ಶ್ರೇಯಸ್ ಅಯ್ಯರ್ ಏಕದಿನ ಪಂದ್ಯಗಳಲ್ಲಿ ಭಾರತದ ಟ್ರಬಲ್ ಶೂಟರ್ ಎಂಬುದನ್ನು ಸಾಬೀತುಪಡಿಸಿದ್ದಾರೆ ಆದರೆ ಟೆಸ್ಟ್ನಲ್ಲಿಯೂ ಈ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮಿರ್ಪುರ ಟೆಸ್ಟ್ನಲ್ಲಿ ಟೀಂ ಇಂಡಿಯಾಕ್ಕೆ ಟ್ರಬಲ್ ಶೂಟರ್ ಆದರು. 74 ರನ್ ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸೋಲಿನ ಅಂಚಿನಲ್ಲಿದ್ದ ಭಾರತ ತಂಡಕ್ಕೆ ಅಶ್ವಿನ್ ಜತೆಗೂಡಿ ಆಸರೆಯಾದರು.
ಅಯ್ಯರ್ ಅವರು ತಮ್ಮ ಚೊಚ್ಚಲ ಪಂದ್ಯದಿಂದ ಆಡಿದ ಎಲ್ಲಾ ಟೆಸ್ಟ್ ಇನ್ನಿಂಗ್ಸ್ಗಳಲ್ಲಿ 10 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಚೊಚ್ಚಲ ಟೆಸ್ಟ್ ನಂತರ, ಅಯ್ಯರ್ 18, 14, 27, 92, 67, 15, 19 ರನ್ ಗಳಿಸಿದರು. ನಂತರ ಅವರು ಚಟ್ಟೋಗ್ರಾಮ್ ಟೆಸ್ಟ್ನಲ್ಲಿ 86 ರನ್ ಗಳಿಸಿದರು. ಮತ್ತು ಎರಡನೇ ಟೆಸ್ಟ್ನಲ್ಲಿ ಅವರು ಮೊದಲ ಇನ್ನಿಂಗ್ಸ್ನಲ್ಲಿ 87 ರನ್ ಗಳಿಸಿದರು. ಇದೀಗ ಎರಡನೇ ಇನ್ನಿಂಗ್ಸ್ನಲ್ಲಿ 29 ರನ್ಗಳ ಅಜೇಯ ಇನ್ನಿಂಗ್ಸ್ನೊಂದಿಗೆ ಟೀಂ ಇಂಡಿಯಾಗೆ ಅದ್ಭುತ ಗೆಲುವು ತಂದುಕೊಟ್ಟಿದ್ದಾರೆ.