ತಿರುವನಂತಪುರಂನಲ್ಲಿರುವ ಗ್ರೀನ್ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಿನ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
2/ 8
ಭಾರತದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ತಿರುವನಂತಪುರದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವಾಗ ತಮ್ಮ ODI ವೃತ್ತಿಜೀವನದ 2ನೇ ಶತಕವನ್ನು ಸಿಡಿಸಿದರು. ಅವರು 89 ಎಸೆತಗಳಲ್ಲಿ 112.35 ಸ್ಟ್ರೈಕ್ ರೇಟ್ನಲ್ಲಿ 100 ರನ್ ಗಳಿಸಿದರು. ಅಂತಿಮವಾಗಿ ಶುಭ್ಮನ್ ಗಿಲ್ 97 ಎಸೆತದಲ್ಲಿ 2 ಸಿಕ್ಸ್ ಮತ್ತು 14 ಫೋರ್ ಮೂಲಕ 116 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
3/ 8
ವಿರಾಟ್ ಕೊಹ್ಲಿ ಅವರ ಬ್ಯಾಟ್ ಮತ್ತೆ ಅಬ್ಬರಿಸಿದ್ದು, ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಕೊಹ್ಲಿ ಏಕದಿನ ಮಾದರಿಯಲ್ಲಿ 46ನೇ ಶತಕ ಸಿಡಿಸಿದ್ದಾರೆ.
4/ 8
ವಿರಾಟ್ ಕೊಹ್ಲಿ ಇಂದು ಶ್ರೀಲಂಕಾ ವಿರುದ್ಧ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ 85 ಎಸೆತದಲ್ಲಿ 101 ರನ್ ಗಳಿಸಿ ಆಡುತ್ತಿದ್ದಾರೆ. ಈ ಮೂಲಕ ಕೊಹ್ಲಿ ಈವರೆಗೂ ಒಟ್ಟು 74 ಶತಕ ಸಿಡಿಸಿದ್ದಾರೆ.
5/ 8
ವಿರಾಟ್ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದಾರೆ. ಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿಯೂ ಕಿಂಗ್ ಕೊಹ್ಲಿ ಶತಕಸ ಸಿಡಿಸಿ ಅಬ್ಬರಿಸಿದ್ದರು. ಇದೀಗ ಅಂತಿಮ ಪಂದ್ಯದಲ್ಲಿಯೂ ಮತ್ತೊಮ್ಮೆ ಕೊಹ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ.
6/ 8
ಇನ್ನು, ಪಂದ್ಯದ ವೇಳೆ ಕೊಹ್ಲಿ ಬಾರಿಸಿದ್ದ ಬೌಂಡರಿಯನ್ನು ತಡೆಯಲು ಹೋಗಿ ಶ್ರೀಲಂಕಾದ ಇಬ್ಬರು ಆಟಗಾರರು ಮುಖಾಮುಖಿ ಡಿಕ್ಕಿ ಹೊಡೆದು ಮೈದಾದಲ್ಲಿಯೇ ಗಾಯಗೊಂಡಿದ್ದಾರೆ. ಅಲ್ಲದೇ ಬೌಂಡರಿಯಲ್ಲಿ ಪರಸ್ಪರ ಡಿಕ್ಕಿ ಹೊಡೆದ ನಂತರ, ಇಬ್ಬರೂ ಆಟಗಾರರನ್ನು ಸ್ಟ್ರೆಚರ್ನಲ್ಲಿ ಮೈದಾನದಿಂದ ಹೊರಗೆ ಕರೆದೊಯ್ಯಲಾಗಿದೆ.
7/ 8
ಶ್ರೀಲಂಕಾದ ಇಬ್ಬರು ಆಟಗಾರರಾದ ಅಶೆನ್ ಬಂಡಾರಾ ಮತ್ತು ಜೆಫ್ರಿ ವಾಂಡರ್ಸೆ ವೇಗವಾಗಿ ಓಡುತ್ತಿರುವಾಗ ಒಬ್ಬರಿಗೊಬ್ಬರು ಡಿಕ್ಕಿ ಹೊಡೆದುಕೊಂಡಿದ್ದಾರೆ. ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದರಿಂದ ಪಂದ್ಯವನ್ನು ಬಹಳ ಹೊತ್ತು ನಿಲ್ಲಿಸಬೇಕಾಯಿತು. ಸದ್ಯ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.