ಭರತ್ ಅವರ ಪೂರ್ಣ ಹೆಸರು ಕೆ ಎಸ್ ಶ್ರೀಕರ್ ಭರತ್ ಎಂದು. ಅವರು 3ನೇ ಅಕ್ಟೋಬರ್ 1993 ರಂದು ಕೋನಸಿಮಾ ಜಿಲ್ಲೆಯ ರಾಮಚಂದ್ರಪುರಂನಲ್ಲಿ ಜನಿಸಿದರು. ಅವರು ದೇಶೀಯ ಕ್ರಿಕೆಟ್‌ನಲ್ಲಿ ಆಂಧ್ರ ಕ್ರಿಕೆಟ್ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಡುತ್ತಾರೆ. ಫೆಬ್ರವರಿ 2015 ರಲ್ಲಿ, ಅವರು ರಣಜಿ ಟ್ರೋಫಿಯಲ್ಲಿ ಟ್ರಿಪಲ್ ಶತಕ ಗಳಿಸಿದ ಮೊದಲ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅದೇ ತಿಂಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಡೇರ್ ಡೆವಿಲ್ಸ್ ಅವರನ್ನು 10 ಲಕ್ಷ ರೂ.ಗೆ ಖರೀದಿಸಿತ್ತು.