ಕಿವೀಸ್ ವಿರುದ್ಧ ವಿರಾಟ್ ಕೊಹ್ಲಿ ಅವರ ದಾಖಲೆ ಅತ್ಯುತ್ತಮವಾಗಿದೆ. ODIಗಳಲ್ಲಿ, ಅವರು ನ್ಯೂಜಿಲೆಂಡ್ ವಿರುದ್ಧ 26 ಇನ್ನಿಂಗ್ಸ್ಗಳಲ್ಲಿ 60 ರ ಸರಾಸರಿಯಲ್ಲಿ 1378 ರನ್ ಗಳಿಸಿದ್ದಾರೆ. ಈ ವೇಳೆ ಅವರು 5 ಶತಕ ಹಾಗೂ 8 ಅರ್ಧ ಶತಕ ಬಾರಿಸಿದ್ದಾರೆ. ಅಂದರೆ 13 ಬಾರಿ 50ಕ್ಕೂ ಹೆಚ್ಚು ರನ್ ಗಳ ಇನ್ನಿಂಗ್ಸ್ ಆಡಿದ್ದಾರೆ. ಅವರ ಉತ್ತಮ ಸ್ಕೋರ್ ಔಟಾಗದೆ 154 ರನ್ ಆಗಿದೆ. ಮತ್ತು ಸ್ಟ್ರೈಕ್ ರೇಟ್ 95 ಆಗಿದೆ.
34 ವರ್ಷದ ಕೊಹ್ಲಿ ಅವರ ಒಟ್ಟಾರೆ ಏಕದಿನ ದಾಖಲೆಯ ಬಗ್ಗೆ ಮಾತನಾಡುತ್ತಾ, ಅವರು 268 ಪಂದ್ಯಗಳ 259 ಇನ್ನಿಂಗ್ಸ್ಗಳಲ್ಲಿ 58ರ ಸರಾಸರಿಯಲ್ಲಿ 12754 ರನ್ ಗಳಿಸಿದ್ದಾರೆ. 46 ಶತಕ ಹಾಗೂ 64 ಅರ್ಧ ಶತಕ ಬಾರಿಸಿದ್ದಾರೆ. ಅಂದರೆ 110 ಬಾರಿ 50ಕ್ಕೂ ಹೆಚ್ಚು ರನ್ ಗಳ ಇನ್ನಿಂಗ್ಸ್ ಆಡಿದ್ದಾರೆ. 183 ರನ್ ಅವರ ಅತ್ಯುತ್ತಮ ಸ್ಕೋರ್ ಆಗಿದೆ. 1198 ಬೌಂಡರಿಗಳನ್ನೂ ಬಾರಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಭಾರತ ODI ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಸ್ ಭರತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರಜತ್ ಪಾಟಿದಾರ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.