ಭಾರತವು T20 ಗಳಲ್ಲಿ ಐಸಿಸಿ ಸದಸ್ಯತ್ವ ಹೊಂದಿರುವ ದೇಶದ ವಿರುದ್ಧ ಅತಿದೊಡ್ಡ ಗೆಲುವು ದಾಖಲಿಸಿದೆ. 2018ರಲ್ಲಿ ಐರ್ಲೆಂಡ್ ವಿರುದ್ಧ ಭಾರತ 143 ರನ್‌ಗಳ ಜಯ ಸಾಧಿಸಿತ್ತು. 2018ರಲ್ಲಿ ಪಾಕಿಸ್ತಾನ ವೆಸ್ಟ್ ಇಂಡೀಸ್ ವಿರುದ್ಧ 143 ರನ್‌ಗಳಿಂದ ಗೆದ್ದಿತ್ತು. ಇತ್ತೀಚೆಗಷ್ಟೇ ಕಿವೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 168 ರನ್ ಗಳಿಂದ ಗೆದ್ದು ವಿಶ್ವದಾಖಲೆ ನಿರ್ಮಿಸಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ 12.1 ಓವರ್ ಗಳಲ್ಲಿ ಕೇವಲ 66 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಭಾರತದ ವಿರುದ್ಧ ಟಿ20ಯಲ್ಲಿ ಕಿವೀಸ್ ಅತಿ ಕಡಿಮೆ ಸ್ಕೋರ್ ಗಳಿಸಿದ ಕೆಟ್ಟ ದಾಖಲೆ ಬರೆದಿದೆ. 2018ರಲ್ಲಿ ಡಬ್ಲಿನ್‌ನಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್ 70 ರನ್‌ಗಳಿಗೆ ಆಲೌಟ್ ಆಗಿತ್ತು. ಈ ದಾಖಲೆಯನ್ನು ನ್ಯೂಜಿಲೆಂಡ್ ಹಿಂದಿಕ್ಕಿದೆ.
ಕಿವೀಸ್ ವಿರುದ್ಧದ ಮೂರನೇ ಟಿ20ಯಲ್ಲಿ ಶುಭಮನ್ ಗಿಲ್ 63 ಎಸೆತಗಳಲ್ಲಿ 126 ರನ್ ಗಳಿಸಿ ಭರ್ಜರಿ ಶತಕ ಸಿಡಿಸಿದರು. ಅವರು 12 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಸಿಡಿಸಿ ಅಬ್ಬರಿಸಿದರು. ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಸೃಷ್ಟಿಸಿದ್ದಾರೆ. ವಿರಾಟ್ ಕೊಹ್ಲಿ ಕಳೆದ ವರ್ಷ ಅಫ್ಘಾನಿಸ್ತಾನ ವಿರುದ್ಧ 122 ರನ್ ಗಳಿಸಿದ್ದ ದಾಖಲೆಯನ್ನು ಈ ಮೂಲಕ ಮುರಿದರು.