ಈ ತವರಿನ ಸರಣಿಯಲ್ಲಿ ಚೇತನ್ ಶರ್ಮಾ ತಂಡವು ಭಾರತಕ್ಕೆ ಎರಡು ತಂಡಗಳನ್ನು ಆಯ್ಕೆ ಮಾಡಿದೆ. ರೋಹಿತ್ ಶರ್ಮಾ (Rohit Sharma), ಕೆಎಲ್ ರಾಹುಲ್ (KL Rahul) ಮತ್ತು ವಿರಾಟ್ ಕೊಹ್ಲಿ (Virat Kohli) ಟಿ20 ಸರಣಿಯಿಂದ ಹೊರಗುಳಿದಿದ್ದು, ರಿಷಬ್ ಪಂತ್ (Rishabh Pant) ಟಿ20 ಮತ್ತು ಏಕದಿನ ತಂಡದಿಂದ ಹೊರಗುಳಿದಿದ್ದಾರೆ. ಅಲ್ಲದೇ ಅಚ್ಚರಿ ಎಂಬಂತೆ ಕೆಎಲ್ ರಾಹುಲ್ ಉಪನಾಯಕ ಸ್ಥಾನವನ್ನೂ ಕಳೆದುಕೊಂಡಿದ್ದಾರೆ.