Team India: ಕಿವೀಸ್ ವಿರುದ್ಧ ಇವ್ರೆಲ್ಲ ಕಂಬ್ಯಾಕ್ ಮಾಡ್ಲೇಬೇಕು, ಕೊಹ್ಲಿ ಭರ್ಜರಿ ಫಾರ್ಮ್ನಲ್ಲಿದ್ರೂ ಈ ತಪ್ಪು ತಿದ್ದಿಕೊಳ್ಳಲೇಬೇಕು!
IND vs NZ ODI: ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಗೆದ್ದಿದ್ದರೂ, ತಂಡದಲ್ಲಿ ಕೆಲವು ನ್ಯೂನತೆಗಳಿದ್ದವು. ಅದರಲ್ಲೂ ಕೆಲ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಉಪ್ಪಲ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲೇ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಆಟಗಾರರು ಯಾರೆಂದು ನೋಡೋಣ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ (Team India) ರೋಚಕವಾಗಿ ಗೆದ್ದುಕೊಂಡಿದೆ. 12 ರನ್ಗಳ ಅಲ್ಪ ಅಂತರದಲ್ಲಿ ತಂಡ ಗೆದ್ದಿದೆ. ಆರಂಭಿಕರಾದ ಶುಭ್ಮನ್ ಗಿಲ್ ಅದ್ಭುತ ದ್ವಿಶತಕದೊಂದಿಗೆ ಬೃಹತ್ ಸ್ಕೋರ್ ಗಳಿಸಿದರು.
2/ 9
ಆದರೆ, ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದರೂ ತಂಡದಲ್ಲಿ ಕೆಲ ನ್ಯೂನತೆಗಳಿದ್ದವು. ಅದರಲ್ಲೂ ಕೆಲ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.
3/ 9
ವಿರಾಟ್ ಕೊಹ್ಲಿ: ಶ್ರೀಲಂಕಾ ವಿರುದ್ಧದ ಸರಣಿಯ ನಂತರ, ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಮಿಂಚುವ ನಿರೀಕ್ಷೆಯಿತ್ತು. ಆದರೆ, 8 ರನ್ಗಳಿಗೆ ಔಟ್ ಆದರು. ಸ್ಪಿನ್ ಬೌಲಿಂಗ್ನಲ್ಲಿ ಕೊಹ್ಲಿ ಔಟಾದದ್ದು ಇದೀಗ ಚರ್ಚೆಯ ವಿಷಯವಾಗಿದೆ.
4/ 9
ನ್ಯೂಜಿಲೆಂಡ್ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಎಸೆತವನ್ನು ಕೊಹ್ಲಿ ತಪ್ಪಾಗಿ ಗ್ರಹಿಸಿದರು. ಫ್ರಂಟ್ ಫೂಟ್ ನಲ್ಲಿ ಆಡಬೇಕಿದ್ದ ಎಸೆತವನ್ನು ಬ್ಯಾಕ್ ಫೂಟ್ ನಲ್ಲಿ ಆಡುವ ಮೂಲಕ ವಿಕೆಟ್ ಒಪ್ಪಿಸಿದರು. ಇದರಿಂದ ಅಭಿಮಾನಿಗಳು ಬೇಸರಗೊಂಡರು. ಸ್ಪಿನ್ ಬೌಲಿಂಗ್ನ್ನು ಎದುರಿಸಲು ಕೊಹ್ಲಿ ಹೆಚ್ಚು ಅಭ್ಯಾಸ ಮಾಡಬೇಕು ಎಂದು ಮಾಜಿ ಆಟಗಾರರು ಸಲಹೆ ನೀಡುತ್ತಿದ್ದಾರೆ.
5/ 9
ಹಾರ್ದಿಕ್ ಪಾಂಡ್ಯ: ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಔಟಾದ ವಿಚಾರ ಸ್ವಲ್ಪ ವಿವಾದಕ್ಕೀಡಾಗಿತ್ತು. ಆದರೆ ಹಾರ್ದಿಕ್ ಪಾಂಡ್ಯ ಕಳೆದ ಲಂಕಾ ಸರಣಿಯಿಂದಲೂ ಅಷ್ಟಾಗಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ.
6/ 9
ವಿಕೆಟ್ ಪತನವಾಗುತ್ತಿದ್ದಾಗ ಕ್ರೀಸ್ ಗೆ ಬಂದ ಹಾರ್ದಿಕ್ 38 ಎಸೆತಗಳಲ್ಲಿ 28 ರನ್ ಗಳಿಸಲಷ್ಟೇ ಶಕ್ತರಾದರು. ಹಾರ್ದಿಕ್ ಅವರು ಆಕ್ರಮಣಕಾರಿ ಬ್ಯಾಟಿಂಗ್ ಮಾಡದೆಯೇ ತುಂಬಾ ಪಂದ್ಯಗಳಾಗಿವೆ. ಹಾರ್ದಿಕ್ ಮೊದಲಿನಂತೆ ಆಡಲು ಸಾಧ್ಯವಾಗದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
7/ 9
ಬ್ಯಾಟಿಂಗ್ ಅನ್ನು ಬದಿಗಿಟ್ಟು, ಬೌಲಿಂಗ್ನಲ್ಲಿ ಹಾರ್ದಿಕ್ ಅವರ ಪ್ರದರ್ಶನ ಕಳಪೆಯಾಗಿದೆ. ಅವರು 7 ಓವರ್ಗಳಲ್ಲಿ 70 ರನ್ ನೀಡಿದ್ದರು. ಅಂದರೆ ಪ್ರತಿ ಓವರ್ಗೆ ಸರಾಸರಿ 10 ರನ್ ನೀಡಿದ್ದಾರೆ. ಪಿಚ್ ವೇಗಿಗಳಿಗೆ ನೆರವಾಗುತ್ತಿರುವಾಗ ಹೀಗೆ ರನ್ ನೀಡುವುದು ತಂಡಕ್ಕೆ ದೊಡ್ಡ ತೊಂದರೆಯಾಗುತ್ತಿದೆ.
8/ 9
ಇಶಾನ್ ಕಿಶನ್: ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಇಶಾನ್ ಕಿಶನ್ ದ್ವಿಶತಕ ಸಿಡಿಸಿದ್ದರು. ಆದರೆ, ನಂತರದ ಶ್ರೀಲಂಕಾ ಸರಣಿಯಲ್ಲಿ ಅವಕಾಶ ಸಿಗಲಿಲ್ಲ. ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ನ್ಯೂಜಿಲೆಂಡ್ ಸರಣಿಗೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಆಯ್ಕೆಯಾಗಿದ್ದಾರೆ.
9/ 9
ಆದರೆ, ಕಿಶನ್ನ 14 ಎಸೆತಗಳಲ್ಲಿ 5 ರನ್ ಗಳಿಸಲಷ್ಟೇ ಶಕ್ತರಾದರು. ಫರ್ಗುಸನ್ ಅವರ ಬೌಲಿಂಗ್ನಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಹಿಂತಿರುಗಿದರು. ಹಿಂದಿನ ಪಂದ್ಯದಲ್ಲಿ ಆರಂಭಿಕರಾಗಿ ದ್ವಿಶತಕ ಸಿಡಿಸಿದ್ದ ಇಶಾನ್ ಈ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆದು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.