Rohit Sharma: 'ಮಾತು ಕೊಟ್ಟಿದ್ದೀಯಾ, ಕೊಟ್ಟ ಮಾತು ಉಳಿಸಿಕೋ ರೋಹಿತ್'- 3ನೇ ಏಕದಿನ ಪಂದ್ಯಕ್ಕೂ ಮುನ್ನ ಅಭಿಮಾನಿಗಳ ಡಿಮ್ಯಾಂಡ್!
ಟೀಂ ಇಂಡಿಯಾ ಈ ವರ್ಷ ಹೆಚ್ಚು ಏಕದಿನ ಮಾದರಿ ಕ್ರಿಕೆಟ್ ಟೂರ್ನಿಗಳನ್ನು ಆಡಲಿದೆ. ವಿಶೇಷ ಎಂದರೇ ಬಹುತೇಕ ಟೂರ್ನಿಗಳು ಸ್ವದೇಶದಲ್ಲೇ ನಡೆಯುಲಿದೆ. ಸದ್ಯ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 2-0 ಅಂತರದೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ.
2023ರ ಏಕದಿನ ವಿಶ್ವಕಪ್ಗೆ ಟೀಂ ಇಂಡಿಯಾ ಈಗಾಗಲೇ ತಯಾರಿ ಆರಂಭಿಸಿದೆ. ಈ ವರ್ಷ ಅಕ್ಟೋಬರ್ನಲ್ಲಿ ಸ್ವದೇಶದಲ್ಲೇ ನಡೆಯಲಿರುವ ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ಈಗಾಗಲೇ ಹಲವು ಯೋಜನೆಗಳನ್ನು ರೂಪಿಸಿದೆ.
2/ 8
ಟೀಂ ಇಂಡಿಯಾ ಈ ವರ್ಷ ಹೆಚ್ಚು ಏಕದಿನ ಮಾದರಿ ಕ್ರಿಕೆಟ್ ಟೂರ್ನಿಗಳನ್ನು ಆಡಲಿದೆ. ವಿಶೇಷ ಎಂದರೆ ಬಹುತೇಕ ಟೂರ್ನಿಗಳು ಸ್ವದೇಶದಲ್ಲೇ ನಡೆಯುಲಿದೆ. ಸದ್ಯ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 2-0 ಅಂತರದೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ.
3/ 8
ಇನ್ನು, ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಕಿವೀಸ್ ಬೌಲರ್ಗಳನ್ನು ದಂಡಿಸಿ ಬೌಂಡರಿ ಹಾಗೂ ಸಿಕ್ಸರ್ ಗಳ ಮೂಲಕ ರೋ'ಹಿಟ್' ಪ್ರೇಕ್ಷಕರನ್ನು ರಂಜಿಸಿದ್ದರು. ಆದರೆ ಕೆಲ ದಿನಗಳಿಂದ ರೋಹಿತ್ ದೊಡ್ಡ ಇನ್ನಿಂಗ್ಸ್ ಕಟ್ಟಲು ವಿಫಲರಾಗಿದ್ದರು.
4/ 8
ಈ ವಿಚಾರವನ್ನು ಎರಡನೇ ಏಕದಿನ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಶರ್ಮಾ ಪ್ರಸ್ತಾಪ ಮಾಡಿದ್ದರು. ಕೆಲ ದಿನಗಳಿಂದ ಭಾರೀ ಇನ್ನಿಂಗ್ಸ್ಗಳನ್ನು ಆಡಲು ಆಗಲಿಲ್ಲ ಎಂದು ಹೇಳಿದ್ದರು. ಮೊದಲ ಎಸೆತದಿಂದಲೇ ಬಿರುಸಿನ ಪ್ರದರ್ಶನಕ್ಕೆ ರೋಹಿತ್ ಶರ್ಮಾ ಮುಂದಾಗುತ್ತಿದ್ದಾರೆ.
5/ 8
ಸುದ್ದಿಗೋಷ್ಠಿ ಮಾತನಾಡಿರೋ ರೋಹಿತ್ ಶರ್ಮಾ, ದೊಡ್ಡ ಇನ್ನಿಂಗ್ಸ್ಗಳನ್ನು ಆಡಲು ವಿಫಲವಾಗಿರುವುದಕ್ಕೆ ನನಗೆ ಬೇಸರವಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಅಭಿಮಾನಿಗೆ ಒಂದು ಮಾತು ಕೊಟ್ಟಿದ್ದು, ಸದ್ಯದಲ್ಲೇ ಶತಕ ಬಾರಿಸುತ್ತೇನೆ ಎಂದಿದ್ದಾರೆ.
6/ 8
ಇದೇ ವೇಳೆ ರೋಹಿತ್, ಟೀಂ ಇಂಡಿಯಾ ಬೌಲರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿ, ಹಾಡಿ ಹೊಗಳಿದ್ದಾರೆ. ಕಳೆದ 5 ಪಂದ್ಯಗಳಿಂದ ಟೀಂ ಇಂಡಿಯಾ ಬೌಲಿಂಗ್ ವಿಭಾಗ ಅದ್ಭುತ ಪ್ರದರ್ಶನ ನೀಡುತ್ತಿದೆ. ಶಮಿ ಮತ್ತು ಸಿರಾಜ್ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ ಎಂದು ರೋಹಿತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
7/ 8
ಆದರೆ, ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ತಂಡದ ಬಗ್ಗೆ ಒಂದಷ್ಟು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ವಿಶೇಷವಾಗಿ ಬೌಲಿಂಗ್ ಸಂದರ್ಭದಲ್ಲಿ ಈ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.
8/ 8
ರೋಹಿತ್ ಶರ್ಮಾ ಮಾತುಗಳನ್ನು ಗಮನಿಸದರೆ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹಲವು ಬದಲಾವಣೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಸರಣಿ ಗೆದ್ದಿರುವ ಹಿನ್ನೆಲೆಯಲ್ಲಿ ಸಿರಾಜ್ ಹಾಗೂ ಶಮಿಗೆ ಮೂರನೇ ಪಂದ್ಯಕ್ಕೆ ವಿಶ್ರಾಂತಿ ನೀಡಿ, ಉಮ್ರಾನ್ ಮಲಿಕ್ಗೆ ಅವಕಾಶ ನೀಡುವ ಸಾಧ್ಯತೆ ಇದೆ.