IND vs NZ 1st ODI: ಹಾರ್ದಿಕ್ ನಾಟೌಟ್ ಆದ್ರೂ ಔಟ್ ನೀಡಿದ ಅಂಪೈರ್, ಕಣ್ಣು ಮುಚ್ಚಿ ಅಂಪೈರಿಂಗ್ ಮಾಡ್ತಿದ್ದೀರಾ ಎಂದ ಫ್ಯಾನ್ಸ್
IND vs NZ 1st ODI: ಭಾರತ ಮತ್ತಯ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ವಿಚಾರದಲ್ಲಿ ಆನ್ ಫೀಲ್ಡ್ ಅಂಪೈರ್ ಮತ್ತು ಟಿವಿ ಅಂಪೈರ್ ನೀಡಿದ ತೀರ್ಪು ಇದೀಗ ಚರ್ಚೆಗೆ ಕಾರಣವಾಗಿದೆ.
ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಪರ ಶುಭ್ಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಗಿಲ್ ಕಿವೀಸ್ ವಿರುದ್ಧ ಆಕರ್ಷಕ ದ್ವಿಶತಕ ಸಿಡಿಸಿ ಮಿಂಚಿದರು.
2/ 8
ಶುಭ್ಮನ್ ಗಿಲ್ ಕಿವೀಸ್ ವಿರುದ್ಧ ದ್ವಿಶತಕ ಸಿಡಿಸಿ ಆರ್ಭಟಿಸಿದರು. ಅವರು, 149 ಬೌಲ್ಗಳಿಗೆ 9 ಸಿಕ್ಸ್ ಮತ್ತು 19 ಫೋರ್ ಮೂಲಕ ಆಕರ್ಷಕ 208 ರನ್ಗಳಿಸಿದರು. ಆದರೆ, ಈ ಪಂದ್ಯದಲ್ಲಿ ಅಂಪೈರ್ ತೆಗೆದುಕೊಂಡ ನಿರ್ಧಾರವೊಂದು ವಿವಾದಕ್ಕೀಡಾಗಿದೆ.
3/ 8
ಹಾರ್ದಿಕ್ ಪಾಂಡ್ಯ ವಿಚಾರದಲ್ಲಿ ಆನ್ ಫೀಲ್ಡ್ ಅಂಪೈರ್ ಮತ್ತು ಟಿವಿ ಅಂಪೈರ್ ಇಬ್ಬರೂ ದೊಡ್ಡ ತಪ್ಪು ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಡ್ಯಾರಿಲ್ ಮಿಚೆಲ್ 40ನೇ ಓವರ್ ಬೌಲ್ ಮಾಡುವಾಗ ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆದರು.
4/ 8
ಈ ವೇಳೆ ಬಾಲ್ ಹಾರ್ದಿಕ್ ಬ್ಯಾಟಿಗೆ ತಟ್ಟದೇ ನೇರವಾಗಿ ಕೀಪರ್ ಕೈ ಸೇರಿದೆ. ಕೀಪರ್ ಸ್ಟಂಪಿಂಗ್ ಮಾಡಿದ್ದಾರೆ. ಇದನ್ನು ಕಿವೀಸ್ ವಿಕೆಟ್ ಕೀಪರ್ ಮತ್ತು ನಾಯಕ ಲ್ಯಾಥಮ್ ಬೌಲ್ಡ್ ವಿಕೆಟ್ಗಾಗಿ ಮನವಿ ಮಾಡಿದ್ದಾರೆ.
5/ 8
ಫೀಲ್ಡ್ ಅಂಪೈರ್ಗಳು ಟಿವಿ ಅಂಪೈರ್ ಅನ್ನು ಸಹ ಬಳಸದೆ ಹಾರ್ದಿಕ್ ಅವರನ್ನು ಔಟ್ ಎಂದು ಘೋಷಿಸಿದರು. ಆದರೆ ಟಿವಿಯಲ್ಲಿ ಪಂದ್ಯ ನೋಡಿದವರೆಲ್ಲ ಔಟಾಗಿಲ್ಲ ಎಂದು ಭಾವಿಸಿದ್ದರು. ನಂತರ ಮರು ಪ್ರಸಾರದಲ್ಲಿ ಹಾರ್ದಿಕ್ ಔಟಾಗದೆ ಇರುವುದು ಕಂಡುಬಂದಿದೆ.
6/ 8
ಚೆಂಡನ್ನು ಹಿಡಿಯುತ್ತಿದ್ದಾಗ ಲಾಥಮ್ ಅವರ ಕೈಗವಸುಗಳು ಬೇಲ್ಸ್ಗೆ ತಾಗಿದವು. ಅದರಿಂದಾಗಿ ಸ್ಟಂಪ್ನಲ್ಲಿ ಬೆಳಕು ಬಂದಿದೆ. ಟಿವಿ ರಿಪ್ಲೇಯಲ್ಲಿ ಅದು ಸ್ಪಷ್ಟವಾಗಿ ಕಾಣಿಸಿತು. ಅಲ್ಲದೇ ಈ ವೇಳೆ ಕ್ರೀಸ್ನಲ್ಲಿ ಹಾರ್ದಿಕ್ ಕಾಲುಗಳು ಇದ್ದಿದ್ದರೂ ಸಹ ಔಟ್ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.
7/ 8
ಆದರೆ ಹಾರ್ದಿಕ್ ಪಾಂಡ್ಯ ಆಗಲೇ ಮೈದಾನದಿಂದ ನಿರ್ಗಮಿಸಿದ್ದರು. ಜೊತೆಗೆ ವಾಷಿಂಗ್ಟನ್ ಸುಂದರ್ ಕೂಡ ಕ್ರೀಸ್ಗೆ ಬಂದಿದ್ದರು. ಹೀಗಾಗಿ ಯಾರೂ ಏನೂ ಮಾಡಲಾಗಲಿಲ್ಲ. ಸ್ವಲ್ಪ ಸಮಯದ ನಂತರ ಗಿಲ್ಗೆ ಇದೇ ರೀತಿಯ ಘಟನೆ ಸಂಭವಿಸಿತು. ಆದರೆ ಅವರು ಔಟ್ ಆಗದೇ ಉಳಿದರು.
8/ 8
ಆದರೆ ಅದನ್ನು ಮೂರನೇ ಅಂಪೈರ್ಗೆ ಸೂಚಿಸಲಾಯಿತು ಮತ್ತು ಗಿಲ್ ಔಟ್ ಆಗದೆಯೇ ಉಳಿದರು. ಇಲ್ಲಿಯೂ ಲಾಥಮ್ನ ಕೈಗವಸುಗಳು ಬಡಿದು ಬೇಲ್ಸ್ಗಳು ಕೆಳಗೆ ಬಿದ್ದಿದ್ದವು. ಆದರೆ ಹಾರ್ದಿಕ್ ಅವರ ವಿಕೆಟ್ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಂಪೈರ್ಗಳ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.