ಕೊಹ್ಲಿ ಪ್ರಸ್ತುತ 268 ಏಕದಿನ ಪಂದ್ಯಗಳಲ್ಲಿ 12,754 ರನ್ ಗಳಿಸಿದ್ದಾರೆ. ಅವರು ಸಚಿನ್ಗಿಂತ 5,672 ರನ್ ಹಿಂದೆ ಇದ್ದಾರೆ. ಸದ್ಯ ಕೊಹ್ಲಿ ವಯಸ್ಸು 34 ವರ್ಷ. ಇನ್ನು ನಾಲ್ಕು ವರ್ಷ ಕ್ರಿಕೆಟ್ ಆಡಲು ಅವಕಾಶವಿದೆ. ಸಚಿನ್ ದಾಖಲೆಯನ್ನು ದಾಟಬೇಕಾದರೆ ಕೊಹ್ಲಿ ಪ್ರತಿ ವರ್ಷ 1000ಕ್ಕೂ ಹೆಚ್ಚು ರನ್ ಗಳಿಸಬೇಕು. ಹಾಗಾದಾಗ ಮಾತ್ರ ಸಚಿನ್ ದಾಖಲೆ ಮುರಿಯುವ ಅವಕಾಶ ಸಿಗಲಿದೆ.