IND vs NZ T20I: ಟೀಂ ಇಂಡಿಯಾಗೆ ಬಿಗ್ ಶಾಕ್, ಕಿವೀಸ್​ ಸರಣಿಗೂ ಮುನ್ನ ಸ್ಟಾರ್​ ಆಟಗಾರ ಇಂಜುರಿ

IND vs NZ T20I: ಮೂರು ಪಂದ್ಯಗಳ T20 ಸರಣಿ ಜನವರಿ 27ರಿಂದ ರಾಂಚಿಯಲ್ಲಿ ಆರಂಭವಾಗಲಿದೆ. ಆದರೆ, ಕಿವೀಸ್ ವಿರುದ್ಧದ ಟಿ20 ಸರಣಿಗೂ ಮುನ್ನ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ.

First published:

  • 18

    IND vs NZ T20I: ಟೀಂ ಇಂಡಿಯಾಗೆ ಬಿಗ್ ಶಾಕ್, ಕಿವೀಸ್​ ಸರಣಿಗೂ ಮುನ್ನ ಸ್ಟಾರ್​ ಆಟಗಾರ ಇಂಜುರಿ

    ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 3-0 ಅಂತರದಿಂದ ಸೋಲಿಸಿದ ಟೀಂ ಇಂಡಿಯಾ ಇದೀಗ ಟಿ20 ಸರಣಿಗೆ ಸಿದ್ಧವಾಗಿದೆ. ಹಾರ್ದಿಕ್ ನೇತೃತ್ವದ ಟೀಂ ಇಂಡಿಯಾ ನ್ಯೂಜಿಲ್ಯಾಂಡ್​ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಶುಕ್ರವಾರದಿಂದ ರಾಂಚಿಯಲ್ಲಿ ಆರಂಭವಾಗಲಿದೆ.

    MORE
    GALLERIES

  • 28

    IND vs NZ T20I: ಟೀಂ ಇಂಡಿಯಾಗೆ ಬಿಗ್ ಶಾಕ್, ಕಿವೀಸ್​ ಸರಣಿಗೂ ಮುನ್ನ ಸ್ಟಾರ್​ ಆಟಗಾರ ಇಂಜುರಿ

    ಆದರೆ, ಕಿವೀಸ್ ವಿರುದ್ಧದ ಟಿ20 ಸರಣಿಗೂ ಮುನ್ನ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ. ಹೈದರಾಬಾದ್ ಮತ್ತು ಮಹಾರಾಷ್ಟ್ರ ನಡುವಿನ ರಣಜಿ ಪಂದ್ಯದ ವೇಳೆ ಅವರು ತಮ್ಮ ಮಣಿಕಟ್ಟಿನ ಗಾಯಕ್ಕೆ ಒಳಗಾಗಿದ್ದಾರೆ.

    MORE
    GALLERIES

  • 38

    IND vs NZ T20I: ಟೀಂ ಇಂಡಿಯಾಗೆ ಬಿಗ್ ಶಾಕ್, ಕಿವೀಸ್​ ಸರಣಿಗೂ ಮುನ್ನ ಸ್ಟಾರ್​ ಆಟಗಾರ ಇಂಜುರಿ

    ಹೀಗಾಗಿ ಅವರು ಟೀಂ ಇಂಡಿಯಾ ಸೇರುವ ಬದಲು NCA ಗೆ ತೆರಳಿದ್ದರು. ಇದರೊಂದಿಗೆ ರುತುರಾಜ್ ಕಿವೀಸ್ ಸರಣಿಯಿಂದ ಹೊರಗುಳಿಯಲಿದ್ದಾರೆ. ಆದರೆ, ಬಿಸಿಸಿಐ ರುತುರಾಜ್ ಬದಲಿಗೆ ಯಾರನ್ನೂ ಆಯ್ಕೆ ಮಾಡಿಲ್ಲ.

    MORE
    GALLERIES

  • 48

    IND vs NZ T20I: ಟೀಂ ಇಂಡಿಯಾಗೆ ಬಿಗ್ ಶಾಕ್, ಕಿವೀಸ್​ ಸರಣಿಗೂ ಮುನ್ನ ಸ್ಟಾರ್​ ಆಟಗಾರ ಇಂಜುರಿ

    ಈಗಾಗಲೇ ಪೃಥ್ವಿ ಶಾ ಮತ್ತು ರಾಹುಲ್ ತ್ರಿಪಾಠಿ ರೂಪದಲ್ಲಿ ಬ್ಯಾಕಪ್ ಓಪನರ್‌ಗಳಿರುವುದರಿಂದ ರುತುರಾಜ್ ಬದಲಿಗೆ ಯಾರನ್ನೂ ಆಯ್ಕೆ ಮಾಡಲಾಗಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವರ್ಷ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾದರೂ ರುತುರಾಜ್ ಕಣಕ್ಕಿಳಿದಿರಲಿಲ್ಲ.

    MORE
    GALLERIES

  • 58

    IND vs NZ T20I: ಟೀಂ ಇಂಡಿಯಾಗೆ ಬಿಗ್ ಶಾಕ್, ಕಿವೀಸ್​ ಸರಣಿಗೂ ಮುನ್ನ ಸ್ಟಾರ್​ ಆಟಗಾರ ಇಂಜುರಿ

    ಇದೀಗ ಗಾಯದ ಸಮಸ್ಯೆಯಿಂದ ತಂಡದಿಂದ ದೂರ ಉಳಿದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ಐಪಿಎಲ್ ನಲ್ಲಿ ರನ್ ಗಳ ಮಹಾಪೂರವನ್ನೇ ಹರಿಸುತ್ತಿರುವ ರುತುರಾಜ್​ಗೆ ಟೀಂ ಇಂಡಿಯಾದಲ್ಲಿ ಸರಿಯಾದ ಅವಕಾಶಗಳು ಸಿಗುತ್ತಿಲ್ಲ.

    MORE
    GALLERIES

  • 68

    IND vs NZ T20I: ಟೀಂ ಇಂಡಿಯಾಗೆ ಬಿಗ್ ಶಾಕ್, ಕಿವೀಸ್​ ಸರಣಿಗೂ ಮುನ್ನ ಸ್ಟಾರ್​ ಆಟಗಾರ ಇಂಜುರಿ

    ಈ ಸರಣಿಯಿಂದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಹೊರಗುಳಿದಿದ್ದಾರೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಯುವ ತಂಡ ಕಣಕ್ಕೆ ಇಳಿಯಲಿದೆ.

    MORE
    GALLERIES

  • 78

    IND vs NZ T20I: ಟೀಂ ಇಂಡಿಯಾಗೆ ಬಿಗ್ ಶಾಕ್, ಕಿವೀಸ್​ ಸರಣಿಗೂ ಮುನ್ನ ಸ್ಟಾರ್​ ಆಟಗಾರ ಇಂಜುರಿ

    ಏಕದಿನ ಸರಣಿಯಂತೆಯೇ ಟಿ20 ಸರಣಿಯನ್ನೂ ಗೆಲ್ಲುವ ಭರವಸೆಯನ್ನು ಹಾರ್ದಿಕ್ ಸೇನೆ ಹೊಂದಿದೆ. ಹಿರಿಯರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾದ ಟೀಂ ಕಾಂಬಿನೇಷನ್ ಬಗ್ಗೆ ವ್ಯಾಪಕ ಕುತೂಹಲ ಮೂಡಿದೆ. ಅಲ್ಲದೆ ಈ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದರೆ ಟಿ20ಯಲ್ಲೂ ಟೀಂ ಇಂಡಿಯಾ ನಂ.1 ಆಗಲಿದೆ.

    MORE
    GALLERIES

  • 88

    IND vs NZ T20I: ಟೀಂ ಇಂಡಿಯಾಗೆ ಬಿಗ್ ಶಾಕ್, ಕಿವೀಸ್​ ಸರಣಿಗೂ ಮುನ್ನ ಸ್ಟಾರ್​ ಆಟಗಾರ ಇಂಜುರಿ

    ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ) , ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭಮನ್ ಗಿಲ್, ದೀಪಕ್ ಹೂಡಾ, ಪೃಥ್ವಿ ಶಾ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಯಾ ಸುಂದರವ್, ಕುಲ್ದೀಪ್ ಯಾ ಸುಂದರವ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ ಮತ್ತು ಮುಖೇಶ್ ಕುಮಾರ್.

    MORE
    GALLERIES