IND vs PAK: ಟೀಂ ಇಂಡಿಯಾ​ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!

IND vs PAK: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್​ ವಿಷಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ಆದರೆ ಪಾಕ್​ಗೆ ಭಾರತ ತಂಡ ಕಳುಹಿಸಲು ಬಿಸಿಸಿಐ ನಿರಾಕರಿಸಿದೆ.

First published:

  • 18

    IND vs PAK: ಟೀಂ ಇಂಡಿಯಾ​ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!

    ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ ಕ್ರಿಕೆಟ್​ ವಿಚಾರ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದ್ದು, ಉಭಯ ದೇಶಗಳ ಕ್ರಿಕೆಟ್​ ಮಂಡಳಿ ಈ ಕುರಿತು ಸಭೆ ನಡೆಸುತ್ತಿದೆ.

    MORE
    GALLERIES

  • 28

    IND vs PAK: ಟೀಂ ಇಂಡಿಯಾ​ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!

    2023ರ ಏಷ್ಯಾಕಪ್‌ಗೆ ಭಾರತ ಪಾಕಿಸ್ತಾನಕ್ಕೆ ಹೋಗದಿರಲು ನಿರ್ಧರಿಸಿದೆ. ಇದಾದ ನಂತರ 2023ರ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಪಾಕಿಸ್ತಾನ ತಂಡ ಹೇಳುತ್ತಿದೆ. ಆದರೆ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ.

    MORE
    GALLERIES

  • 38

    IND vs PAK: ಟೀಂ ಇಂಡಿಯಾ​ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!

    ಏಷ್ಯಾಕಪ್‌ನ ಆತಿಥ್ಯವು ಪಾಕಿಸ್ತಾನದ ಕೈಯಲ್ಲಿದೆ. ಆದರೆ ಭಾರತದ ಎಲ್ಲಾ ಪಂದ್ಯಗಳು ಯುಎಇಯಲ್ಲಿ ನಡೆಯಬೇಕು ಎಂದು ಭಾರತ ಭೇಡಿಕೆ ಇಟ್ಟಿದೆ. ಒಂದು ವೇಳೆ ಟೀಂ ಇಂಡಿಯಾ ಫೈನಲ್‌ವರೆಗೆ ಪ್ರಯಾಣಿಸಿದರೂ ಅದು ಯುಎಇಯಲ್ಲಿಯೇ ನಡೆಬೇಕು ಎಂದಿದೆ.

    MORE
    GALLERIES

  • 48

    IND vs PAK: ಟೀಂ ಇಂಡಿಯಾ​ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!

    ಆದರೆ ಈ ನಿರ್ಧಾರಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬೇಸರ ವ್ಯಕ್ತಪಡಿಸಿದೆ. ಆದರೆ, ಪಾಕಿಸ್ತಾನವು ಭಾರತವನ್ನು ತನ್ನ ತವರಿಗೆ ಏಕೆ ಆಹ್ವಾನಿಸಲು ಬಯಸುತ್ತದೆ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ವಿಚಾರವಾಗಿ ನೋಡುವುದಾದರೆ.

    MORE
    GALLERIES

  • 58

    IND vs PAK: ಟೀಂ ಇಂಡಿಯಾ​ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!

    ಪಾಕಿಸ್ತಾನವು ಪ್ರಸ್ತುತ ಆರ್ಥಿಕ ಪರಿಸ್ಥಿತಿಯೊಂದಿಗೆ ಹೋರಾಡುತ್ತಿದೆ. ಭಾರತ ಆಗಮನದಿಂದ ಪಾಕಿಸ್ತಾನಕ್ಕೆ ದೊಡ್ಡ ಲಾಭ ಸಿಗಬಹುದು. ಅಲ್ಲಿನ ಆರ್ಥಿಕತೆಯನ್ನು ಏನಾದರೂ ಉಳಿಸಲು ಸಾಧ್ಯವಾದರೆ, ಅದು ಕ್ರಿಕೆಟ್​ನಿಂದ ಮಾತ್ರ ಎಂಬ ಮಾತುಗಳು ಕೇಳಿಬರುತ್ತಿದೆ.

    MORE
    GALLERIES

  • 68

    IND vs PAK: ಟೀಂ ಇಂಡಿಯಾ​ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!

    ಭಾರತ ಮತ್ತು ಪಾಕಿಸ್ತಾನದ ನಡುವಿನ ಸ್ಪರ್ಧೆ ಎಂದರೆ ಸಂಪೂರ್ಣ ವಿಶ್ವವೇ ಕಾಯುತ್ತಿರುತ್ತದೆ. ಈ ಬದ್ಧ ಪ್ರತಿಸ್ಪರ್ಧಿಗಳ ನಡುವಿನ ಪಂದ್ಯ ನೋಡಲು ಜನರು ದುಬಾರಿ ಟಿಕೆಟ್‌ಗಳನ್ನು ಖರೀದಿಸಲು ಹಿಂಜರಿಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಮ್ಮ ತವರಿನಲ್ಲಿ ಆಡುವುದು ಪಾಕಿಸ್ತಾನಕ್ಕೆ ವರದಾನವಾಗಲಿದೆ.

    MORE
    GALLERIES

  • 78

    IND vs PAK: ಟೀಂ ಇಂಡಿಯಾ​ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!

    ಇದರಿಂದಾಗಿ ಪಾಕಿಸ್ತಾನದ ಆರ್ಥಿಕತೆ ಕೊಂಚ ಚೇತರಿಕೆ ಕಾಣಲಿದೆ ಎನ್ನುವುದು ಪಾಕ್​ನ ಉದ್ದೇಶ ಎನ್ನಲಾಗುತ್ತಿದೆ. ಆದರೆ ಈ ವಿಚಾರದ ಬಳಿಕ ಅನೇಕರು ಪಾಕ್​ ಈ ರೀತಿಯ ಉದ್ದೇಶ ಸರಿಯಲ್ಲ ಎಂದು ಹೇಳುತ್ತಿದ್ದಾರೆ.

    MORE
    GALLERIES

  • 88

    IND vs PAK: ಟೀಂ ಇಂಡಿಯಾ​ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!

    ಅಲ್ಲದೇ ಭಾರತ ಈಗಾಗಲೇ ಪಾಕ್​ಗೆ ಹೋಗಲು ನಿರಾಕರಿಸಿದೆ. ಇದರ ನಡುವೆ, ಪಾಕ್​ ಪಿಎಸ್​ಎಲ್​ ನಡೆಯುವ ವೇಳೆ ಈಗಾಗಲೇ 2 ಬಾರಿ ಉಗ್ರರ ದಾಳಿಗಳು ನಡೆದಿವೆ. ಹೀಗಾಗಿ ಭಾರತೀಯರು ಸುರಕ್ಷತೆಯ ದೃಷ್ಟಿಯೂ ಇಲ್ಲಿ ಮುಖ್ಯವಾಗುತ್ತದೆ.

    MORE
    GALLERIES