ಶ್ರೀಲಂಕಾ ವಿರುದ್ಧದ ಮೂರನೇ ಟಿ20ಯಲ್ಲಿ ಸೂರ್ಯಕುಮಾರ್ ಯಾದವ್ (51 ಎಸೆತಗಳಲ್ಲಿ ಔಟಾಗದೆ 112; 7 ಬೌಂಡರಿ, 9 ಸಿಕ್ಸರ್) ಸೂಪರ್ ಶತಕ ಸಿಡಿಸಿದ್ದರು. ಇದು ಸೂರ್ಯ ಅವರ ಮೂರನೇ ಟಿ20 ಶತಕವಾಗಿದೆ. ಈ ಇನ್ನಿಂಗ್ಸ್ನಲ್ಲೂ ಅವರು ತಮ್ಮ 360 ಡಿಗ್ರಿ ಮಾರ್ಕ್ ಶಾಟ್ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಈ ಮೂಲಕ ಹಲವು ದಾಖಲೆಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.
ಟಿ20ಯಲ್ಲಿ ರೋಹಿತ್ ನಂತರ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಸೂರ್ಯಕುಮಾರ್ ಯಾದವ್ ಹೊಂದಿದ್ದಾರೆ. ರೋಹಿತ್ 4 ಶತಕ ಬಾರಿಸಿದರೆ, ಸೂರ್ಯ ಅವರ ಖಾತೆಯಲ್ಲಿ ಈಗಾಗಲೇ 3 ಶತಕಗಳಿವೆ. ಸೂರ್ಯ ಅವರ ಅಗ್ರೆಸಿವ್ ನೆಸ್ ನೋಡಿದರೆ ರೋಹಿತ್ ದಾಖಲೆ ಮುರಿಯುವುದು ಖಚಿತ. ಟಿ20ಯಲ್ಲಿ 3 ಶತಕಗಳನ್ನು ಸಿಡಿಸಿದ ಮೊದಲ ನಾನ್ ಓಪನರ್ ಸೂರ್ಯಕುಮಾರ್ ಆಗಿದ್ದಾರೆ.