IND vs BAN Test: ಬಾಂಗ್ಲಾ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾದ ನಾಲ್ವರು ಸ್ಟಾರ್ ಆಟಗಾರರು ಔಟ್!
IND vs BAN Test: ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಏಕದಿನ ಸರಣಿಯನ್ನು ಕೈಚಲ್ಲಿದೆ. ನಾಳೆ ಅಂತಿಮ ಏಕದಿನ ಪಂದ್ಯ ನಡೆಯಲಿದ್ದು, ಬಳಿಕ ಡಿಸೆಂಬರ್ 14ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.
ಈಗಾಗಲೇ ಭಾರತ ಮತ್ತು ಬಾಂಗ್ಲಾದೇಶ ನಡುವಿನ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ ತಂಡವು 2-0 ಅಂತರದಿಂದ ಸರಣಿಯನ್ನು ಗೆದ್ದಿದೆ. ನಾಳೆ ಸರಣಿಯ ಅಂತಿಮ ಪಂದ್ಯ ಢಾಕಾದಲ್ಲಿ ನಡೆಯಲಿದೆ.
2/ 8
ನಾಯಕ ರೋಹಿತ್ ಶರ್ಮಾ 2ನೇ ಏಕದಿನ ಪಂದ್ಯದಲ್ಲಿ ಗಾಯಗೊಂಡು ಮೈದಾನ ತೊರೆದಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಬ್ಯಾಟಿಂಗ್ಗೆ ಬಂದಿದ್ದರು. ಆದರೆ ಅವರು ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಭಾರತಕ್ಕೆ ವಾಪಸ್ಸಾಗಿದ್ದು, ನಾಳಿನ ಪಮದ್ಯಕ್ಕೆ ಮಾತ್ರವಲ್ಲದೇ ಮುಂಬರಲಿರುವ ಟೆಸ್ಟ್ ಸರಣಿಗೂ ಇರುವುದು ಅನುಮಾನವಾಗಿದೆ.
3/ 8
ಹೀಗಾಗಿ ಅವರು ಮುಂದಿನ ಸರಣಿಯಿಂದ ದೂರವಿರಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಕೈಗೆ ಒರಗಿದ ಚೆಂಡನ್ನು ಸ್ವೀಕರಿಸಲು ತಡವಾಗಿ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ ಕೈ ಬೆರಳು ನೆಲಕ್ಕೆ ಬಲವಾಗಿ ಬಡಿದಿದೆ. ರೋಹಿತ್ ಶರ್ಮಾ ಕೈಯಿಂದ ರಕ್ತಸ್ರಾವವಾಗಿತ್ತು. ಹೀಗಾಗಿ ಅವರು ಮುಂದಿನ ಏಕದಿನ ಹಾಗೂ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.
4/ 8
ಇನ್ನು, ಗಾಯದ ಸಮಸ್ಯೆಯಿಂದ ಏಕದಿನ ಸರಣಿಯಿಂದ ಹೊರಬಿದ್ದಿರುವ ವೇಗದ ಬೌಲರ್ ಮೊಹಮ್ಮದ್ ಶಮಿ ಮುಂದಿನ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಕೂಡ ಅಲಭ್ಯರಾಗಿದ್ದಾರೆ ಎಂದು ತಿಳಿದುಬಂದಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ಮೊದಲ ಪಂದ್ಯ ಡಿಸೆಂಬರ್ 14 ರಿಂದ ಆರಂಭವಾಗಲಿದೆ.
5/ 8
ದೀಪಕ್ ಚಹಾರ್ ಸಹ ಬೌಲಿಂಗ್ ವೇಳೆ ಮತ್ತೊಮ್ಮೆ ಮಂಡಿರಜ್ಜು ನೋವಿಗೆ ಒಳಗಾಗಿದ್ದಾರೆ. ಹೀಗಾಗಿ ಅವರು ಕೇವಲ 3 ಓವರ್ ಬೌಲ್ ಮಾಡಿ ಹೋಗಿದ್ದರು. ಆದರೆ ಬ್ಯಾಟಿಂಗ್ಗೂ ಬಂದರೂ ಸಹ ಅಷ್ಟಾಗಿ ಆಡದೇ ಔಟ್ ಆಗಿ ತೆರಳಿದ್ದರು. ಇದರಿಂದ ಅವರೂ ಸಹ ಮುಂದಿನ ಪಂದ್ಯಕ್ಕೆ ಹಾಗೂ ಟೆಸ್ಟ್ ಸರಣಿಗೆ ಇರುವುದು ಅನುಮಾನವಾಗಿದೆ.
6/ 8
ಏಷ್ಯಾಕಪ್ ನಲ್ಲಿ ಗಾಯಗೊಂಡ ನಂತರ ರವೀಂದ್ರ ಜಡೇಜಾ ಅವರು ಟೀಂ ಇಂಡಿಯಾದಿಂದ ದೂರವಿದ್ದರು. ಅಲ್ಲದೇ ಅವರು ಸದ್ಯ ವಿಶ್ರಾಂತಿಯಲ್ಲಿ ಇರುವುದರಿಂದ ಅವರನ್ನು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡುವುದು ಡೌಟ್ ಆಗಿದೆ.
7/ 8
ಇದರ ನಡುವೆ ಕಳೆದ ದಿನ ನಡೆದ ಗುಜರಾತ್ ಚುನಾವಣೆಯಲ್ಲಿ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಬಿಜೆಪಿ ಪಕ್ಷದಿಂದ ಜಯ ಗಳಿಸಿದ್ದಾರೆ. ಆದರೆ ಈ ವೇಳೆ ಗೆಲುವಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
8/ 8
ಟೀಂ ಇಂಡಿಯಾದಲ್ಲಿ ಗಾಯಾಳುಗಳ ಸಮಸ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಮುಂದಿನ ವರ್ಷ ಏಕದಿನ ವಿಶ್ವಕಪ್ ಇರುವುದರಿಂದ ಬಿಸಿಸಿಐ ಗೆ ಇಂಜುರಿ ಸಮಸ್ಯೆ ದೊಡ್ಡ ತಲೆನೋವಾಗಿದೆ. ಅಲ್ಲದೇ ಭಾರತೀಯ ಆಟಗಾರರೂ ಸಹ ಸಾಲು ಸಾಲು ಸರಣಿಯಲ್ಲಿ ಭಾಗಿ ಆಗುತ್ತಿದ್ದಾರೆ.