IND vs BAN 2nd Test: 2ನೇ ಟೆಸ್ಟ್ಗೂ ಮುನ್ನ ಟೀಂ ಇಂಡಿಯಾಗೆ ಆಘಾತ, ಸ್ಟಾರ್ ಪ್ಲೇಯರ್ ಔಟ್!
IND vs BAN 2nd Test: ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯವು ಇದೇ ತಿಂಗಳ 22ರಿಂದ ಪ್ರಾರಂಭವಾಗಲಿದೆ. ಅದರ ನಂತರ, ಮುಂದಿನ ವರ್ಷ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
ಬಾಂಗ್ಲಾದೇಶ ಪ್ರವಾಸದಲ್ಲಿರುವ ಭಾರತ ತಂಡ ಮೊದಲ ಟೆಸ್ಟ್ ನಲ್ಲಿ 188 ರನ್ ಗಳ ಭರ್ಜರಿ ಜಯ ಸಾಧಿಸಿದ್ದು ಗೊತ್ತೇ ಇದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೆ ತಲುಪಲು, ಭಾರತವು ಉಳಿದ ಐದು ಟೆಸ್ಟ್ಗಳನ್ನು ಗೆಲ್ಲಬೇಕಾಗಿದೆ.
2/ 8
ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯವು ಇದೇ ತಿಂಗಳ 22ರಿಂದ ಪ್ರಾರಂಭವಾಗಲಿದೆ. ಅದರ ನಂತರ, ಮುಂದಿನ ವರ್ಷ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
3/ 8
ಇದರ ನಡುವೆ ಮೊದಲ ಟೆಸ್ಟ್ ಗೆದ್ದ ಭಾರತ ತಂಡಕ್ಕೆ ಆಘಾತ ಎದುರಾಗಿದೆ. ಹೆಬ್ಬೆರಳಿನ ಗಾಯದಿಂದ ಮೊದಲ ಟೆಸ್ಟ್ನಿಂದ ಹೊರಗುಳಿದಿರುವ ರೋಹಿತ್ ಶರ್ಮಾ ಎರಡನೇ ಟೆಸ್ಟ್ನಲ್ಲೂ ಆಡುವುದಿಲ್ಲ ಎಂದು ವರದಿಯಾಗಿದೆ. ರೋಹಿತ್ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ, ಹೀಗಾಗಿ ಭಾರತ ಎರಡನೇ ಟೆಸ್ಟ್ನಲ್ಲಿ ರೋಹಿತ್ ಆಡುತ್ತಿಲ್ಲ ಎಂದು ತಿಳಿದುಬಂದಿದೆ.
4/ 8
ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರೋಹಿತ್ ಗಾಯಗೊಂಡಿದ್ದರು. ಹೆಬ್ಬೆರಳಿಗೆ ತೀವ್ರ ಪೆಟ್ಟಾಗಿದ್ದರಿಂದ ಕೂಡಲೇ ಆಸ್ಪತ್ರೆಗೆ ತೆರಳಿ ಸ್ಕ್ಯಾನಿಂಗ್ಗೆ ಒಳಪಡಿಸಲಾಯಿತು. ಹೀಗಾಗಿ ಅವರು ಮೊದಲ ಟೆಸ್ಟ್ನಿಂದ ಹೊರಗುಳಿದಿದ್ದರು.
5/ 8
ಹೆಚ್ಚಿನ ಚಿಕಿತ್ಸೆಗಾಗಿ 2ನೇ ಏಕದಿನ ಪಂದ್ಯದ ಬಳಿಕ ರೋಹಿತ್ ಮುಂಬೈಗೆ ವಾಪಸ್ಸಾಗಿದ್ದರು. ಆದರೆ, ಚೇತರಿಸಿಕೊಂಡ ನಂತರ ಬಾಂಗ್ಲಾದೇಶಕ್ಕೆ ತೆರಳಿ ಎರಡನೇ ಟೆಸ್ಟ್ನಲ್ಲಿ ಆಡಲಿದ್ದಾರೆ ಎಂಬ ವರದಿಗಳೂ ಬಂದಿದ್ದವು.
6/ 8
ಆದರೆ ರೋಹಿತ್ ಶರ್ಮಾ ಎರಡನೇ ಟೆಸ್ಟ್ ನಲ್ಲಿ ಆಡುತ್ತಿಲ್ಲವಂತೆ. ಭಾರತದಲ್ಲಿ ಮುಂದಿನ ವರ್ಷ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾದಂತಹ ತಂಡಗಳ ವಿರುದ್ಧ ಸರಣಿಗಳು ಇರುವುದರಿಂದ, ರೋಹಿತ್ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಮೊದಲು ಮತ್ತೆ ಆಡುವುದು ಸೂಕ್ತವಲ್ಲ ಎಂದು ಮಂಡಳಿ ತೀರ್ಮಾನಿಸಿದೆ ಎಂದು ವರದಿಯಾಗಿದೆ.
7/ 8
ರೋಹಿತ್ ಅನುಪಸ್ಥಿತಿಯಲ್ಲಿ ಮೊದಲ ಟೆಸ್ಟ್ನಲ್ಲಿ ಸ್ಟ್ಯಾಂಡಿಂಗ್ ಕ್ಯಾಪ್ಟನ್ ಆಗಿದ್ದ ಕೆಎಲ್ ರಾಹುಲ್ ಮತ್ತೊಮ್ಮೆ ನಾಯಕರಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಪೂಜಾರ ಅವರ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
8/ 8
ಮೊದಲ ಟೆಸ್ಟ್ನಲ್ಲಿ ಆಡಿದ ಬಹುತೇಕ ತಂಡವನ್ನೇ ಭಾರತ ಎರಡನೇ ಟೆಸ್ಟ್ನಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಮೊದಲ ಟೆಸ್ಟ್ನಲ್ಲಿ ಉಮೇಶ್ ಯಾದವ್, ಅಶ್ವಿನ್, ಕೊಹ್ಲಿ ಮತ್ತು ರಾಹುಲ್ ಮಾತ್ರ ಕಳಪೆ ಪ್ರದರ್ಶನ ನೀಡಿದ್ದರು. ಅಶ್ವಿನ್ ಬ್ಯಾಟಿಂಗ್ ನಲ್ಲಿ ಮಿಂಚಿದರೂ ಬೌಲಿಂಗ್ ನಲ್ಲಿ ವಿಫಲರಾದರು.