ಇಂದೋರ್ನ ಹೋಲ್ಕರ್ (Holkar Stadium) ಕ್ರೀಡಾಂಗಣದಲ್ಲಿ ಇಂದು ಭಾರತ ಮತ್ತು ನ್ಯೂಜಿಲೆಂಡ್ (IND vs NZ) ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಟೀಂ ಇಂಡಿಯಾ ಆರಂಭಿಕರು ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
2/ 8
ಇಂದೋರ್ನಲ್ಲಿ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರ ಸ್ಫೋಟಕ ಬ್ಯಾಟಿಂಗ್ ಮುಂದುವರೆದಿದೆ. ಇನಿಂಗ್ಸ್ ಆರಂಭಿಸುವ ವೇಳೆ ಇಬ್ಬರೂ ಬ್ಯಾಟ್ಸ್ಮನ್ಗಳು ದ್ವಿಶತಕದ ಜೊತೆಯಾಟವಾಡಿದರು. ಈ ವೇಳೆ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸುವ ಮೂಲಕ ಮತ್ತೊಮ್ಮೆ ಕಂಬ್ಯಾಕ್ ಮಾಡಿದ್ದಾರೆ.
3/ 8
ರೋಹಿತ್ ಶರ್ಮಾ ಇಂದು ಕಿವೀಸ್ ವಿರುದ್ಧ 84 ಎಸೆತದಲ್ಲಿ 6 ಸಿಕ್ಸ್ ಮತ್ತು 9 ಪೋರ್ ಮೂಲಕ ಆಕರ್ಷಕ 101 ರನ್ಗಳಿಸಿ ಆಟವಾಡುತ್ತಿದ್ದಾರೆ. ಈ ಮೂಲಕ ರೋಹಿತ್ ಏಕದಿನ ಕ್ರಿಕೆಟ್ನಲ್ಲಿ 29ನೇ ಶತಕವನ್ನು ಗಳಿಸಿದರು.
4/ 8
ಈ ಮೂಲಕ ರೋಹಿತ್ ಶರ್ಮಾ ಶತಕದ ಬಳಿಕ ವಿಕೆಟ್ ಒಪ್ಪಿಸಿದ್ದಾರೆ. ಅವರು ಮಿಚೆಲ್ ಬ್ರಾಸ್ವೆಲ್ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ರೋಹಿತ್ ತಮ್ಮ ಅಭಿಮಾನಿಗಳಿಗೆ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ. ಹಿಟ್ಮ್ಯಾನ್ ಒಂದು ದೊಡ್ಡ ಇನ್ನಿಂಗ್ಸ್ ಅನ್ನು ಸದ್ಯದಲ್ಲಿಯೇ ಆಡುವುದಾಗಿ ಹೇಳಿಕೊಂಡಿದ್ದರು.
5/ 8
ನಾಯಕ ರೋಹಿತ್ ಶರ್ಮಾ ಏಕದಿನದ ಕ್ರಿಕೆಟ್ನಲ್ಲಿ 1100 ದಿನಗಳ ಬಳಿಕ ಶತಕ ಸಿಡಿಸಿದ್ದಾರೆ. ಈ ಮೂಲಕ ಕಿವೀಸ್ ವಿರುದ್ಧ ಹಿಟ್ಮ್ಯಾನ್ ಶತಕದ ಬರವನ್ನು ನೀಗಿಸಿಕೊಂಡಿದ್ದಾರೆ. ಸೆಪ್ಟೆಂಬರ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಶತಕ ಸಿಡಿಸಿದ್ದ ರೋಹಿತ್ ಬಳಿಕ ಇದೀಗ ಮತ್ತೊಮ್ಮೆ ಶತಕ ಸಿಡಿಸಿದ್ದಾರೆ.
6/ 8
ರೋಹಿತ್ ಶರ್ಮಾ ಬೆನ್ನಲ್ಲೇ ಆರಂಭಿಕ ಯುವ ಆಟಗಾರ ಶುಭ್ಮನ್ ಗಿಲ್ ಸಹ ಇಂದು ಮತ್ತೊಮ್ಮೆ ಆಕರ್ಷಕ ಶತಕ ಸಿಡಿಸಿದರು. ಈ ಮೂಲಕ ಗಿಲ್ ಈ ವರ್ಷ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದ್ದಾರೆ.
7/ 8
ಶುಭ್ಮನ್ ಗಿಲ್ ಕಿವೀಸ್ ವಿರುದ್ಧ 3 ಪಂದ್ಯಗಳ್ಲಲಿ 2ನೇ ಶತಕ ಸಿಡಿಸಿದ್ದು, ಇಂದು ಅವರು 78 ಎಸೆತದಲ್ಲಿ 13 ಬೌಂಡರಿ ಮತ್ತು 5 ಸಿಕ್ಸ್ ಮೂಲಕ 112 ರನ್ ಗಳಿಸಿ ಮಿಂಚಿದರು. ಈ ವೇಳೆ ಅವರ ಸ್ಟ್ರೈಕ್ ರೇಟ್ 143.59 ಆಗಿತ್ತು.
8/ 8
ಇನ್ನು, ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್ನಲ್ಲಿ ತಮ್ಮ 4ನೇ ಶತಕ ಸಿಡಿಸಿದರು. ಅಲ್ಲದೇ ಇದರಲ್ಲಿ ಒಂದು ಆಕರ್ಷಕ ದ್ವಿಶತಕ ಸಹ ಸೇರಿದೆ. ಸದ್ಯ ಗಿಲ್ ಮತ್ತು ರೋಹಿತ್ ಶರ್ಮಾ ಔಟ್ ಆಗಿದ್ದು, ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.