Rohit Sharma: ಮತ್ತೆ ಬ್ಯಾಟ್ ಕೈಗೆತ್ತಿಕೊಂಡ ರೋಹಿತ್ ಶರ್ಮಾ; ಈ ಬಾರಿ ಘರ್ಜಿಸೋದು ಖಚಿತ!
ಕೊರೊನಾ ಸೋಂಕಿನಿಂದಾಗಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟೆಸ್ಟ್ ಪಂದ್ಯದಿಂದ ದೂರವಿದ್ದಿದ್ದು ಗೊತ್ತೇ ಇದೆ. ಇದೀಗ ಕೊರೊನಾದಿಂದ ಚೇತರಿಸಿಕೊಂಡ ರೋಹಿತ್ ಶರ್ಮಾ ಮತ್ತೆ ಬ್ಯಾಟ್ ಕೈಗೆತ್ತಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬಲಿಷ್ಠವಾಗಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 257 ರನ್ ಮುನ್ನಡೆಯಲ್ಲಿದೆ. ಈ ಪಂದ್ಯವನ್ನು ಭಾರತ ಡ್ರಾದಲ್ಲಿ ಅಂತ್ಯಗೊಳಿಸಿದರೂ ಭಾರತ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಹೊಸ ಇತಿಹಾಸ ಬರೆಯಲಿದೆ.
2/ 7
ಕೊರೊನಾ ಸೋಂಕಿನಿಂದಾಗಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈ ಟೆಸ್ಟ್ ಪಂದ್ಯದಿಂದ ದೂರ ಉಳಿದಿರುವುದು ಗೊತ್ತೇ ಇದೆ.
3/ 7
ಕೆಲವು ದಿನಗಳ ಹಿಂದೆ, ರೋಹಿತ್ ಶರ್ಮಾ ಕೊರೊನಾದಿಂದ ಗುಣಮುಖರಾಗಿದ್ದರು. ಕೊರೊನಾದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಹಿಟ್ ಮ್ಯಾನ್ ಮತ್ತೆ ಬ್ಯಾಟ್ ಕೈಗೆತ್ತಿಕೊಂಡಿದ್ದಾರೆ.
4/ 7
ರೋಹಿತ್ ಶರ್ಮಾ ಮತ್ತೆ ಕಠಿಣ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. 7ರಂದು ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಯನ್ನು ಗಮನದಲ್ಲಿಟ್ಟುಕೊಂಡು ರೋಹಿತ್ ಅಭ್ಯಾಸವನ್ನು ತೀವ್ರಗೊಳಿಸಿದ್ದಾರೆ.
5/ 7
ಕೆಲ ಸಮಯದಿಂದ ಹಿಟ್ಮ್ಯಾನ್ ಕಳಪೆ ಫಾರ್ಮ್ನಲ್ಲಿ ಇರುವುದು ಗೊತ್ತೇ ಇದೆ. ನಾಯಕನಾಗಿ, ಆಟಗಾರನಾಗಿ ಮಿಂಚಲು ಸಾಧ್ಯವಾಗುತ್ತಿಲ್ಲ. ಆದರೆ ಇಂಗ್ಲೆಂಡ್ ಪ್ರವಾಸದಲ್ಲಿ ಹಿಂದಿನ ಫಾರ್ಮ್ಗೆ ಮರಳುವ ಸಂಕಲ್ಪ ತೊಟ್ಟಿದ್ದಾರೆ.
6/ 7
ರೋಹಿತ್ ಶರ್ಮಾ ಭಾನುವಾರ ನೆಟ್ನಲ್ಲಿ ಕಠಿಣ ಪರಿಶ್ರಮಪಟ್ಟರು. ಅವರು ವಿಶೇಷವಾಗಿ ತಮ್ಮ ಫಾರ್ಮ್ ಗುಣಪಡಿಸಿಕೊಳ್ಳುವತ್ತ ಗಮನಹರಿಸಿದ್ದಾರೆ.
7/ 7
ಗುರುವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಸಂಪೂರ್ಣ ಫಿಟ್ನೆಸ್ನೊಂದಿಗೆ ಕಣಕ್ಕೆ ಇಳಿಯಲಿದ್ದಾರೆ.