IND vs BAN 2nd Test: ಟೀಂ ಇಂಡಿಯಾ ಗೆಲ್ಲಬೇಕಾದ್ರೆ ಈ ಇಬ್ಬರು ಆಡಲೇಬೇಕು! ಇಲ್ಲಾ ಅಂದ್ರೆ ಬಾಂಗ್ಲಾ ವಿರುದ್ಧ ಜಯ ಕಷ್ಟ
IND vs BAN 2nd Test: ಬಾಂಗ್ಲಾದೇಶ 2ನೇ ಇನ್ನಿಂಗ್ಸ್ನಲ್ಲಿ 232 ರನ್ಗಳಿಗೆ ಆಲೌಟ್. ಈ ಮೂಲಕ ಭಾರತಕ್ಕೆ 145 ರನ್ ಗಳ ಗೆಲುವಿನ ಗುರಿ ನಿಡಿತು. ಆಧರೆ 3ನೇ ದಿನದಾಟದ ಅಂತ್ಯಕ್ಕೆ ಭಾರತ ಸುಲಭ ಗುರಿಯನ್ನು ಬೆನ್ನಟ್ಟುವ ಭರದಲ್ಲಿ ಇದಿಗ ಸಂಕಸಷ್ಟಕ್ಕೆ ಸಿಲುಕಿದೆ.
ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸುತ್ತಿದೆ. ಎರಡನೇ ಟೆಸ್ಟ್ ನಲ್ಲಿ ಇಲ್ಲಿಯವರೆಗೆ ಮೂರು ದಿನಗಳ ಆಟ ನಡೆದಿದ್ದು. ಎಲ್ಲಾ ಸೆಷನ್ ಗಳಲ್ಲಿ ಭಾರತ ಪ್ರಾಬಲ್ಯ ಮೆರೆದಿದೆ.
2/ 7
ಆದರೆ ಮೂರನೇ ದಿನದ ಕೊನೆಯಲ್ಲಿ ಎಲ್ಲವೂ ಬದಲಾಯಿತು. ಮೂರನೇ ದಿನದಾಟದ ಎರಡನೇ ಸೆಷನ್ ನಲ್ಲಿ ಲಿಟನ್ ದಾಸ್ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ಬಾಂಗ್ಲಾದೇಶ 232 ರನ್ ಗಳಿಸಿತು.
3/ 7
ಇರಿಂದಾಗಿ ಭಾರತಕ್ಕೆ 145 ರನ್ ಗುರಿಯನ್ನು ಬಾಂಗ್ಲಾ ನೀಡಿದೆ. ಗುರಿ ಚಿಕ್ಕದಾದರೂ ಪಿಚ್ ಸ್ಪಿನ್ಗೆ ಕೊಡುಗೆ ನೀಡುವುದರಿಂದ ಬ್ಯಾಟಿಂಗ್ ಮಾಡುವುದು ಕಷ್ಟಕರವಾಗಿದೆ. ಬಾಂಗ್ಲಾದೇಶದ ಸ್ಪಿನ್ನರ್ಗಳಿಗೆ ಭಾರತದ ಬ್ಯಾಟ್ಸ್ಮನ್ಗಳು ಆಡಲು ಕಷ್ಟಪಡುತ್ತಿದ್ದಾರೆ.
4/ 7
ಮೂರನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿತ್ತು. ಇನ್ನು ಎರಡು ದಿನಗಳಲ್ಲಿ ಭಾರತ ಗೆಲುವಿಗೆ ಇನ್ನೂ 100 ರನ್ಗಳ ಅಗತ್ಯವಿದೆ. ಇಂದಿನ ದಿನ ಆರಂಭವಾಗಿದ್ದು, ಭಾರತದ 5ನೇ ವಿಕೆಟ್ ಸಹ ಪತನವಾಗಿದೆ.
5/ 7
ಪಿಚ್ ಸ್ಪಿನ್ ಗೆ ಸೂಕ್ತವಾಗಿರುವುದರಿಂದ ರನ್ ಗಳಿಸುವುದು ಸುಲಭವಲ್ಲ. ಮೂರನೇ ದಿನದಾಟದಲ್ಲಿ ಏಕಕಾಲಕ್ಕೆ 14 ವಿಕೆಟ್ಗಳು ಪತನಗೊಂಡಿರುವುದು ಗಮನಾರ್ಹ. ಹೀಗಾಗಿ ಇಂದು ಭಾರತದ ಬ್ಯಾಟ್ಸ್ಮನ್ಗಳು ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಬೇಕಿದೆ.
6/ 7
ನಾಲ್ಕನೇ ದಿನದ ಆಟದಲ್ಲಿ ಭಾರತದ ಗೆಲುವಿನ ಸಾಧ್ಯತೆಗಳು ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಮೇಲೆ ಮಾತ್ರ ಅವಲಂಬಿತವಾಗಿದೆ. ಇವರಿಬ್ಬರ ವೀರೋಚಿತ ಹೋರಾಟಕ್ಕೆ ಭಾರತ ಮೊದಲ ಇನಿಂಗ್ಸ್ನಲ್ಲಿ ಉತ್ತಮ ಮೊತ್ತ ಕಲೆಹಾಕಲು ಸಹಅಯಕವಾಗಿತ್ತು.
7/ 7
ನಾಲ್ಕನೇ ದಿನದಾಟದಲ್ಲಿ ಪಂತ್ ಮತ್ತು ಶ್ರೇಯಸ್ ಅಯ್ಯರ್ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ಭಾರತದ ಗೆಲುವಿನ ಸಾಧ್ಯತೆಗಳು ಅವಲಂಬಿತವಾಗಿವೆ. ಅಕ್ಷರ್ ಪಟೇಲ್ ಮತ್ತು ಅಶ್ವಿನ್ ಕೂಡ ಬ್ಯಾಟಿಂಗ್ ಮಾಡಬಲ್ಲರಾದರೂ ಭಾರತದ ಗೆಲುವಿನ ಸಾಧ್ಯತೆಗಳು ಪಂತ್ ಮತ್ತು ಶ್ರೇಯಸ್ ಅಯ್ಯರ್ ಮೇಲೆ ಅವಲಂಬಿತವಾಗಿದೆ.