ಈ ಪಂದ್ಯದಲ್ಲಿ ಭಾರತ ಮೊದಲ ಇನಿಂಗ್ಸ್ನಲ್ಲಿ 416 ರನ್ ಗಳಿಸಿತ್ತು. ಆ ಬಳಿಕ ಆಂಗ್ಲರ ತಂಡ ಮೊದಲ ಇನಿಂಗ್ಸ್ನಲ್ಲಿ 284 ರನ್ಗಳಿಗೆ ಆಲೌಟ್ ಆಗಿತ್ತು. ನಂತರ ಭಾರತ ತಂಡವು ಎರಡನೇ ಇನ್ನಿಂಗ್ಸ್ನಲ್ಲಿ 245 ರನ್ಗಳಿಗೆ ಆಲೌಟ್ ಆಗಿದ್ದು, ಇಂಗ್ಲೆಂಡ್ ನೀಡಿದ್ದ 378 ರನ್ಗಳ ಗುರಿಯನ್ನು ಬೆನ್ನಟ್ಟಿ ಸ್ಮರಣೀಯ ಜಯ ಗಳಿಸಿತು. ಮಾಜಿ ನಾಯಕ ಜೋ ರೂಟ್ ಮತ್ತು ಇನ್ ಫಾರ್ಮ್ ಜಾನಿ ಬೈರ್ಸ್ಟೋ 269 ರನ್ಗಳ ಅಜೇಯ ಜೊತೆಯಾಟವನ್ನು ನೀಡಿದರು. ರೂಟ್ 142, ಜಾನಿ ಬೈರ್ಸ್ಟೋ ಔಟಾಗದೆ 114 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಮೊದಲ ಇನ್ನಿಂಗ್ಸ್ ನಲ್ಲಿ ಮ್ಯಾಥ್ಯೂ ಪಾಟ್ಸ್ ಎಸೆತದಲ್ಲಿ ವಿರಾಟ್ ಔಟಾದರು. 19 ಎಸೆತಗಳಲ್ಲಿ 2 ಬೌಂಡರಿಗಳ ನೆರವಿನಿಂದ 11 ರನ್ ಗಳಿಸಿ ಪೆವಿಲಿಯನ್ ತಲುಪಿದರು. ಆ ಬಳಿಕ ಎರಡನೇ ಇನ್ನಿಂಗ್ಸ್ನಲ್ಲಿಯೂ 20 ರನ್ಗಳಿಗೆ ಔಟಾದರು. ಈ ಪಂದ್ಯದಲ್ಲಿ ಅವರು ಗಳಿಸಿದ್ದು ಕೇವಲ 31 ರನ್. ಮತ್ತೊಬ್ಬ ಹಿರಿಯ ಬ್ಯಾಟ್ಸ್ ಮನ್.. ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಜವಾಬ್ದಾರಿ ನಿಭಾಯಿಸಬೇಕಿದ್ದ ಕೊಹ್ಲಿ ಈ ನಿರ್ಗಮನದಿಂದ ಅಭಿಮಾನಿಗಳು ತೀವ್ರ ನಿರಾಸೆಗೊಂಡರು.
ಮೊಹಮ್ಮದ್ ಸಿರಾಜ್ ಮೊದಲ ಇನಿಂಗ್ಸ್ನಲ್ಲಿ 4 ವಿಕೆಟ್ಗಳನ್ನು ಪಡೆದಿದ್ದರೂ, ಅದರಲ್ಲಿ 2 ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳು. ಅವರು 11.4 ಓವರ್ ಬೌಲ್ ಮಾಡಿ 66 ರನ್ ಬಿಟ್ಟುಕೊಟ್ಟರು. ಅಂದರೆ ಪ್ರತಿ ಓವರ್ಗೆ 6 ರನ್ಗಳನ್ನು ನೀಡಿದರು. ಎರಡನೇ ಇನ್ನಿಂಗ್ಸ್ನಲ್ಲಿ ಅವರು 6.53 ಎಕಾನಮಿ ರೇಟ್ನೊಂದಿಗೆ ರನ್ ನೀಡಿದರು. ಎರಡನೇ ಇನಿಂಗ್ಸ್ನಲ್ಲಿ ಸಿರಾಜ್ 15 ಓವರ್ಗಳಲ್ಲಿ 98 ರನ್ ನೀಡಿದರು.