IND vs BAN ODI: ಆರ್ಸಿಬಿ ಸ್ಟಾರ್ ಪ್ಲೇಯರ್ಗೆ ಸಿಗುತ್ತಾ ಚಾನ್ಸ್? ಬಾಂಗ್ಲಾ ಎದ್ರು ಪಾದಾರ್ಪಣೆ ಮಾಡ್ತಾರಾ ಪಾಟಿದಾರ್?
India vs Bangladesh: ಭಾರತ ಮತ್ತು ಬಾಂಗ್ಲಾದೇಶದ ಕ್ರಿಕೆಟ್ ತಂಡಗಳು ಇಂದು ಮೊದಲ ODI ಅನ್ನು ಆಡಲಿವೆ. ಈ ಸರಣಿಯಲ್ಲಿ ರೋಹಿತ್ಗೆ ಪ್ಲೇಯಿಂಗ್ 11 ದೊಡ್ಡ ಸಮಸ್ಯೆಯಾಗಿದ್ದು, ಆರ್ಸಿಬಿ ಯುವ ಆಟಗಾರನಿಗೆ ಮೊದಲ ಅವಕಾಶ ದೊರಕುತ್ತದೆಯೇ ಎಂದು ಕಾದುನೋಡಬೇಕಿದೆ.
ರೋಹಿತ್ ಶರ್ಮಾ ನೇತೃತ್ವದ ಭಾರತೀಯ ಕ್ರಿಕೆಟ್ ತಂಡವು (Team India) ವರ್ಷಾಂತ್ಯದಲ್ಲಿ 3 ಪಂದ್ಯಗಳ ODI ಸರಣಿಯಲ್ಲಿ ಬಾಂಗ್ಲಾದೇಶವನ್ನು (IND vs BAN) ಎದುರಿಸಲು ಸಿದ್ಧವಾಗಿದೆ. ಸರಣಿಯ ಮೊದಲ ಏಕದಿನ ಪಂದ್ಯ ಇಂದು ನಡೆಯಲಿದೆ.
2/ 8
ಇಂದಿನ ಪಂದ್ಯ ಬಾಂಗ್ಲಾದ ಢಾಕಾದಲ್ಲಿ ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ 11:30ಕ್ಕೆ ಆರಂಭವಾಗಲಿದ್ದು, 11 ಗಂಟೆಗೆ ಟಾಸ್ ಆಗಲಿದೆ. ಈ ಪಂದ್ಯಗಳನ್ನು ಸೋನಿ ನೆಟ್ವರ್ಕ್ ನೇರ ಪ್ರಸಾರ ಮಾಡಲಿದೆ. ಡಿಜಿಟಲ್ನಲ್ಲಿ ಸೋನಿ ಲೈವ್ ಅಪ್ಲಿಕೇಶನ್ನಲ್ಲಿ ನೀವು ಈ ಪಂದ್ಯಗಳನ್ನು ಲೈವ್ ಆಗಿ ವೀಕ್ಷಿಸಬಹುದು.
3/ 8
ಉಇನ್ನು, ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡುವ 11ರ ಬಳಗದಲ್ಲಿ ಯಾರಿಗೆಲ್ಲಾ ಅವಕಾಶ ನೀಡುತ್ತಾರೆ ಎಂಬ ಕುತೂಹಲ ಇದೀಗ ಹೆಚ್ಚಿದೆ. ಅದರಲ್ಲಿಯೂ ಆರ್ಇಸಬಿಯ ಯುವ ಆಟಗಾರನಿಗೆ ಇಂದಿನ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.
4/ 8
ಟಿ20 ವಿಶ್ವಕಪ್ ಬಳಿಕ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಇದೀಗ ಬಾಂಗ್ಲಾ ಸರಣಿಗೆ ಮರಳಿದ್ದಾರೆ ಹೀಗಾಗಿ ತಂಡದಲ್ಲಿ ಕೆಲ ಬದಲಾವಣೆ ಆಗುವ ಸಾಧ್ಯತೆ ಇದೆ.
5/ 8
ಐಪಿಎಲ್ನಲ್ಲಿ ಆರ್ಸಿಬಿ ಪರ ಆಡುವ ರಜತ್ ಪಟಿದಾರ್ ಬಾಂಗ್ಲಾದೇಶ ವಿರುದ್ಧ ಮೊದಲ ಪಂದ್ಯದಲ್ಲಿ ಆಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ.
6/ 8
ಸದ್ಯ ಭರ್ಜರಿ ಫಾರ್ಮ್ನಲ್ಲಿರುವ ಪಟಿದಾರ್, ಕಳೆದ 10 ಪಂದ್ಯಗಳಲ್ಲಿ ಬರೋಬ್ಬರಿ 368 ರನ್ ಗಳಿಸಿದ್ದು, ಅದರಲ್ಲಿ 5 ಅರ್ಧಶತಕ ಸಹ ಸೇರಿದೆ.
7/ 8
ಪಟಿದಾಋ್ ಕಳೆದ ವರ್ಷ ಅಂದರೆ 2021ರಲ್ಲಿ ಆರ್ಸಿಬಿ ತಂಡಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ರಜತ್ ಇದೀಗ ಭಾರತ ತಂಡಕ್ಕೆ ಆಯ್ಕೆ ಆಗಿದ್ದು, ಪ್ಲೇಯಿಂಗ್ 11 ನಲ್ಲಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.
8/ 8
ಭಾರತ ಸಂಭಾವ್ಯ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (WK), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ದೀಪಕ್ ಚಹಾರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.