IND vs AUS Test: ನಾಳೆಯಿಂದ ಭಾರತ-ಆಸೀಸ್​ ಸರಣಿ ಆರಂಭ, ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11?

Border–Gavaskar Trophy 2023: ಭಾರತವು ಬಾರ್ಡರ್​ ಗವಾಸ್ಕರ್​ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದರೆ ಮಾತ್ರ ICC WTC ಫೈನಲ್‌ಗೆ ತಲುಪುತ್ತದೆ. ಸರಣಿಯ ಮೊದಲ ಟೆಸ್ಟ್ ಪಂದ್ಯ ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.

First published:

  • 18

    IND vs AUS Test: ನಾಳೆಯಿಂದ ಭಾರತ-ಆಸೀಸ್​ ಸರಣಿ ಆರಂಭ, ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11?

    ಬಹು ನಿರೀಕ್ಷಿತ ಬೋರ್ಡರ್-ಗವಾಸ್ಕರ್ ಟ್ರೋಫಿ 2023 ನಾಳೆಯಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಭಾರತ ತಂಡ ಆಸೀಸ್​ನ್ನು ಸೋಲಿಸಿದರೆ ಮಾತ್ರ ಮುಂಬರಲಿರುವ ICC WTC 2023 ಫೈನಲ್‌ಗೆ ತಲುಪುತ್ತದೆ. ಸರಣಿಯ ಮೊದಲ ಟೆಸ್ಟ್ ಪಂದ್ಯ ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.

    MORE
    GALLERIES

  • 28

    IND vs AUS Test: ನಾಳೆಯಿಂದ ಭಾರತ-ಆಸೀಸ್​ ಸರಣಿ ಆರಂಭ, ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11?

    ಹಾಗಾಗಿಯೇ ಮೊದಲ ಟೆಸ್ಟ್ ಆಡುವ ಆಟಗಾರರ ಆಯ್ಕೆಯಲ್ಲಿ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಹೆಚ್ಚನ ಬದಲಾವಣೆ ಮಾಡುವುದು ಅನುಮಾನ ಎನ್ನಲಾಗಿದೆ. ರೋಹಿತ್ ಶರ್ಮಾ ನಾಯಕತ್ವದ ತಂಡದಲ್ಲಿ ಯಾರಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬುದನ್ನು ನೋಡೋಣ.

    MORE
    GALLERIES

  • 38

    IND vs AUS Test: ನಾಳೆಯಿಂದ ಭಾರತ-ಆಸೀಸ್​ ಸರಣಿ ಆರಂಭ, ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11?

    ಭಾರತ ತಂಡದ ನಾಯಕ ರೋಹಿತ್ ಶರ್ಮಾ ಫಿಟ್ ಆಗಿದ್ದಾರೆ. ಹೀಗಾಗಿ ಅವರು ನಾಳಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಆದಾಗ್ಯೂ, ಉಪನಾಯಕ ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಆರಂಭಿಕ ಜೋಡಿಯಾಗಿ ರೋಹಿತ್‌ಗೆ ಒಂದೇ ಆಯ್ಕೆ ಇದೆ. ಆದರೆ ಇವರಿಬ್ಬರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂದು ಕಾದುನೋಡಬೇಕಿದೆ.

    MORE
    GALLERIES

  • 48

    IND vs AUS Test: ನಾಳೆಯಿಂದ ಭಾರತ-ಆಸೀಸ್​ ಸರಣಿ ಆರಂಭ, ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11?

    ಬಾಂಗ್ಲಾದೇಶದಲ್ಲಿ 3 ವರ್ಷಗಳ ಬಳಿಕ ಶತಕ ಸಿಡಿಸಿದ ಚೇತೇಶ್ವರ ಪೂಜಾರ ಆರಂಭಿಕರ ನಂತರ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ಮುಂದಿನ ಸ್ಥಾನವನ್ನು ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಬಳಿಕ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯುವ ಸಾಧ್ಯತೆ ಇದೆ.

    MORE
    GALLERIES

  • 58

    IND vs AUS Test: ನಾಳೆಯಿಂದ ಭಾರತ-ಆಸೀಸ್​ ಸರಣಿ ಆರಂಭ, ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11?

    ಇಲ್ಲದಿದ್ದರೆ ಕೆಎಲ್ ರಾಹುಲ್ ಅವರು ಉತ್ತಮ ಸ್ಪಿನ್ ಆಡುವುದರಿಂದ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಬಹುದು. ಹೀಗಾದ್ದಲ್ಲಿ ಸೂರ್ಯಕುಮಾರ್​ಗೆ ತಂಡದಲ್ಲಿ ಸ್ತಾನ ಸಿಗುವುದು ಅನುಮಾನವಾಗುತ್ತದೆ.

    MORE
    GALLERIES

  • 68

    IND vs AUS Test: ನಾಳೆಯಿಂದ ಭಾರತ-ಆಸೀಸ್​ ಸರಣಿ ಆರಂಭ, ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11?

    ಇನ್ನು, ಇಶಾನ್ ಕಿಶನ್ ಅಥವಾ ಕೆಎಸ್ ಭರತ್ ವಿಕೆಟ್ ಕೀಪಿಂಗ್​ಗೆ ಆಯ್ಕೆ ಆಗಿ ಉಳಿದಿದ್ದಾರೆ. ಆದರೆ ಕಿಶಾನ್​ ಟೆಸ್ಟ್​ ದಾಖಲೆಗಿಂತ ಕೆಎಸ್ ಭರತ್ ಟೆಸ್ಟ್ ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. 2021-22ರ ಋತುವಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಕಾನ್ಪುರ ಟೆಸ್ಟ್‌ನಲ್ಲಿ ಅವರು ಕೀಪರ್ ಆಗಿ ಮಾಡಿದ ಅನುಭವವಿದೆ.

    MORE
    GALLERIES

  • 78

    IND vs AUS Test: ನಾಳೆಯಿಂದ ಭಾರತ-ಆಸೀಸ್​ ಸರಣಿ ಆರಂಭ, ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11?

    ರವೀಂದ್ರ ಜಡೇಜಾ ಮತ್ತು ಅಶ್ವಿನ್ ಬೌಲಿಂಗ್ ಆಲ್ ರೌಂಡರ್ ಗಳ ಪಾತ್ರ ನಿರ್ವಹಿಸಲಿದ್ದಾರೆ. ಮೂರನೇ ಸ್ಪಿನ್ ಆಯ್ಕೆಗೆ ಅಕ್ಷರ್ ಪಟೇಲ್‌ಗೆ ಅವಕಾಶ ಸಿಗಬಹುದು. ಇಲ್ಲವಾದ್ದಲ್ಲಿ ಕುಲದೀಪ್ ಯಾದವ್ ಅವರನ್ನು ಹೆಚ್ಚುವರಿ ಸ್ಪಿನ್ನರ್​ ಆಗಿ ಆಡಬಹುದು. ವೇಗಿಗಳಾಗಿ ಮೊಹಮ್ಮದ್ ಶಮಿ, ಉಮೇಶ್ ಯಾದವ್ ಅಥವಾ ಮೊಹಮ್ಮದ್ ಸಿರಾಜ್ ಮೂವರಲ್ಲಿ ಇಬ್ಬರಿಗೆ ಚಾನ್ಸ್ ಸಿಗಬಹುದು.

    MORE
    GALLERIES

  • 88

    IND vs AUS Test: ನಾಳೆಯಿಂದ ಭಾರತ-ಆಸೀಸ್​ ಸರಣಿ ಆರಂಭ, ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11?

    ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

    MORE
    GALLERIES