ಈ ವೇಳೆ ಅರ್ಷದೀಪ್ ಸಿಂಗ್ ಭಾರತದ ಸೋಲಿಗೆ ದೊಡ್ಡ ಕಾರಣ ಎಂದು ಹೇಳಲಾಗುತ್ತಿದೆ. ಭಾರತದ ಬೌಲಿಂಗ್ನ 20ನೇ ಓವರ್ ಅನ್ನು ಅರ್ಷದೀಪ್ ಬೌಲ್ ಮಾಡಿದರು. ಈ ಓವರ್‌ನಲ್ಲಿ ಅವರು 27 ರನ್ ನೀಡಿದರು. ಮೊದಲ ಎರಡು ಎಸೆತಗಳಲ್ಲಿ 19 ರನ್‌ಗಳು ಬಂದಿದ್ದವು. ಅರ್ಷದೀಪ್ ನೋ ಬಾಲ್ ಎಸೆದರು. ಡೆರಿಲ್ ಮಿಚೆಲ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರು. ಮುಂದಿನ ಎಸೆತದಲ್ಲಿ ಮತ್ತೆ ಫೋರ್ ಬಂದವು. ಒಂದು ಹಂತದಲ್ಲಿ ಭಾರತಕ್ಕೆ 160 ರನ್‌ಗಳ ಸಮೀಪ ಟಾರ್ಗೆಟ್ ಸಿಗುತ್ತದೆ ಎಂದು ಅನಿಸಿದರೂ ಅರ್ಷದೀಪ್ ಅವರ ತಪ್ಪಿನಿಂದಾಗಿ ನ್ಯೂಜಿಲೆಂಡ್ 176 ರನ್ ಗಳಿಸಿತು.
ಸೂರ್ಯಕುಮಾರ್ ಯಾದವ್ 47 ರನ್‌ಗಳ ಮಹತ್ವದ ಇನ್ನಿಂಗ್ಸ್ ಆಡಿದರು ಆದರೆ ನಾಯಕ ಹಾರ್ದಿಕ್ ಪಾಂಡ್ಯ 20 ಎಸೆತಗಳಲ್ಲಿ 21 ರನ್ ಗಳಿಸಲಷ್ಟೇ ಶಕ್ತರಾದರು. ಪಂದ್ಯದಲ್ಲಿ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆದಿತ್ತು. ಫಿನ್ ಅಲೆನ್ ಮತ್ತು ಡೆವೊನ್ ಕಾನ್ವೇ ಮೊದಲ ವಿಕೆಟ್‌ಗೆ ಕೇವಲ ನಾಲ್ಕು ಓವರ್‌ಗಳಲ್ಲಿ 37 ರನ್ ಗಳಿಸಿದರು. ಪವರ್‌ಪ್ಲೇಯ ಆರು ಓವರ್‌ಗಳಲ್ಲಿ ನ್ಯೂಜಿಲೆಂಡ್ 47 ರನ್ ಗಳಿಸಿತು. ಫಿನ್ ಅಲೆನ್ 23 ಎಸೆತಗಳಲ್ಲಿ 35 ರನ್ ಗಳಿಸಿದರೆ, ಕಾನ್ವೆ 35 ಎಸೆತಗಳಲ್ಲಿ 52 ರನ್ ಗಳಿಸಿದರು.