್ನಲ್ಲಿ ನಡೆಯಿತು. ಈ ರೋಚಕ ಪಂದ್ಯದಲ್ಲಿ ಭಾರತ ತಂಡ 12 ರನ್ಗಳ ಜಯ ಸಾಧಿಸಿತು.
2/ 8
ಪಂದ್ಯದ ವೇಳೆ, ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಉತ್ತಮ ಲಯದಲ್ಲಿ ಕಾಣಿಸಿಕೊಂಡರು. ಗಿಲ್ ಕೇವಲ 149 ಎಸೆತಗಳಲ್ಲಿ 208 ರನ್ಗಳ ದ್ವಿಶತಕ ಗಳಿಸಿದರು. ಈ ವೇಳೆ ಗಿಲ್ 19 ಬೌಂಡರಿಗಳು ಮತ್ತು 9 ಸಿಕ್ಸ್ರ್ಗಳು ಹೊರಬಂದವು.
3/ 8
ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗದ ದ್ವಿಶತಕ ಪೂರೈಸಿದ ಐವರು ಆಟಗಾರರ ಬಗ್ಗೆ ನೋಡುವುದಾದರೆ, ಭಾರತ ತಂಡದ ಯುವ ಬ್ಯಾಟ್ಸ್ಮನ್ ಇಶಾನ್ ಕಿಶನ್ ಹೆಸರು ಮೊದಲ ಸ್ಥಾನದಲ್ಲಿದೆ. ಚಿತ್ತಗಾಂಗ್ನಲ್ಲಿ ಬಾಂಗ್ಲಾದೇಶ ವಿರುದ್ಧ ಕಿಶನ್ ಕೇವಲ 126 ಎಸೆತಗಳಲ್ಲಿ ದ್ವಿಶತಕ ಗಳಿಸಿದರು.
4/ 8
ಎರಡನೇ ಸ್ಥಾನದಲ್ಲಿ ಕೆರಿಬಿಯನ್ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಹೆಸರು ಕೇಳಿಬರುತ್ತದೆ. 2014ರಲ್ಲಿ ಕ್ಯಾನ್ಬೆರಾದಲ್ಲಿ ಜಿಂಬಾಬ್ವೆ ವಿರುದ್ಧ ಸ್ಫೋಟಕ ಬ್ಯಾಟಿಂಗ್ನಲ್ಲಿ ಗೇಲ್ 138 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದರು.
5/ 8
ಎರಡನೇ ಸ್ಥಾನದಲ್ಲಿ ಕೆರಿಬಿಯನ್ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಹೆಸರು ಕೇಳಿಬರುತ್ತದೆ. 2014ರಲ್ಲಿ ಕ್ಯಾನ್ಬೆರಾದಲ್ಲಿ ಜಿಂಬಾಬ್ವೆ ವಿರುದ್ಧ ಸ್ಫೋಟಕ ಬ್ಯಾಟಿಂಗ್ನಲ್ಲಿ ಗೇಲ್ 138 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದರು.
6/ 8
ಭಾರತದ ಮಾಜಿ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಮೂರನೇ ಸ್ಥಾನದಲ್ಲಿದ್ದಾರೆ. 2011ರಲ್ಲಿ ಇಂದೋರ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೆಹ್ವಾಗ್ 140 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದರು.
7/ 8
ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಅತ್ಯುತ್ತಮ ಬ್ಯಾಟಿಂಗ್ ನಂತರ, ಶುಭಮನ್ ಗಿಲ್ ಹೆಸರು ನಾಲ್ಕನೇ ಸ್ಥಾನದಲ್ಲಿದೆ. ಗಿಲ್ ಏಕದಿನ ಮಾದರಿಯಲ್ಲಿ 145 ಎಸೆತಗಳಲ್ಲಿ ದ್ವಿಶತಕ ಬಾರಿಸಿ ವಿಶೇಷ ದಾಖಲೆ ಮಾಡಿದ್ದಾರೆ.
8/ 8
ಭಾರತದ ಮಾಜಿ ಶ್ರೇಷ್ಠ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಐದನೇ ಸ್ಥಾನದಲ್ಲಿದ್ದಾರೆ. ಸಚಿನ್ 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗ್ವಾಲಿಯರ್ನಲ್ಲಿ 147 ಎಸೆತಗಳಲ್ಲಿ ODI ಮಾದರಿಯ ಮೊದಲ ದ್ವಿಶತಕವನ್ನು ಗಳಿಸಿದರು.