IND vs SL 2nd ODI: ಭಾರತ-ಲಂಕಾ 2ನೇ ಪಂದ್ಯದ ಟಿಕೆಟ್ಗೆ ಭಾರಿ ಬೇಡಿಕೆ, ಕೊಹ್ಲಿ ಶತಕದ ನಂತ್ರ ಹೆಚ್ಚಾಯ್ತು ಡಿಮ್ಯಾಂಡ್!
IND vs SL 2nd ODI: ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ODI ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ. ಮೊದಲ ಪಂದ್ಯದ ಗೆಲುವಿನ ನಂತರ 2ನೇ ಪಂದ್ಯದ ಟಿಕೆಟ್ಗೆ ಭರ್ಜರಿ ಬೇಡಿಕೆ ಬಂದಿದೆ.
ಭಾರತ ಮತ್ತು ಶ್ರೀಲಂಕಾ (IND vs SL ODI) ನಡುವಿನ ಪ್ರಸ್ತಾವಿತ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಭಾರತ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
2/ 8
ಇನ್ನು, ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ODI ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ. ಈಗಾಗಲೇ ಕೋಲ್ಕತ್ತಾ ODI ಗಾಗಿ ಟಿಕೆಟ್ಗಳು ಬಹುತೇಕ ಮಾರಾಟವಾಗಿವೆ.
3/ 8
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಜನವರಿ 12ರಂದು ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ODI ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಕೋಲ್ಕತ್ತಾದಲ್ಲಿ ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳು ಇರುವುದರಿಂದ ನಾಳಿನ ಆಟವು ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆಯಿದೆ.
4/ 8
ಟಿಕೆಟ್ಗಳು ಈಗ ಲಭ್ಯವಿವೆ ಮತ್ತು ಅವುಗಳ ಖರೀದಿಗೆ ಆನ್ಲೈನ್ ಮಾರಾಟವನ್ನು ಮಾತ್ರ ಲಭ್ಯವಿದೆ. ಆದರೆ ಹೆಚ್ಚಿನ ಟಿಕೆಟ್ಗಳು ಈಗಾಗಲೇ ಮಾರಾಟವಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.
5/ 8
ಅದರಲ್ಲಿಯೂ ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ ಬಳಿಕ ಕೊಲ್ಕತ್ತಾದ 2ನೇ ಪಂದ್ಯಕ್ಕೆ ಭರ್ಜರಿ ಬೇಡಿಕೆ ಬಂದಿದ್ದು, ಟಿಕೆಟ್ ರೇಟ್ ಸಹ ಹೆಚ್ಚಳವಾಗಿದೆ. ಅಲ್ಲದೇ ಎಲ್ಲಾ ಟಿಕೆಟ್ಗಳು ಆಲ್ಮೋಸ್ಟ್ ಮಾರಾಟವಾಗಿದೆಯಂತೆ.
6/ 8
ಟಿಕೆಟ್ ರೇಟ್ ಎಷ್ಟಿದೆ ಎಂದು ನೋಡುವುದಾದರೆ, 700 ರೂ ಇಂದ ಆಂಭವಾಗಿ ಕ್ರಮವಾಗಿ 1200, 1600 ಮತ್ತು H & L ವರ್ಗದ ಸೀಟ್ಗಳಿಗೆ 1800 ರೂ ದರ ನಿಗದಿಯಾಗಿದೆ. ಉಳಿದಂತೆ ವಿಐಪಿ ಬ್ಲಾಕ್ - 2500, ವಿ.ವಿಐಪಿ ಬ್ಲಾಕ್ - ರೂ .6000, ಕಾರ್ಪೊರೇಟ್ ಸೀಟುಗಳು - ರೂ.12000 ಮತ್ತು ಬಿಗ್ನೆಸ್ ಕ್ಲಾಸ್ ರೂ.15000 ನಿಗದಿಪಡಿಸಲಾಗಿದೆ.
7/ 8
ಇನ್ನು, ನಾಳಿನ 2ನೇ ಏಕದಿನ ಪಂದ್ಯವು ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ.