ಅಖ್ತರ್ 2002 ರಲ್ಲಿ ನ್ಯೂಜಿಲೆಂಡ್ ವಿರುದ್ಧ 161.3 ಕಿಮೀ ವೇಗದಲ್ಲಿ ವೇಗದ ಚೆಂಡನ್ನು ಬೌಲ್ ಮಾಡಿದ್ದರು. ಈ ದಾಖಲೆ ಇಂದಿಗೂ ಹಾಗೆಯೇ ಇದೆ. ಉಮ್ರಾನ್ ಇದುವರೆಗೆ 5 ಏಕದಿನ ಪಂದ್ಯಗಳಲ್ಲಿ 7 ವಿಕೆಟ್ ಹಾಗೂ 4 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 4 ವಿಕೆಟ್ ಪಡೆದಿದ್ದಾರೆ. ಅವರ ಒಟ್ಟಾರೆ T20 ವೃತ್ತಿಜೀವನವನ್ನು ಗಮನಿಸಿದರೆ, ಅವರು 34 ಪಂದ್ಯಗಳಲ್ಲಿ 23 ರ ಸರಾಸರಿಯಲ್ಲಿ 47 ವಿಕೆಟ್ಗಳನ್ನು ಪಡೆದಿದ್ದಾರೆ. 25 ರನ್ಗೆ 5 ವಿಕೆಟ್ ಪಡೆದದ್ದು ಅತ್ಯುತ್ತಮ ಪ್ರದರ್ಶನ.
ಶ್ರೀಲಂಕಾ ವಿರುದ್ಧದ ಮೊದಲು ಟಿ20 ಪಂದ್ಯದ ಮೂಲಕ ಬೌಲರ್ ಶಿವಂ ಮಾವಿ ಮತ್ತು ಶುಭ್ಮನ್ ಗಿಲ್ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಆದರೆ ಶಿವಂ ಮಾವಿ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಮಿಂಚುವ ಮೂಲಕ ಎಲ್ಲರ ಗಮನ ಸೆಳೆದರು. ಅವರು 4 ಒವರ್ ಬೌಲ್ ಮಾಡಿ 22 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದರು. ಉಳಿದಂತೆ ಉಮ್ರಾನ್ ಮಲ್ಲಿಕ್ ಮತ್ತು ಹರ್ಷಲ್ ಪಟೇಲ್ ತಲಾ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.