ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ರಿಷಭ್ ಪಂತ್ಗೆ ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ ನಿರಂತರ ಅವಕಾಶಗಳನ್ನು ನೀಡಲಾಯಿತು ಆದರೆ ಅದರ ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ಶ್ರೀಲಂಕಾ ವಿರುದ್ಧದ ODI ಮತ್ತು T20 ತಂಡಗಳೆರಡರಿಂದಲೂ ಅವರನ್ನು ಆಯ್ಕೆಗಾರರು ಕೈಬಿಟ್ಟಿದ್ದಾರೆ. ಅಲ್ಲದೇ ಸದ್ಯ ಪಂತ್ ಅಪಘಾತದಿಂದ ಗಾಯಗೊಂಡಿದ್ದು, ಈ ವರ್ಷ ಅವರ ವೃತ್ತಿಜೀವನದ ಮೇಲೆ ಅನುಮಾನ ಎದುರಾಗಿದೆ.