ಏಷ್ಯಾಕಪ್ ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸಿ ಫಾರ್ಮ್ ಗೆ ಬಂದಿರುವ ಕೊಹ್ಲಿ ಶತಕಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಕೊಹ್ಲಿ ಏಕದಿನದಲ್ಲಿ 45ನೇ ಶತಕ ಪೂರೈಸಿದ್ದರು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಏಕದಿನದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರಾಗಿದ್ದಾರೆ.
ಸಚಿನ್ ತಮ್ಮ ವೃತ್ತಿ ಜೀವನದಲ್ಲಿ 49 ODI ಶತಕಗಳನ್ನು ಗಳಿಸಿದ್ದಾರೆ. ಹಲವು ಮಾಜಿ ಕ್ರಿಕೆಟಿಗರು ಕೊಹ್ಲಿ ಶತಕಕ್ಕೆ ಅಭಿಮಾನಿಗಳ ಜೊತೆಗೆ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ. ಅವರನ್ನು ಸಚಿನ್ಗೆ ಹೋಲಿಸಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಆದರೆ ಭಾರತದ ಮಾಜಿ ಓಪನರ್ ಗೌತಮ್ ಗಂಭೀರ್ ಕೊಹ್ಲಿಯನ್ನು ವ್ಯಂಗ್ಯವಾಡಿದ್ದಾರೆ. ಕೊಹ್ಲಿಯನ್ನು ಸಚಿನ್ ಜೊತೆ ಹೋಲಿಕೆ ಮಾಡಬೇಡಿ ಎಂದು ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಸಲ್ಮಾನ್ ಬಟ್. ‘ಏಷ್ಯಾ ಕಪ್ನಲ್ಲಿ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸಿದ್ದಾರೆ. ಅಫ್ಘಾನಿಸ್ತಾನವು ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿದೆ. ಆದರೆ, ಕೆಲವರು ವಿರಾಟ್ ಕೊಹ್ಲಿ ದುರ್ಬಲ ತಂಡದ ಎದುರು ಮಾತ್ರ ಶತಕ ಸಿಡಿಸುತ್ತಾರೆ ಎಂದು ಟೀಕಿಸುತ್ತಾರೆ. ಆದರೆ ಇದು ನನಗೆ ಅರ್ಥವಾಗುತ್ತಿಲ್ಲ. ವಿರಾಟ್ ಕೊಹ್ಲಿ 73 ಬಾರಿ ಶತಕ ಬಾರಿಸಿರುವ ಕ್ರಿಕೆಟ್ ಪ್ರತಿಭೆ. ಇಂತಹ ಅದ್ಭುತ ಆಟಗಾರನ ಬಗ್ಗೆ ಏಕೆ ಟೀಕಿಸುತ್ತಾರೆ ಎಂದು ತಿಳಿದಿಲ್ಲ‘ ಎಂದು ಸಲ್ಮಾನ್ ಪ್ರತಿಕ್ರಿಯಿಸಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಕೊಹ್ಲಿಯ ಫಾರ್ಮ್ಗಾಗಿ ಪರದಾಡುತ್ತಿರುವಾಗ ಇಂತಹ ಇನ್ನಿಂಗ್ಸ್ ಕ್ರಿಕೆಟಿಗನನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಕೊಹ್ಲಿ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದರು. ಸಲ್ಮಾನ್ ಬಟ್ ಕಾಮೆಂಟ್ಗಳು ಗೌತಮ್ ಗಂಭೀರ್ಗೆ ಕೌಂಟರ್ ಆಗಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಗಂಭೀರ್ ವಿರುದ್ಧ ಕೊಹ್ಲಿ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ.