ಇದುವರೆಗೆ 10 ತಂಡಗಳು ಕನಿಷ್ಠ ಒಂದು ಹಗಲು-ರಾತ್ರಿ ಟೆಸ್ಟ್ ಆಡಿವೆ. ಆಸ್ಟ್ರೇಲಿಯಾ ಹೊರತುಪಡಿಸಿ ಉಳಿದೆಲ್ಲ ತಂಡಗಳು ಸೋತಿವೆ. ಆಸ್ಟ್ರೇಲಿಯಾ ಇದುವರೆಗೆ 10 ಹಗಲು-ರಾತ್ರಿ ಟೆಸ್ಟ್‌ಗಳನ್ನು ಆಡಿದೆ ಮತ್ತು ಎಲ್ಲವನ್ನೂ ಗೆದ್ದಿದೆ. ಉಳಿದಂತೆ ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ತಂಡವು ಇದುವರೆಗೆ ಒಂದೇ ಒಂದು ಪಿಂಕ್ ಬಾಲ್ ಟೆಸ್ಟ್ ಅನ್ನು ಗೆದ್ದಿಲ್ಲ.
ಭಾರತ ಇದುವರೆಗೆ ತವರಿನಲ್ಲಿ 2 ಡೇ-ನೈಟ್ ಟೆಸ್ಟ್ ಆಡಿದ್ದು, ಎರಡನ್ನೂ ಗೆದ್ದಿದೆ. 2019ರ ನವೆಂಬರ್‌ನಲ್ಲಿ ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ತಂಡವು ಬಾಂಗ್ಲಾದೇಶವನ್ನು ಇನ್ನಿಂಗ್ಸ್ ಮತ್ತು 46 ರನ್‌ಗಳಿಂದ ಸೋಲಿಸಿತು. ಅಲ್ಲದೇ ಫೆಬ್ರವರಿ 2021 ರಲ್ಲಿ, ಟೀಂ ಇಂಡಿಯಾವು ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ಅನ್ನು 10 ವಿಕೆಟ್‌ಗಳಿಂದ ಸೋಲಿಸಿತು. ಇದಲ್ಲದೆ, ಡಿಸೆಂಬರ್ 2020 ರಲ್ಲಿ ಅಡಿಲೇಡ್‌ನಲ್ಲಿ ತಂಡವು ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್‌ಗಳಿಂದ ಸೋತಿದೆ.
ಶ್ರೀಲಂಕಾ ತಂಡವು ಇದುವರೆಗೆ ಎಲ್ಲಾ ಮೂರು ಹಗಲು-ರಾತ್ರಿ ಟೆಸ್ಟ್‌ಗಳನ್ನು ತವರಿನಲ್ಲಿ ಆಡಿಲ್ಲ. ಆದರೆ 2017ರಲ್ಲಿ ದುಬೈನಲ್ಲಿ ಪಾಕಿಸ್ತಾನ ತಂಡವನ್ನು 68 ರನ್‌ಗಳಿಂದ ಸೋಲಿಸಿದ್ದರು. ನಂತರ ಜೂನ್ 2018 ರಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಅನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಆದರೆ ತಂಡವು 2019 ರ ಜನವರಿಯಲ್ಲಿ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇನ್ನಿಂಗ್ಸ್ ಮತ್ತು 40 ರನ್‌ಗಳಿಂದ ಸೋತಿತು.
ಈಗಾಗಲೇ ಮೊದಲ ಪಂದ್ಯ ಗೆದ್ದಿರುವ ಭಾರತ ತಂಡ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಳ್ಳಲು ಕಾತುರವಾಗಿದೆ. ಈ ನಡುವೆ ತಂಡದಲ್ಲಿ ಕೆಲ ಬದಲಾವಣೆ ಆಗುವ ಸಾಧ್ಯತೆ ಹೆಚ್ಚಿದ್ದು, ಅಕ್ಷರ್ ಪಟೇಲ್ ಮತ್ತೆ ತಂಡಕ್ಕೆ ಮರಳುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಉತ್ತಮ ಲಯದಲ್ಲಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ.
ನಾಳೆ ನಡೆಯಲಿರುವ ಭಾರತ -ಶ್ರೀಲಂಕಾ ಟೆಸ್ಟ್ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಆಗಿರಲಿದ್ದು, ಡೇ ಎಂಡ್ ನೈಟ್ ಟೆಸ್ಟ್ ಆಗಿದೆ. ಅಲ್ಲದೇ ಇದು ಭಾರತದಲ್ಲಿ ನಡೆಯುತ್ತಿರುವ ಎರಡನೇ ಡೇ ಎಂಡ್ ನೈಟ್ ಪಂದ್ಯವಾಗಿರಲಿದೆ. ಈ ಪಂದ್ಯಕ್ಕಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಿದ್ಧಗೊಂಡಿದ್ದು, ಟಿಕೆಟ್ಗಳು ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಮಾರಾಟ ಮಾಡುವುದಾಗಿ ಕೆಎಸ್ ತಿಳಿಸಿದ್ದು, ಶೇ. 100ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದೆ.