ಮೂರು ಪಂದ್ಯಗಳ ಸರಣಿಯ ಭಾಗವಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ಬುಧವಾರ ಕ್ರೈಸ್ಟ್ ಚರ್ಚ್ನಲ್ಲಿ ನಡೆಯಲಿದೆ. ಮೊದಲ ಏಕದಿನ ಪಂದ್ಯವನ್ನು ಕಿವೀಸ್ ಗೆದ್ದುಕೊಂಡಿತು.ಎರಡನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
2/ 8
ಸರಣಿ ಸಮಬಲಗೊಳಿಸಲು ಭಾರತ ಮೂರನೇ ಏಕದಿನ ಪಂದ್ಯವನ್ನು ಗೆಲ್ಲಲೇಬೇಕು. ಮಳೆಯಿಂದ ರದ್ದಾದರೆ ಅಥವಾ ಸೋತರೆ ಕಿವೀಸ್ ಸರಣಿ ಗೆಲ್ಲಲಿದೆ.
3/ 8
ಭಾರತ ಮತ್ತು ನ್ಯೂಜಿಲೆಂಡ್ ಸರಣಿಗೆ ವರುಣ ಅಡ್ಡಿಯಾಗುತ್ತಲೇ ಇದೆ. ಒಂದು ಹನಿ ಮಳೆಯಿಲ್ಲದೆ ಒಂದೇ ಒಂದು ಪಂದ್ಯ ನಡೆದಿಲ್ಲ. ಇಲ್ಲಿಯವರೆಗೆ ನಡೆದ ಪ್ರತಿಯೊಂದು ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ.
4/ 8
ಟಿ20 ಸರಣಿಯ ಮೊದಲ ಟಿ20 ರದ್ದಾಗಿದ್ದರೆ, ಮೂರನೇ ಟಿ20 ಮಳೆಯಿಂದಾಗಿ ಪೂರ್ಣಗೊಳ್ಳಲಿಲ್ಲ. ಎರಡನೇ ಏಕದಿನ ಪಂದ್ಯ ಮಳೆಯಿಂದ ಕೊಚ್ಚಿ ಹೋಗಿತ್ತು. ಹೀಗಾಗಿ ಈ ಪ್ರವಾಸದ ಕೊನೆಯ ಏಕದಿನ ಪಂದ್ಯ ಸುಸೂತ್ರವಾಗಿ ನಡೆಯಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.
5/ 8
ಕ್ರೈಸ್ಟ್ ಚರ್ಚ್ ಮೈದಾನದಲ್ಲಿ ನಡೆಯುವ ಈ ಪಂದ್ಯಕ್ಕೂ ಮಳೆಯ ನಿರೀಕ್ಷೆಯಿದೆ. ಈ ಹಗಲು ರಾತ್ರಿ ಪಂದ್ಯದ ಎರಡನೇ ಇನಿಂಗ್ಸ್ ವೇಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
6/ 8
ಮೊದಲ ಇನಿಂಗ್ಸ್ ವೇಳೆ ಮಳೆಯ ಮುನ್ಸೂಚನೆ ಇಲ್ಲದಿದ್ದರೂ ಸಂಜೆಯಿಂದಲೇ ಬಿರುಸಿನ ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಡಕ್ವರ್ತ್ ಲೂಯಿಸ್ ಪ್ರಕಾರ, ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಎರಡನೇ ಇನ್ನಿಂಗ್ಸ್ನಲ್ಲಿ ಕನಿಷ್ಠ 20 ಓವರ್ಗಳ ಆಟವನ್ನು ಪೂರ್ಣಗೊಳಿಸಬೇಕು.
7/ 8
ಮಳೆಯಿಂದಾಗಿ ಮೂರನೇ ಏಕದಿನ ಪಂದ್ಯ ನಡೆಯದಿದ್ದರೆ ಸರಣಿ ಕಿವೀಸ್ ಕೈವಶವಾಗಲಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಟಾಸ್ ನಿರ್ಣಾಯಕವಾಗಲಿದೆ. ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.
8/ 8
ನಾಳೆ ಭಾರತೀಯ ಕಾಲಮಾನ ಬೆಳಗ್ಗೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಡಿಡಿ ಸ್ಪೋರ್ಟ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಪಂದ್ಯವನ್ನು ನೇರಪ್ರಸಾರ ಮಾಡಲಿದೆ.