2022ರ ವರ್ಷವು ವೃತ್ತಿಜೀವನದ ದೃಷ್ಟಿಯಿಂದ ರಣವೀರ್ ಸಿಂಗ್‌ಗೆ ಉತ್ತಮವಾಗಿಲ್ಲ. ರಣವೀರ್ 83. ಜಯೇಶ್‌ಭಾಯ್ ಜೋರ್ದಾರ್ ಮತ್ತು ಸರ್ಕಸ್ ನಂತಹ ಫ್ಲಾಪ್ ಸಿನಿಮಾಗಳನ್ನು ನೀಡಿದರು. ಮತ್ತೊಂದೆಡೆ, ಅವರು ನಗ್ನ ಛಾಯಾಚಿತ್ರಗಳು ಮತ್ತು ಇತರ ಘಟನೆಗಳ ಬಗ್ಗೆ ಚರ್ಚೆಯಲ್ಲಿದ್ದರು. ಕ್ರೋಲ್ ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನ ವರದಿಯ ಪ್ರಕಾರ, ರಣವೀರ್ ಅವರ ಬ್ರ್ಯಾಂಡ್ ಮೌಲ್ಯ 2022ರಲ್ಲಿ $181.7 ಮಿಲಿಯನ್ ಇದೆಯಂತೆ. ಈ ಮೂಲಕ ಅವರೇ ಅಗ್ರಸ್ಥಾನದಲ್ಲಿದ್ದಾರೆ.