Rohit Sharma: ಬಾಂಗ್ಲಾ ವಿರುದ್ಧದ 2ನೇ ಟೆಸ್ಟ್ಗೆ ರೋಹಿತ್ ಕಂಬ್ಯಾಕ್, ಯುವ ಸ್ಟಾರ್ ಪ್ಲೇಯರ್ಗೆ ಗೇಟ್ಪಾಸ್?
IND vs BAN: ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರೋಹಿತ್ ಶರ್ಮಾ ಗಾಯಗೊಂಡಿದ್ದು ಗೊತ್ತೇ ಇದೆ. ಇದಾದ ಬಳಿಕ ಅವರು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಬಂದಿದ್ದು, ಮುಂದಿನ ಟೆಸ್ಟ್ ಸರಣಿಗೆ ವಾಪಸ್ಸಾಗುವ ಸಾಧ್ಯತೆ ಇದೆ.
ಸದ್ಯ ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ ಪ್ರವಾಸದಲ್ಲಿದ್ದು ಗೊತ್ತೇ ಇದೆ. ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕಳೆದುಕೊಂಡಿರುವ ಭಾರತ ಟೆಸ್ಟ್ ಸರಣಿಯ ಗೆಲುವಿನ ಹಂಬಲದಲ್ಲಿದೆ.
2/ 8
ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರೋಹಿತ್ ಶರ್ಮಾ ಗಾಯಗೊಂಡಿದ್ದು ಗೊತ್ತೇ ಇದೆ. ಆ ಪಂದ್ಯದಲ್ಲಿ ಅವರು ಫೀಲ್ಡಿಂಗ್ ಕೂಡ ಮಾಡಿರಲಿಲ್ಲ. ಅಂತಿಮವಾಗಿ ಬ್ಯಾಟಿಂಗ್ಗೆ ಆಗಮಿಸಿ ತಂಡದ ಗೆಲುವಿಗಾಗಿ ಕೊನೆಯವರೆಗೂ ಹೋರಾಡಿದರು.
3/ 8
ಹೆಬ್ಬೆರಳಿನ ಗಂಭೀರ ಗಾಯದಿಂದಾಗಿ ರೋಹಿತ್ ಶರ್ಮಾ ಮೂರನೇ ಏಕದಿನ ಹಾಗೂ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಅಲ್ಲದೇ ಹೆಚ್ಚಿನ ಚಿಕಿತ್ಸೆಗೆ ಮುಂಬೈಗೆ ವಾಪಸ್ಸಾಗಿದ್ದಾರೆ.
4/ 8
ಸದ್ಯ ರೋಹಿತ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಎರಡನೇ ಟೆಸ್ಟ್ಗಾಗಿ ರೋಹಿತ್ ಮತ್ತೆ ಬಾಂಗ್ಲಾದೇಶಕ್ಕೆ ತೆರಳಲಿದ್ದಾರೆ ಎಂದು ವರದಿಯಾಗಿದೆ. ಹಾಗೆ ನಡೆದರೆ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ರೋಹಿತ್ ಆಡಲಿದ್ದಾರೆ.
5/ 8
ಆದರೆ ಇದೀಗ ರೋಹಿತ್ ಶರ್ಮಾ ತಂಡಕ್ಕೆ ಕಂಬ್ಯಾಕ್ ಮಾಡಿದರೆ ತಂಡದಿಂದ ಯಾರನ್ನು ಕೈಬಿಡುತ್ತಾರೆ ಎಂಬ ಕುತೂಹಲ ಮೂಡಿದೆ. ರೋಹಿತ್ ಓಪನರ್ ಆಗಿರುವುದರಿಂದ ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾದ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಶುಭಮನ್ ಗಿಲ್ ಇಬ್ಬರಲ್ಲಿ ಒಬ್ಬರು ಬೆಂಚ್ಗೆ ಸೀಮಿತವಾಗಬೇಕಿದೆ.
6/ 8
ರಾಹುಲ್ ಮೊದಲ ಟೆಸ್ಟ್ನಲ್ಲಿ ಸ್ಟಾಂಡಿಂಗ್ ಕ್ಯಾಪ್ಟನ್ ಆಗಿದ್ದರು. ರೋಹಿತ್ ಮತ್ತೊಮ್ಮೆ ನಾಯಕತ್ವ ವಹಿಸಿಕೊಂಡರೆ ರಾಹುಲ್ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಅನುಕ್ರಮದಲ್ಲಿ ಎರಡನೇ ಟೆಸ್ಟ್ನಿಂದ ರಾಹುಲ್ ಹೊರಗುಳಿಯುವ ಸಾಧ್ಯತೆ ತೀರಾ ಕಡಿಮೆ.
7/ 8
ರೋಹಿತ್ ಎರಡನೇ ಟೆಸ್ಟ್ ನಲ್ಲಿ ಆಡಿದರೆ ಶುಭಮನ್ ಗಿಲ್ ಬೆಂಚ್ ಗೆ ಸೀಮಿತವಾಗಬೇಕಾಗುತ್ತದೆ. ಮೊದಲ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಶುಭಮನ್ ಗಿಲ್ ಶತಕ (110) ಗಳಿಸಿದ್ದು ಗೊತ್ತೇ ಇದೆ. ರಾಹುಲ್ ಬಗ್ಗೆ ಹೇಳುವುದಾದರೆ, ಅವರು ಎರಡೂ ಇನ್ನಿಂಗ್ಸ್ಗಳಲ್ಲಿ 22 ಮತ್ತು 23 ರನ್ಗೆ ವಿಫಲರಾದರು.
8/ 8
ಆದರೆ, ಎರಡನೇ ಟೆಸ್ಟ್ ನಲ್ಲಿ ಶತಕ ಸಿಡಿಸಿದ ಗಿಲ್ ರನ್ನು ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ನಲ್ಲಿ ತೊರೆಯುವ ಸಾಧ್ಯತೆ ಹೆಚ್ಚಿದೆ.