ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಹಳೆಯ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ತಿರುವನಂತಪುರಂ ಏಕದಿನ ಪಂದ್ಯದಲ್ಲಿ, ಅಭಿಮಾನಿಗಳು ಮತ್ತೊಮ್ಮೆ ಅದೇ ಆಕ್ರಮಣಕಾರಿ ಕೊಹ್ಲಿಯನ್ನು ನೋಡಿದರು, ಅವರ ಬ್ಯಾಟ್ನಲ್ಲಿ ರನ್ ಮಳೆಯೇ ಸುರಿಯಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 150ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ನೊಂದಿಗೆ ರನ್ ಗಳಿಸಿದ್ದು ವಿಶೇಷವಾಗಿತ್ತು.
ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳುವುದರ ಹಿಂದೆ ಅವರ 15 ಸಂಖ್ಯೆಯ ಸಿಕ್ರೇಟ್ ವಿಶೇಷ ಕೊಡುಗೆಯನ್ನು ಹೊಂದಿದೆ. ಜನವರಿ 15ರ ದಿನಾಂಕ ವಿರಾಟ್ ಕೊಹ್ಲಿಗೆ ಬಹಳ ವಿಶೇಷ ದಿನ. ಶ್ರೀಲಂಕಾ ತಂಡಕ್ಕಿಂತ ಮೊದಲು, ವಿರಾಟ್ ಈ ದಿನಾಂಕದಂದು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧವೂ ಶತಕ ಗಳಿಸಿದ್ದಾರೆ. ಜನವರಿ 15 ರಂದು ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ್ದು ಇದು ನಾಲ್ಕನೇ ಬಾರಿ.