IND vs NZ: ಟೀಂ ಇಂಡಿಯಾ ಸ್ಟಾರ್​ ಬೌಲರ್​ ಮೇಲೆ ಬೇಸರಗೊಂಡ ಫ್ಯಾನ್ಸ್, ಕಾರಣವೇನು ಗೊತ್ತಾ?

IND vs NZ T20: ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಕಿವೀಸ್​ ವಿರುದ್ಧ ಸೋಲುವ ಮೂಲಕ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇದರ ನಡುವೆ ಟೀಂ ಇಂಡಿಯಾ ಆಟಗಾರನ ವಿರುದ್ಧ ಅಭಿಮಾನಿಗಳು ಬೇಸರಗೊಂಡಿದ್ದಾರೆ.

First published:

 • 18

  IND vs NZ: ಟೀಂ ಇಂಡಿಯಾ ಸ್ಟಾರ್​ ಬೌಲರ್​ ಮೇಲೆ ಬೇಸರಗೊಂಡ ಫ್ಯಾನ್ಸ್, ಕಾರಣವೇನು ಗೊತ್ತಾ?

  ಕಳೆದ ವರ್ಷ ನಡೆದ ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಿಟೆನ್ಶನ್ ಪ್ರಕ್ರಿಯೆಯಲ್ಲಿ ಪಂಜಾಬ್ ಕಿಂಗ್ಸ್ ತೆಗೆದುಕೊಂಡ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡದ ಯುವ ಬೌಲರ್ ಅರ್ಷದೀಪ್ ಸಿಂಗ್ ಅವರನ್ನು ಉಳಿಸಿಕೊಂಡಿತ್ತು.

  MORE
  GALLERIES

 • 28

  IND vs NZ: ಟೀಂ ಇಂಡಿಯಾ ಸ್ಟಾರ್​ ಬೌಲರ್​ ಮೇಲೆ ಬೇಸರಗೊಂಡ ಫ್ಯಾನ್ಸ್, ಕಾರಣವೇನು ಗೊತ್ತಾ?

  ಬಳಿಕ ಅರ್ಷದೀಪ್ ಸಿಂಗ್ ಅವರು ಐಪಿಎಲ್ ನಲ್ಲಿ ಜನಪ್ರಿಯತೆ ಗಳಿಸಿ ಎಲ್ಲರ ಗಮನ ಸೆಳೆಯುವ ಮೂಲಕ ನೇರವಾಗಿ ಟೀಂ ಇಂಡಿಯಾಗೆ ಎಂಟ್ರಿಕೊಟ್ಟರು.

  MORE
  GALLERIES

 • 38

  IND vs NZ: ಟೀಂ ಇಂಡಿಯಾ ಸ್ಟಾರ್​ ಬೌಲರ್​ ಮೇಲೆ ಬೇಸರಗೊಂಡ ಫ್ಯಾನ್ಸ್, ಕಾರಣವೇನು ಗೊತ್ತಾ?

  ಆ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಅವರನ್ನು ಆಯ್ಕೆ ಮಾಡಿರಲಿಲ್ಲ. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವರು ಮಿಂಚಿದ್ದರು. ಏಷ್ಯಾಕಪ್‌ನಿಂದ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಹೊರಬಿದ್ದಿದ್ದು, ಏಷ್ಯಾಕಪ್‌ನಲ್ಲಿ ಸ್ಥಾನ ಪಡೆದ ಅರ್ಷದೀಪ್ ಸಿಂಗ್ ಅದ್ಭುತ ಪ್ರದರ್ಶನ ನೀಡಿದರು.

  MORE
  GALLERIES

 • 48

  IND vs NZ: ಟೀಂ ಇಂಡಿಯಾ ಸ್ಟಾರ್​ ಬೌಲರ್​ ಮೇಲೆ ಬೇಸರಗೊಂಡ ಫ್ಯಾನ್ಸ್, ಕಾರಣವೇನು ಗೊತ್ತಾ?

  ಅವರು ಹಿರಿಯ ಬೌಲರ್ ಭುವನೇಶ್ವರ್ ಕುಮಾರ್ ಅವರಿಗಿಂತ ಉತ್ತಮವಾಗಿ ಬೌಲಿಂಗ್ ಮಾಡಿ ಮಿಂಚಿದರು. ಅದರಲ್ಲೂ ಡೆತ್ ಓವರ್​ಗಳಲ್ಲಿ. ಟಿ20 ವಿಶ್ವಕಪ್‌ನಲ್ಲೂ ಅರ್ಷದೀಪ್ ಸಿಂಗ್ ಮಿಂಚಿದ್ದರು. ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ ಎಂದೆನಿಸಿದಾಗ ಅರ್ಷದೀಪ್ ಸಿಂಗ್ ಇದ್ದಕ್ಕಿದ್ದಂತೆ ಫಾರ್ಮ್ ಕಳೆದುಕೊಂಡಿದ್ದಾರೆ.

  MORE
  GALLERIES

 • 58

  IND vs NZ: ಟೀಂ ಇಂಡಿಯಾ ಸ್ಟಾರ್​ ಬೌಲರ್​ ಮೇಲೆ ಬೇಸರಗೊಂಡ ಫ್ಯಾನ್ಸ್, ಕಾರಣವೇನು ಗೊತ್ತಾ?

  ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು 5 ನೋಬಾಲ್‌ಗಳನ್ನು ಎಸೆದಿದ್ದರು. ಅವರು ಎರಡು ಓವರ್‌ಗಳಲ್ಲಿ 37 ರನ್ ನೀಡಿದ್ದರು. ಹೀಗಾಗಿ ಹಾರ್ದಿಕ್ ಪಾಂಡ್ಯ ಅವರಿಗೆಗೆ ಮತ್ತೊಂದು ಓವರ್ ಬೌಲ್ ನೀಡುವ ಧೈರ್ಯ ಮಾಡಲಿಲ್ಲ.

  MORE
  GALLERIES

 • 68

  IND vs NZ: ಟೀಂ ಇಂಡಿಯಾ ಸ್ಟಾರ್​ ಬೌಲರ್​ ಮೇಲೆ ಬೇಸರಗೊಂಡ ಫ್ಯಾನ್ಸ್, ಕಾರಣವೇನು ಗೊತ್ತಾ?

  ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20ಯಲ್ಲೂ ಅರ್ಷದೀಪ್ ಕಳಪೆ ಪ್ರದರ್ಶನ ನೀಡಿದ್ದರು. 20ನೇ ಓವರ್‌ನಲ್ಲಿ 27 ರನ್ ನೀಡಿದರು. ಒಂದು ರೀತಿಯಲ್ಲಿ ಈ ಓವರ್ ಭಾರತದ ಸೋಲಿಗೆ ಕಾರಣವಾಯಿತು ಎಂಬ ಮಾತಿದೆ.

  MORE
  GALLERIES

 • 78

  IND vs NZ: ಟೀಂ ಇಂಡಿಯಾ ಸ್ಟಾರ್​ ಬೌಲರ್​ ಮೇಲೆ ಬೇಸರಗೊಂಡ ಫ್ಯಾನ್ಸ್, ಕಾರಣವೇನು ಗೊತ್ತಾ?

  ಅರ್ಷದೀಪ್ ಅವರ ಪ್ರಸ್ತುತ ಫಾರ್ಮ್ ಅನ್ನು ನೋಡಿದರೆ, ಅವೇಶ್ ಖಾನ್ ಅವರನ್ನು ನೆನಪಿಸಿಕೊಳ್ಳದೆ ಇರಲು ಸಾಧ್ಯವಿಲ್ಲ. ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಅವೇಶ್ ಖಾನ್ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟರು. ಆರಂಭದಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಆದರೆ ಆ ಬಳಿಕ ಕಳಪೆ ಪ್ರದರ್ಶನದ ಕಾರಣ ತಂಡದಿಂದ ಹೊರ ನಡೆದರು.

  MORE
  GALLERIES

 • 88

  IND vs NZ: ಟೀಂ ಇಂಡಿಯಾ ಸ್ಟಾರ್​ ಬೌಲರ್​ ಮೇಲೆ ಬೇಸರಗೊಂಡ ಫ್ಯಾನ್ಸ್, ಕಾರಣವೇನು ಗೊತ್ತಾ?

  ಸದ್ಯ ಅರ್ಷದೀಪ್​ ಸಿಂಗ್ ಕೂಡ ಅವೇಶ್ ಖಾನ್ ಅವರ ಪರಿಸ್ಥಿತಿಯಲ್ಲಿದ್ದಾರೆ. ಟಿ20 ವಿಶ್ವಕಪ್ ಬಳಿಕ ಅರ್ಷದೀಪ್ ಬೌಲಿಂಗ್ ಕಳಪೆಯಾಗಿದೆ. ಅಲ್ಲದೇ ಪದೇ ಪದೇ ನೋಬಾಲ್​ ಎಸೆಯುತ್ತಿರುವುದು ಕ್ರಿಕೆಟ್​ ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿದೆ.

  MORE
  GALLERIES