IND vs NZ 2nd ODI: ಭಾರತ-ನ್ಯೂಜಿಲ್ಯಾಂಡ್ 2ನೇ ಪಂದ್ಯ ರದ್ದು? ಇಲ್ಲಿದೆ ಹವಾಮಾನ ವರದಿ
IND vs NZ 2nd ODI: ನ್ಯೂಜಿಲೆಂಡ್ ವಿರುದ್ಧದ ODI ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ನಾಳಿಯ 2ನೇ ಏಕದಿನ ಪಂದ್ಯ ನಡೆಯುವುದು ಅನುಮಾನ ಎಂದು ಅನೇಕ ವರದಿಗಳು ವೈರಲ್ ಆಗುತ್ತಿದೆ.
ಭಾರತ ತಂಡ 2023ರಲ್ಲಿ ಸತತ ಮೂರನೇ ಸರಣಿ ಗೆಲ್ಲುವತ್ತ ಕಣ್ಣಿಟ್ಟಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಸರಣಿಯ ಎರಡನೇ ಪಂದ್ಯ (IND vs NZ) ಶನಿವಾರ, ಜನವರಿ 21 ರಂದು ರಾಯ್ಪುರದಲ್ಲಿ ನಡೆಯಲಿದೆ.
2/ 8
ಈ ವರ್ಷ ಭಾರತ ತಂಡ ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ 2-1 ಹಾಗೂ ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಜಯಭೇರಿ ಬಾರಿಸಿತ್ತು. ಹೀಗಾಗಿ ಇದೇ ಲಯದಲ್ಲಿ ಕಿವೀಸ್ ವಿರುದ್ಧದ ಸರಣಿಯನ್ನೂ ಗೆಲ್ಲುವ ತವಕದಲ್ಲಿದೆ.
3/ 8
ಇನ್ನು, ಭಾರತ-ನ್ಯೂಜಿಲ್ಯಾಂಡ್ ನಡುವಿನ 2ನೇ ಏಕದಿನ ಪಂದ್ಯವು ರಾಯಪುರದಲ್ಲಿ ನಡೆಯುತ್ತಿದೆ. ಈ ಮೈದಾನದಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಪಂದ್ಯ ನಡೆಯುತ್ತಿದೆ. ಆದರೆ ಎರಡನೇ ಪಂದ್ಯದ ಮಳೆಯ ಕಾರಣ ರದ್ದಾಗುತ್ತದೆ ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದೆ.
4/ 8
ಆದರೆ ಈ ರೀತಿಯ ಸುದ್ದಿಗಳನ್ನು ನಂಬಬೇಡಿ. ಪಂದ್ಯದ ದಿನವಾದ ನಾಳೆ ಮಳೆಯಾಗುವ ಸಾಧ್ಯತೆ ಇಲ್ಲ. ಅಕ್ಯುವೆದರ್ ಪ್ರಕಾರ, ಜನವರಿ 21 ರಂದು, ರಾಯ್ಪುರದ ಗರಿಷ್ಠ ತಾಪಮಾನ 31 ಮತ್ತು ಕನಿಷ್ಠ ತಾಪಮಾನ 14 ಡಿಗ್ರಿ ಎಂದು ವರದಿಯಾಗಿದೆ.
5/ 8
ಅಂದರೆ ಮಧ್ಯಾಹ್ನದ ವೇಳೆ ತುಂಬಾ ಬಿಸಿಲು ಇರುತ್ತದೆ. ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಅಲ್ಲದೇ ನಾಳಿನ ಪಂದ್ಯವನ್ನು ಅಭಿಮಾನಿಗಳು ಸಂಪೂರ್ಣವಾಗಿ ವೀಕ್ಷಿಸಬಹುದು.
6/ 8
ರಾಯ್ಪುರ ಮೈದಾನದ ಪಿಚ್ನ ಬಗ್ಗೆ ಹೇಳುವುದಾದರೆ, ಇದೊಂದು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ. ಟಿ20 ಹೊರತುಪಡಿಸಿ, ಇಲ್ಲಿ ರಣಜಿ ಟ್ರೋಫಿಯಲ್ಲೂ ದೊಡ್ಡ ಸ್ಕೋರ್ಗಳನ್ನು ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎರಡನೇ ಏಕದಿನ ಪಂದ್ಯದಲ್ಲಿಯೂ 300 ಪ್ಲಸ್ ರನ್ ಹರಿದುಬರುವ ಸಾಧ್ಯತೆ ಇದೆ.
7/ 8
ಪಿಚ್ ವೇಗದ ಬೌಲರ್ಗಳಿಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ವೇಗಿಗಳು ಪಂದ್ಯದ ಆರಂಭದಲ್ಲಿ ಮೇಲುಗೈ ಸಾಧಿಸಬಹುದು. ಆದರೆ, ಮಧ್ಯಾಹ್ನದ ಪಂದ್ಯವಾದ್ದರಿಂದ ಆರ್ದ್ರತೆ ಇರುವುದಿಲ್ಲ.
8/ 8
ಭಾರತ ಸಂಭಾವ್ಯ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್.