ಮಳೆಯಿಂದಾಗಿ ಭಾರತ ಐರ್ಲೆಂಡ್ ಟಿ 20 ಪಂದ್ಯ ಸುಮಾರು ಒಂದೂವರೆ ಗಂಟೆ ತಡವಾಗಿ ಆರಂಭವಾಗಿತ್ತು. ಅಂಪೈರ್ಗಳು ಪಂದ್ಯವನ್ನು ಪ್ರತಿ ಇನಿಂಗ್ಸ್ಗೆ 12 ಓವರ್ಗಳಿಗೆ ಇಳಿಸಿದರು.
2/ 8
ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ 12 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿತು. ಹ್ಯಾರಿ ಹೆಕ್ಟರ್ (33 ಎಸೆತಗಳಲ್ಲಿ ಔಟಾಗದೆ 64; 6 ಬೌಂಡರಿ, 3 ಸಿಕ್ಸರ್) ಮಿಂಚಿನ ಇನಿಂಗ್ಸ್ ಆಡಿದರು.
3/ 8
ಭುವನೇಶ್ವರ್ ಕುಮಾರ್ ಎಸೆದ ಓವರ್ ಒಂದರ ಮೊದಲ ಎಸೆತ 201 ಕಿ.ಮೀ.ವೇಗವಾಗಿತ್ತು. ಅದೇ ಓವರ್ನಲ್ಲಿ ಇನ್ನೊಂದು ಎಸೆತ ಸ್ಪೀಡೋಮೀಟರ್ನಲ್ಲಿ ಗಂಟೆಗೆ 208 ಕಿಮೀ ವೇಗವನ್ನು ತಲುಪಿತ್ತು!
4/ 8
ಇದೊಂದು ತಾಂತ್ರಿಕ ದೋಷ ಎಂದು ಅನೇಕ ಅಭಿಮಾನಿಗಳು ಟ್ವೀಟ್ ಮಾಡಲು ಕಾರಣವಾಯಿತು.
5/ 8
ಕೆಲವರು ಶೋಯೆಬ್ ಅಖ್ತರ್ ಅವರನ್ನು ಉಲ್ಲೇಖಿಸಿ ವಿಶ್ವ ಕ್ರಿಕೆಟ್ನಲ್ಲಿ 161.3 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ ದಾಖಲೆಯನ್ನು ಭುವನೇಶ್ವರ್ ಕುಮಾರ್ ಮುರಿದಿದ್ದಾರೆ ಎಂದು ಸಹ ವಾದಿಸುತ್ತಿದ್ದಾರೆ.
6/ 8
ಈ ಕುರಿತು ಟ್ವಿಟರ್ನಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ ಕುರಿತು ವಿವಿಧ ರೀತಿಯಲ್ಲಿ ಚರ್ಚೆಯಾಗುತ್ತಿದೆ.
7/ 8
ಸ್ಪೀಡೋಮೀಟರ್ ದೋಷದಿಂದ ಉಮ್ರಾನ್ ಮಲಿಕ್ ಅವರ ವೇಗದ ಬೌಲ್ನ್ನು ಸಹ ಭುವನೇಶ್ವರ್ ಕುಮಾರ್ ಮೀರಿಸಿದ್ದು ಒಂದು ದಾಖಲೆಯೇ!
8/ 8
ಏನೇ ಆದರೂ ಹಾರ್ದಿಕ್ ಪಾಂಡ್ಯಾ ನೇತೃತ್ವದ ಭಾರತ ತಂಡ ಐರ್ಲೆಂಡ್ ವಿರುದ್ಧ ಗೆಲ್ಲಲು ಭುವನೇಶ್ವರ್ ಕುಮಾರ್ ಬೌಲಿಂಗ್ ಕೊಡುಗೆ ನೀಡಿದ್ದಂತೂ ಸುಳ್ಳಲ್ಲ.