IND vs BAN Test: ಮತ್ತೆ ಕೆಎಲ್ ರಾಹುಲ್ ವಿಫಲ, ಹೀಗಾಡಿದ್ರೆ ಟೀಂ ಇಂಡಿಯಾದಲ್ಲಿ ಇರೋದು ಕಷ್ಟ ಅಂದ್ರು ಫ್ಯಾನ್ಸ್
IND vs BAN 2nd Test: ಬೌಲರ್ಗಳಿಗೆ ಅಡ್ಡಿಯಾಗಿರುವ ಪೂಜಾರ ಕೂಡ ಆಕ್ರಮಣಕಾರಿಯಾಗಿ ಆಡುತ್ತಿದ್ದಾರೆ. ಆದರೆ ಬಿರುಸಿನ ಬ್ಯಾಟಿಂಗ್ ಮಾಡುವ ನಾಯಕ ಕೆಎಲ್ ರಾಹುಲ್ ಮಾತ್ರ ಬಾಂಗ್ಲಾ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 86.3 ಓವರ್ ಗಳಲ್ಲಿ 314 ರನ್ ಗಳಿಗೆ ಆಲೌಟ್ ಆಗಿತ್ತು. ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಕ್ಕೆ ರಿಷಬ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ನೆರವಾದರು.
2/ 8
ಸ್ಪಿನ್ ಸ್ನೇಹಿ ಪಿಚ್ನಲ್ಲಿ ರಿಷಬ್ ಪಂತ್ ಸಿಕ್ಸರ್ಗಳನ್ನು ಸಿಡಿಸಿದರೆ ಶ್ರೇಯಸ್ ಅಯ್ಯರ್ ಕೂಡ ಆಕ್ರಮಣಕಾರಿಯಾಗಿ ಬೌಂಡರಿಗಳನ್ನು ಬಾರಿಸಿದರು. ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಐದನೇ ವಿಕೆಟ್ಗೆ 159 ರನ್ಗಳ ಜೊತೆಯಾಟ ನೀಡಿದರು. ಪಂತ್ ಮತ್ತೊಮ್ಮೆ ಶತಕದ ಅಂಚಿನಲ್ಲಿ ಔಟ್ ಆದರು.
3/ 8
ಆದ್ರೆ.. ಟೀಂ ಇಂಡಿಯಾ ಹಂಗಾಮಿ ನಾಯಕ ಕೆಎಲ್ ರಾಹುಲ್ ಮತ್ತೊಮ್ಮೆ ಟ್ರೋಲರ್ ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾಹುಲ್ ವಿರುದ್ಧ ಕ್ರೀಡಾಭಿಮಾನಿಗಳು ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರಾಶೆ ಮೂಡಿಸಿದ್ದಾರೆ.
4/ 8
ನಾಯಕ ಕೆಎಲ್ ರಾಹುಲ್ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಯಕನಾಗಿ ಯಶಸ್ಸನ್ನು ಪಡೆದಿದ್ದಾರೆ. ಆದರೆ ಓರ್ವ ಬ್ಯಾಟ್ಸ್ಮನ್ ಆಗಿ ಯಶಸ್ಸು ಕಾಣಲಿಲ್ಲ. ಇದೀಗ 2ನೇ ಟೆಸ್ಟ್ ಪಮದ್ಯದಲ್ಲಿಯೂ ರನ್ ಗಳಿಸದೇ ವಿಕೆಟ್ ಒಪ್ಪಿಸಿದ್ದಾರೆ.
5/ 8
ಕೆಎಲ್ ರಾಹುಲ್ ಹೊರತುಪಡಿಸಿ ಉಳಿದವರು ಸಾಕಷ್ಟು ಆಕ್ರಮಣಕಾರಿ ಆಟವಾಡಿದರು. ಬೌಲರ್ ಗಳಿಗೆ ಅಡ್ಡವಾಗಿ ನಿಲ್ಲುವ ಪೂಜಾರ ಕೂಡ ಆಕ್ರಮಣಕಾರಿ ಆಟವಾಡುತ್ತಿದ್ದಾರೆ. ಮೊದಲ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಅವರು ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ವೇಗದ ಶತಕವನ್ನು ಗಳಿಸಿದರು.
6/ 8
ಆದರೆ, ರಾಹುಲ್ ಆಕ್ರಮಣಕಾರಿ ಆಟವಾಡಲಿಲ್ಲ. ಮೊದಲ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಅವರು 62 ಎಸೆತಗಳಲ್ಲಿ ಕೇವಲ 23 ರನ್ ಗಳಿಸಿ ವಿಫಲರಾದರು. ಅದೇ ರೀತಿ 2ನೇ ಟೆಸ್ಟ್ ಪಂದ್ಯದಲ್ಲಿಯೂ ಕ್ರಮವಾಗಿ 10, 2 ರನ್ ಗಳಿಸಿ ವಿಕೆಟ್ ಒಪ್ಪಿದ್ದಾರೆ.
7/ 8
ಟೆಸ್ಟ್ ಸರಣಿಗೂ ಮುನ್ನ ಪ್ರೆಸ್ ಮೀಟ್ ನಲ್ಲಿ ರಾಹುಲ್ ಮಾಡಿದ ಕಾಮೆಂಟ್ ಗಳು ಟ್ರೋಲಿಂಗ್ ಗೆ ಕಾರಣವಾಗಿವೆ. ಇತ್ತೀಚಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಅದ್ಭುತವಾಗಿ ಆಡುತ್ತಿದೆ ಎಂದ ಅವರು.. ಟೆಸ್ಟ್ ನಲ್ಲೂ ಆಕ್ರಮಣಕಾರಿ ಕ್ರಿಕೆಟ್ ಆಡುತ್ತೇವೆ ಎಂದಿದ್ದರು.
8/ 8
ಈಗಾಗಲೇ ಮೊದಲ ಟೆಸ್ಟ್ ನಲ್ಲಿ 8 ವಿಕೆಟ್ ಪಡೆದಿರುವ ಅವರಂತಹ ಮ್ಯಾಚ್ ವಿನ್ನರ್ ಅನ್ನು ಬದಿಗಿಟ್ಟಿದ್ದು, ತಂಡದ ನಾಯಕ ಕೆಎಲ್ ರಾಹುಲ್ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ.