ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ತಂಡ ಮೊದಲ ಪಂದ್ಯವನ್ನು 2 ರನ್ಗಳಿಂದ ಗೆದ್ದುಕೊಂಡಿತ್ತು. ಪಾಂಡ್ಯ ಜೊತೆಗೆ ಶಿವಂ ಮಾವಿ, ದೀಪಕ್ ಹೂಡಾ, ಉಮ್ರಾನ್ ಮಲಿಕ್, ಅಕ್ಷರ್ ಪಟೇಲ್, ಇಶಾನ್ ಕಿಶನ್ ಮತ್ತು ಹರ್ಷಲ್ ಪಟೇಲ್ ಉತ್ತಮ ಪ್ರದರ್ಶನ ನೀಡಿದರು. ಸರಣಿಯ ಎರಡನೇ ಪಂದ್ಯ ಗುರುವಾರ, ಜನವರಿ 5 ರಂದು ನಡೆಯಲಿದೆ. ಈ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಭರವಸೆಯಲ್ಲಿ ಟೀಂ ಇಂಡಿಯಾವಿದೆ.
ಭಾರತ ತಂಡ ಗೆದ್ದರೂ ಸಹ ಟೀಂ ಇಂಡಿಯಾದ ಸ್ಟಾರ್ ಬೌಲರ್ ಕಳಪೆ ಪ್ರದರ್ಶನ ತಂಡವನ್ನು ಕಂಗೆಡಿಸಿದೆ. ಹೌದು ಲೆಗ್ ಸ್ಪಿನ್ ಯುಜ್ವೇಂದ್ರ ಚಹಾಲ್ ಮೊದಲ ಟಿ20ಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಅವರಿಗೆ 2 ಓವರ್ ಬೌಲ್ ಮಾಡುವ ಅವಕಾಶ ಸಿಕ್ಕಿತು. ಅವರು 13 ಎಕಾನಮಿಯೊಂದಿಗೆ 26 ರನ್ ನೀಡಿದರು. ಅವರು ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಅದೇ ವೇಳೆ ಎರಡನೇ ಸ್ಪಿನ್ನರ್ ಅಕ್ಷರ್ ಪಟೇಲ್ 3 ಓವರ್ ಗಳಲ್ಲಿ 31 ರನ್ ನೀಡಿ ಯಾವುದೇ ವಿಕೆಟ್ ಪಡೆಯಲಾಗಲಿಲ್ಲ.
ಕಳೆದ 5 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 32ರ ಹರೆಯದ ಯುಜ್ವೇಂದ್ರ ಚಹಾಲ್ ಅವರ ಪ್ರದರ್ಶನವನ್ನು ನೋಡಿದರೆ, ಅವರು ಕೇವಲ ಮೂರು ವಿಕೆಟ್ ಪಡೆದಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಒಂದೇ ಒಂದು ಪಂದ್ಯದಲ್ಲೂ ಅವಕಾಶ ಸಿಗಲಿಲ್ಲ. ಒಟ್ಟಾರೆ ಟಿ20 ವೃತ್ತಿಜೀವನವನ್ನು ಗಮನಿಸಿದರೆ.. 261 ಪಂದ್ಯಗಳಲ್ಲಿ 295 ವಿಕೆಟ್ ಪಡೆದಿದ್ದಾರೆ. 5 ಬಾರಿ 4 ವಿಕೆಟ್ ಹಾಗೂ 2 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟಿ20ಯಲ್ಲಿ ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಮೂರು ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದರು. ಗಿಲ್ 7, ಸೂರ್ಯ 7, ಸಂಜು 5 ರನ್ ಗಳಿಸಿದರು. ವೇಗಿ ಹರ್ಷಲ್ ಪಟೇಲ್ 2 ವಿಕೆಟ್ ಪಡೆದರು. ಆದರೆ.. 4 ಓವರ್ ಗಳಲ್ಲಿ 41 ರನ್ ನೀಡಿದರು. ಕ್ಷರ್ ಅವರ ಸೂಪರ್ ಡೆತ್ ಬೌಲಿಂಗ್ ನಿಂದ ಟೀಂ ಇಂಡಿಯಾ ಗೆದ್ದಿದೆ.