ಅಲೆಕ್ಸ್ ಕ್ಯಾರಿ ಅವರನ್ನು ಔಟ್ ಮಾಲಕ ಮೂಲಕ ಅಶ್ವಿನ್ ಈ ಸಾಧನೆ ಮಾಡಿದರು. ಕುಂಬ್ಳೆ 93 ಪಂದ್ಯಗಳಲ್ಲಿ ಈ ದಾಖಲೆಯನ್ನು ಸಾಧಿಸಿದ್ದರೆ, ಅಶ್ವಿನ್ ಅವರು ಕೇವಲ 89 ಟೆಸ್ಟ್ ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. 2005ರಲ್ಲಿ ಪಾಕಿಸ್ತಾನ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಕುಂಬ್ಳೆ ತಮ್ಮ 450ನೇ ವಿಕೆಟ್ ಪಡೆದಿದ್ದರು. ಇತ್ತೀಚಿನ ಪಂದ್ಯದ ಮೂಲಕ ಕುಂಬ್ಳೆ ಅವರ 18 ವರ್ಷಗಳ ಹಳೆಯ ದಾಖಲೆಯನ್ನು ಅಶ್ವಿನ್ ಮುರಿದಿದ್ದಾರೆ.
ಒಟ್ಟಾರೆಯಾಗಿ ವಿಶ್ವ ಕ್ರಿಕೆಟ್‌ನಲ್ಲಿ 450 ವಿಕೆಟ್‌ಗಳ ಮೈಲುಗಲ್ಲು ತಲುಪಿದ 9ನೇ ಬೌಲರ್ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾಗಿದ್ದಾರೆ. ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ), ಅನಿಲ್ ಕುಂಬ್ಳೆ (ಭಾರತ), ಮೆಕ್‌ಗ್ರಾತ್, ಶೇನ್ ವಾರ್ನ್, ಲಯನ್ (ಆಸ್ಟ್ರೇಲಿಯಾ), ಆಂಡರ್ಸನ್ (ಇಂಗ್ಲೆಂಡ್), ವಾಲ್ಷ್ (ವೆಸ್ಟ್ ಇಂಡೀಸ್), ಬ್ರಾಡ್ (ಇಂಗ್ಲೆಂಡ್), ಅಶ್ವಿನ್ (ಭಾರತ) ಈ ಸಾಧನೆ ಮಾಡಿದ್ದಾರೆ.
ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಮುರಳೀಧರನ್ ಟೆಸ್ಟ್‌ನಲ್ಲಿ 800 ವಿಕೆಟ್‌ಗಳನ್ನು ಪಡೆದಿದ್ದಾರೆ. ಆಸ್ಟ್ರೇಲಿಯದ ದಿಗ್ಗಜ ಶೇನ್ ವಾರ್ನ್ (708), ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ (675), ಭಾರತದ ದೈತ್ಯ ಅನಿಲ್ ಕುಂಬ್ಳೆ (619) ಮತ್ತು ಇಂಗ್ಲೆಂಡ್ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ (566) ಅಗ್ರ-5ರಲ್ಲಿದ್ದಾರೆ.