Virat Kohli: 'ವಿರಾಟ' ಶತಕದ ಹಿಂದಿದ್ಯಂತೆ ಆಹಾರದ ಗುಟ್ಟು! ಫಿಟ್ನೆಸ್ ಸೀಕ್ರೆಟ್ ಬಿಚ್ಚಿಟ್ಟರು ಕಿಂಗ್ ಕೊಹ್ಲಿ
Virat Kohli: ಶ್ರೀಲಂಕಾ ವಿರುದ್ಧ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಿರುಸಿನ ಶತಕ ಸಿಡಿಸಿದ್ದಾರೆ. ಶತಕದ ನಂತರ ಮಾತನಾಡಿದ ಕೊಹ್ಲಿ ತಮ್ಮ ಡಯಟ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಗುವಾಹಟಿಯ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ (ACA Stadium) ನಡೆದ ಭಾರತ ಮತ್ತು ಶ್ರೀಲಂಕಾ (IND vs SL ODI) ನಡುವಿನ 3 ಪಂದ್ಯಗಳ ಏಕದಿನ ಸರಣಿಯು ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಮಾಡಿತು. ಈ ಮೂಲಕ ಲಂಕಾಗೆ 374 ರನ್ಗಳ ಟಾರ್ಗೆಟ್ ನೀಡಿತ್ತು.
2/ 9
ಈ ಬೃಹತ್ ಟಾರ್ಗೆಟ್ ನೀಡುವಲ್ಲಿ ಭಾರತದ ಪರ ಕೊಹ್ಲಿಯ ಆಕಷ್ಟಕ ಶತಕದ ಸಯಾಹವು ಬಹಳವಾಗಿತ್ತು. ಅಲ್ಲದೇ ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಅವರ ಅದ್ಭುತ ಇನ್ನಿಂಗ್ಸ್ ಸಹ ಸಹಾಯಕವಾಯಿತು.
3/ 9
ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಕ್ರಿಕೆಟ್ ಆಟಗಾರರೆಂದು ಪರಿಗಣಿಸಲ್ಪಟ್ಟಿದ್ದಾರೆ. ಕೊಹ್ಲಿ ತಮ್ಮ ಆರೋಗ್ಯದ ಬಗ್ಗೆ ಬಹಳ ಜಾಗೃತರಾಗಿದ್ದಾರೆ. ಫಿಟ್ ಆಗಿರಲು ಕೊಹ್ಲಿ ಗಂಟೆಗಟ್ಟಲೆ ಜಿಮ್ನಲ್ಲಿ ಬೆವರು ಸುರಿಸುತ್ತಾರೆ. ಇದರ ಕುರಿತ ಆಸಕ್ತಿಕರ ಮಾಹಿತಿಯನ್ನು ಕೊಹ್ಲಿ ಇಂದು ಶತಕದ ಬಳಿಕ ಮಾತನಾಡಿದ್ದಾರೆ.
4/ 9
ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ 87 ಎಸೆತಗಳಲ್ಲಿ 113 ರನ್ ಗಳಿಸಿದರು. 80 ಎಸೆತಗಳಲ್ಲಿ ಶತಕ ಪೂರೈಸಿದರು. ಅವರು ತಮ್ಮ ಅತ್ಯುತ್ತಮ ಇನ್ನಿಂಗ್ಸ್ನಲ್ಲಿ 12 ಬೌಂಡರಿ ಮತ್ತು ಒಂದು ಸಿಕ್ಸರ್ಗಳು ಸೇರಿದ್ದವು.
5/ 9
ಶತಕದ ಬಳಿಕ ಕೊಹ್ಲಿ ತಮ್ಮ ಡಯಟ್ ಬಗ್ಗೆ ಮಾತನಾಡಿದ್ದು, ನಾನು ವಿರಾಮದಲ್ಲಿದೆ. ಆದರೆ ಈ ಸಮಯದಲ್ಲಿ ನಾನು ಏನು ತಿನ್ನಬೇಕೆಂದು ನನಗೆ ಚೆನ್ನಾಗಿ ತಿಳಿದಿತ್ತು. ನಾನು ಇರುವ ವಯಸ್ಸಿನಲ್ಲಿ ಡಯಟ್ ಪ್ರಮುಖ ಪಾತ್ರ ವಹಿಸುತ್ತದೆ. ಇದು ತಂಡಕ್ಕೆ 100 ಪ್ರತಿಶತ ನೀಡಲು ನನಗೆ ಸಹಾಯ ಮಾಡುತ್ತದೆ‘ ಎಂದು ಹೇಳಿದ್ದಾರೆ.
6/ 9
ಇದು ಕೊಹ್ಲಿ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ 73ನೇ ಶತಕವಾಗಿದೆ. ಈ ವೇಳೆ ಅವರು ಏಕದಿನದಲ್ಲಿ ಶ್ರೀಲಂಕಾ ವಿರುದ್ಧ ಸಚಿನ್ ತೆಂಡೂಲ್ಕರ್ ಅವರ 8 ಶತಕಗಳ ದಾಖಲೆಯನ್ನು ಮುರಿದರು.
7/ 9
ಅಲ್ಲದೇ ಈ ವೇಳೆ ಕೊಹ್ಲಿ ತಾನು ಹೆಚ್ಚಿನ ಸಿಹಿಯನ್ನು ತಿನ್ನುವುದನ್ನು ನಿಲ್ಲಿಸಿದ್ದೇನೆ. ಇದರಿಂದಾಗಿ ಹೆಚ್ಚು ಫಿಟ್ ಆಗಿರಲು ಸಹಾಯಕವಾಗಿದೆ ಎಂದು ತಮ್ಮ ಫಿಟ್ನೆಸ್ ಕುರಿತು ಮಾಹಿತಿ ನೀಡಿದ್ದಾರೆ. 34ನೇ ವಯಸ್ಸಿನಲ್ಲಿಯೂ ಕೊಹ್ಲಿ ಸಖತ್ ಫಿಟ್ ಆಂಡ್ ಫೈನ್ ಆಗಿದ್ದಾರೆ.
8/ 9
ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳಿರುವುದು ಟೀಂ ಇಂಡಿಯಾಕ್ಕೆ ಶುಭ ಸೂಚನೆಯಾಗಿದೆ. ಈ ವರ್ಷದ ಕೊನೆಯಲ್ಲಿ ಭಾರತ ತನ್ನ ತವರಿನಲ್ಲಿ ಏಕದಿನ ವಿಶ್ವಕಪ್ ಆಡಬೇಕಿದೆ. ಅದಕ್ಕೂ ಮುನ್ನ ಟೀಂ ಇಂಡಿಯಾ ಏಷ್ಯಾಕಪ್ ನಲ್ಲಿ ಪಾಲ್ಗೊಳ್ಳಲಿದೆ. ಏಷ್ಯಾಕಪ್ ಕೂಡ ಏಕದಿನ ಮಾದರಿಗೆ ಮರಳಿದೆ.
9/ 9
ಇನ್ನು, ವಿರಾಟ್ ಕೊಹ್ಲಿ ಈ ಹಿಂದೆ ಭಾರತದಲ್ಲಿ 8 ಮಾರ್ಚ್ 2019 ರಂದು ರಾಂಚಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕವನ್ನು ಸಿಡಿಸಿದ್ದರು. ಅಂದರೆ 1043 ದಿನಗಳ ಬಳಿಕ ಕೊಹ್ಲಿ ತವರಿನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು.