ಟಿ20 ಮಾದರಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ದೀಪಕ್ ಹೂಡಾ, ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್ ರಂತಹ ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಈ ಲಿಸ್ಟ್ನಲ್ಲಿ ಟೀಂ ಇಂಡಿಯಾ ಪರ ಟಿ20 ಮಾದರಿ ಕ್ರಿಕೆಟ್ಗೆ ಪಾದಾರ್ಪಣೆ ಮಾಡದ ಆಟಗಾರನೋರ್ವನ ಹೆಸರು ಕೂಡ ಇದೆ. ಆತ ಮತ್ಯಾರು ಅಲ್ಲ, ಯುವ ಆಟಗಾರ ಶುಭ್ ಮನ್ ಗಿಲ್.
ಶುಭ್ಮನ್ ಗಿಲ್ ಸದ್ಯ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಈ ವರ್ಷ ಏಕದಿನ ಮಾದರಿ ಕ್ರಿಕೆಟ್ನಲ್ಲಿ ಬ್ಯಾಕ್ ಟು ಬ್ಯಾಕ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಮೊದಲು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ, ಗಿಲ್ ಮೂರು ಪಂದ್ಯಗಳಲ್ಲಿ 102ರ ಸರಾಸರಿಯಲ್ಲಿ 205 ರನ್ ಗಳಿಸಿದ್ದಾರೆ. ಆ ಬಳಿಕ ಜಿಂಬಾಬ್ವೆ ಪ್ರವಾಸದಲ್ಲಿ ಮೂರು ಪಂದ್ಯದಲ್ಲಿ 122ರ ಸರಾಸರಿಯಲ್ಲಿ 245 ರನ್ ಗಳಿಸಿದ್ದರು.
ಟಿ20 ವಿಶ್ವಕಪ್ ಸೆಮಿಸ್ನಲ್ಲಿ ಸೋಲುಂಡ ಟೀಂ ಇಂಡಿಯಾ ಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. ಪರಿಣಾಮ ಸೀಮಿತ ಓವರ್ಗಳ ಮಾದರಿ ಕ್ರಿಕೆಟ್ನ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ನ್ಯೂಜಿಲೆಂಡ್ ಪ್ರವಾಸದ ಟೂರ್ನಿಯಲ್ಲಿ ಗಿಲ್ ಮೊದಲ ಬಾರಿಗೆ ತಂಡದಲ್ಲಿ ಸ್ಥಾನದಲ್ಲಿ ಸ್ಥಾನ ಪಡೆದುಕೊಂಡರೂ, ಆಡುವ 11ರ ಬಳಗದಲ್ಲಿ ಸ್ಥಾನ ಸಿಗದೆ ಹಿಂದಿರುಗಿದ್ದರು.