ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಆ ಬಳಿಕ ಕೆಎಲ್ ರಾಹುಲ್ ನಾಯಕತ್ವ ವಹಿಸಿಕೊಂಡರು. ಇದೀಗ ರಾಹುಲ್ ಕೆರಿಯರ್ ಕೂಡ ಡೇಂಜರ್ ಝೋನ್ ನಲ್ಲಿದೆ. 2022 ರಲ್ಲಿ ಅವರು 9 ODI ಇನ್ನಿಂಗ್ಸ್ಗಳಲ್ಲಿ 28 ರ ಸರಾಸರಿಯಲ್ಲಿ 251 ರನ್ ಗಳಿಸಿದ್ದರು. 2 ಅರ್ಧಶತಕ ಗಳಿಸಿದರು. ಅತ್ಯುತ್ತಮ ಸ್ಕೋರ್ 73 ರನ್. ಗಳಿಸಿದ್ದರು ಟಿ20 ವಿಶ್ವಕಪ್ನಲ್ಲೂ ಅವರ ಪ್ರದರ್ಶನ ಅಷ್ಟಾಗಿ ಉತ್ತಮವಾಗಿರಲಿಲ್ಲ.
ಶ್ರೀಲಂಕಾ ವಿರುದ್ಧ ಪ್ರಕಟಿಸಲಾದ ಟಿ20 ತಂಡದಲ್ಲಿ ಕೆಎಲ್ ರಾಹುಲ್ ಸ್ಥಾನ ಪಡೆದಿರಲಿಲ್ಲ. ಅಲ್ಲದೆ.. ಏಕದಿನ ಸರಣಿಯಲ್ಲಿ ಉಪ ನಾಯಕತ್ವದಿಂದ ತೆಗೆದುಹಾಕಲಾಗಿದೆ. ಅಂದರೆ ಬಿಸಿಸಿಐ ರಾಹುಲ್ ಗೆ ಒಂದು ರೀತಿಯಲ್ಲಿ ಎಚ್ಚರಿಕೆ ನೀಡಿದೆ. ರಾಹುಲ್ ಕೇವಲ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ತಂಡದಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹ. ಕೆಎಲ್ ರಾಹುಲ್ ಗೆ ಇದು ಕೊನೆಯ ಅವಕಾಶ. ಇಶಾನ್ ಕಿಶನ್ ಎರಡನೇ ವಿಕೆಟ್ ಕೀಪರ್. ಇಲ್ಲೂ ಇಶಾನ್ ಮೇಲುಗೈ ಸಾಧಿಸಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ದ್ವಿಶತಕ ಬಾರಿಸಿದ್ದರು.
24 ವರ್ಷದ ಇಶಾನ್ ಕಿಶನ್ 2022ರಲ್ಲಿ 7 ODIಗಳಲ್ಲಿ 60ರ ಸರಾಸರಿಯಲ್ಲಿ 417 ರನ್ ಗಳಿಸಿದ್ದರು. ಶತಕ ಹಾಗೂ 2 ಅರ್ಧ ಶತಕ ಬಾರಿಸಿದ್ದರು. 210 ರನ್ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಅಂದರೆ ಅವರು ಪ್ರತಿ ಎರಡನೇ ಇನ್ನಿಂಗ್ಸ್ನಲ್ಲಿ 50ಕ್ಕೂ ಹೆಚ್ಚು ರನ್ ಗಳಿಸುತ್ತಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೂಡ ಅದ್ಭುತವಾಗಿದೆ. ಅವರು 110 ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸುತ್ತಿದ್ದಾರೆ.
ವೇಗದ ಬೌಲರ್ ಭುವನೇಶ್ವರ್ ಕುಮಾರ್ ಕೂಡ ಅಪಾಯದ ವಲಯದಲ್ಲಿದ್ದಾರೆ. ಭುವಿ, ಕಳೆದ ವರ್ಷ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ್ದರು. ಆದರೆ ಕಳಪೆ ಪ್ರದರ್ಶನದಿಂದಾಗಿ ಶ್ರೀಲಂಕಾ ವಿರುದ್ಧದ ಎರಡು ಸರಣಿಯಿಂದ ಹೊರಗುಳಿದಿದ್ದರು. 32ರ ಹರೆಯದ ಭುವನೇಶ್ವರ್ 2022ರಲ್ಲಿ ಕೇವಲ 2 ಏಕದಿನ ಪಂದ್ಯಗಳಲ್ಲಿ ಮಾತ್ರ ಆಡಿದ್ದಾರೆ. ಅಲ್ಲದೇ ಅದೇ ಸಮಯದಲ್ಲಿ, ಅವರು 32 T20I ಗಳಲ್ಲಿ 37 ವಿಕೆಟ್ ಪಡೆದಿದ್ದಾರೆ.
ಇನ್ನು, 25 ವರ್ಷದ ರಿಷಭ್ ಪಂತ್ ಸಹ ಟೆಸ್ಟ್ ಮಾದರಿ ಹೊರತುಪಡಿಸಿ ಏಕದಿನ ಮತ್ತು ಟಿ20 ಮಾದರಿಯಲ್ಲಿ ಅಷ್ಟಾಗಿ ಮಿಂಚುತ್ತಿಲ್ಲ. ಅಲ್ಲದೇ ಕಳೆದ ವಾಋ ಭೀಕರ ಅಪಘಾತಕ್ಕೆ ಪಂತ್ ಗಂಭೀರ ಗಾಯವಾಗಿದ್ದು, ಅವರು ಈ ವರ್ಷ ಮತ್ತೆ ಕ್ರಿಕೆಟ್ಗೆ ಮರಳುವುದು ಅನುಮಾನವಾಗಿದೆ. ಹೀಗಾಗಿ ಅವರ ಸ್ಥಾನದಲ್ಲಿ ಬೇರೆ ಯಾವುದೇ ಆಟಗಾರ ಮಿಂಚಿದ್ದಲ್ಲಿ ಪಂತ್ ಸ್ಥಾನ ಅಪಾಯದಲ್ಲಿದೆ ಎಂದು ಹೇಳಬಹುದು.