ಭಾರತ ಮತ್ತು ನ್ಯೂಜಿಲೆಂಡ್ (IND vs NZ) ನಡುವಿನ 3 ಪಂದ್ಯಗಳ ಸರಣಿಯ 2ನೇ ಏಕದಿನ ಪಂದ್ಯವನ್ನು ಭಾರತ ಭರ್ಜರಿಯಾಘಿ ಗೆಲ್ಲುವ ಮೂಲಕ ಭಾರತ 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಇನ್ನು 1 ಪಂದ್ಯ ಬಾಕಿ ಇರುವಂತೆಯೇ ಜಯ ದಾಖಲಿಸಿದೆ.
2/ 8
ಕಿವೀಸ್ ನೀಡಿದ ಸಣ್ಣ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡ 20.1 ಓವರ್ಗಳಿಗೆ 2 ವಿಕೆಟ್ಗೆ 111 ರನ್ಗಳಿಸುವ ಮೂಲಕ 8 ವಿಕೆಟ್ಗಳ ಜಯ ದಾಖಲಿಸಿದೆ. ಭಾರತದ ಪರ ನಾಯಕ ರೋಹಿತ್ ಶರ್ಮಾ 50 ಎಸೆತದಲ್ಲಿ 7 ಪೋರ್ 2 ಸಿಕ್ಸ್ ಮೂಲಕ 51 ರನ್ ಗಳಿಸಿದರು.
3/ 8
ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಆರಂಭ ನೀಡಿದರು. ಬೌಂಡರಿ ಹಾಗೂ ಸಿಕ್ಸರ್ಗಳಿಂದ ಕೂಡಿದ ತಮ್ಮ ಅರ್ಧಶತಕದ ಇನಿಂಗ್ಸ್ನಿಂದ ಅಭಿಮಾನಿಗಳನ್ನು ರಂಜಿಸಿದರು. ಅದೇ ವೇಳೆ 10ನೇ ಓವರ್ ನಲ್ಲಿ ರೋಹಿತ್ ಭರ್ಜರಿ ಸಿಕ್ಸರ್ ಬಾರಿಸಿದರು.
4/ 8
ಅಷ್ಟರಲ್ಲಿ ಹಿಟ್ಮ್ಯಾನ್ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ವೇಗವಾಗಿ ಓಡಿ ರೋಹಿತ್ನನ್ನು ತಬ್ಬಿಕೊಂಡ ಘಟನೆ ನಡೆದಿದೆ. ಅದೇ ವೇಳೆ ರೋಹಿತ್ ಸಹ ಅಭಿಮಾನಿಯನ್ನು ನಿರಾಸೆ ಮಾಡಲಿಲ್ಲ.
5/ 8
ಮೈದಾನದ ಒಳಗೆ ಓಡಿ ಬಂದು ರೋಹಿತ್ ಅವರನ್ನು ತಬ್ಬಿಕೊಂಡ ಅಭಿಮಾನಿಯನ್ನು ರೋಹಿತ್ ಶರ್ಮಾ ಸಹ ತಬ್ಬಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಆದರೆ ಸಿಬ್ಬಂದಿಗಳು ಬೇಗನೆ ಬಂದು ಆ ಬಾಲಕನ್ನು ಮೈದಾನದಿಂದ ಹೊರಗೆ ಕರೆದುಕೊಂದು ಹೋದರು.
6/ 8
ಭಾರತೀಯ ನಾಯಕನ ಈ ಮುಗ್ದ ಹೃದಯವನ್ನು ನೋಡಿದ ನಂತರ, ಅಭಿಮಾನಿಗಳು ಮತ್ತೊಮ್ಮೆ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಹೊಗಳುತ್ತಿದ್ದಾರೆ.
7/ 8
ಇತ್ತೀಚೆಗೆ ರೋಹಿತ್ ಶರ್ಮಾ ಪುಟ್ಟ ಮಗುವಿನ ಕಣ್ಣೀರು ಒರೆಸಿದ್ದರು. ಬಳಿಕ ಅವರೊಂದಿಗೆ ಫೋಟೋ ಕೂಡ ತೆಗೆಸಿಕೊಂಡಿದ್ದರು. ಇದರ ವಿಡಿಯೋಗಳು ಆ ವೇಳೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
8/ 8
ಭಾರತದ ಪರ ನಾಯಕ ರೋಹಿತ್ ಶರ್ಮಾ 50 ಎಸೆತದಲ್ಲಿ 7 ಪೋರ್ 2 ಸಿಕ್ಸ್ ಮೂಲಕ 51 ರನ್ ಗಳಿಸಿದರು. ಉಳಿದಂತೆ ಶುಭ್ಮನ್ ಗಿಲ್ 40 ರನ್, ವಿರಾಟ್ ಕೊಹ್ಲಿ 11 ರನ್ ಮತ್ತು ಇಶಾನ್ ಕಿಶನ್ 8 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.