ಏಳು ವರ್ಷಗಳ ಹಿಂದೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಸೋತಿದ್ದ ಟೀಂ ಇಂಡಿಯಾ ಇದೀಗ ರೋಹಿತ್ ಶರ್ಮಾ ನಾಯಕತ್ವದಲ್ಲಿ ಅದೇ ಫಲಿತಾಂಶ ಪಡೆದಿದೆ. ಆದರೆ ಈ ಎರಡು ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಆದ ತಪ್ಪಿನಿಂದ ಸೋಲು ಕಂಡಿದೆ. ನಿರಾಯಾಸವಾಗಿ ಗೆಲ್ಲಬೇಕಿದ್ದ ಎರಡೂ ಪಂದ್ಯಗಳಲ್ಲಿ ರೋಹಿತ್ ಸೇನೆ ಸೋತಿತ್ತು. ಮೆಹದಿ ಹಸನ್ ಅವರ ಸಂವೇದನಾಶೀಲ ಪ್ರದರ್ಶನದ ಜೊತೆಗೆ, ರಾಹುಲ್ ದ್ರಾವಿಡ್ ಕೆಲ ನಿರ್ಧಾರಗಳು ತಂಡದ ಸೋಲಿಗೆ ಕಾರಣ ಎನ್ನಲಾಗುತ್ತಿದೆ.
ಕಳೆದ ವರ್ಷದ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಸೂಪರ್ 12ರಿಂದ ಮನೆಗೆ ತೆರಳಿದ್ದು ಗೊತ್ತೇ ಇದೆ. ಆ ಬಳಿಕ ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆಗಳು ನಡೆದವು. ನಾಯಕತ್ವ ಬದಲಾವಣೆಯ ಜತೆಗೆ ದ್ರಾವಿಡ್ ಕೋಚ್ ಆಗಿ ಬಂದರು, ಭಾರತ ಗೆದ್ದ ಪಂದ್ಯಗಳಲ್ಲೂ ಕಾಣದ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಿ ತಂಡವನ್ನು ಬಲಿಷ್ಠಗೊಳಿಸುವ ಜವಾಬ್ದಾರಿ ಕೋಚ್ ಆಗಿ ದ್ರಾವಿಡ್ ಮೇಲಿದೆ. ಆದರೆ ಅವರು ಭಾರತದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಿಲ್ಲ.
ಮಾಜಿ ಕೋಚ್ ರವಿಶಾಸ್ತ್ರಿ ನೇತೃತ್ವದಲ್ಲಿ ಟೀಂ ಇಂಡಿಯಾ ಆಕ್ರಮಣಕಾರಿಯಾಗಿ ಕಾಣುತ್ತಿತ್ತು. ಆದರೆ, ಈಗ ಟೀಂ ಇಂಡಿಯಾದಲ್ಲಿ ಆಕ್ರಮಣಶೀಲತೆ ಇಲ್ಲ. ಯಾವುದೇ ಆಟಗಾರರು ಆಕ್ರಮಣಕಾರಿಯಾಗಿ ಆಡುತ್ತಿಲ್ಲ. ರಾಹುಲ್ ದ್ರಾವಿಡ್ ರಕ್ಷಣಾತ್ಮಕ ಮೈಂಡ್ ಸೆಟ್ ಎಂಬುದು ನಮಗೆಲ್ಲ ಗೊತ್ತೇ ಇದ್ದು, ಅದೇ ಸೂತ್ರವನ್ನು ತಂಡದಲ್ಲಿಯೂ ಅನುಸರಿಸುತ್ತಿದ್ದಾರೆ. ದ್ರಾವಿಡ್ ಇದೇ ರೀತಿ ಪ್ರಯೋಗ ಮಾಡುತ್ತಿದ್ದರೆ ಮುಂದಿನ ವಿಶ್ವಕಪ್ ಗೆಲ್ಲೋದು ಕಷ್ಟ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಪ್ರಯೋಗಗಳನ್ನು ಮಾಡಿ ವಿಫಲವಾಗುತ್ತಲೇ ಇದ್ದಾರೆ. ಒಂದು ವರ್ಷದಲ್ಲಿ 8 ಕ್ಯಾಪ್ಟನ್ ಗಳನ್ನು ಬದಲಾಯಿಸಿದ್ದಾರೆ ಎಂದರೆ, ಅವರು ಎಷ್ಟು ಪ್ರಯೋಗಗಳನ್ನು ಮಾಡಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಟೀಂ ಇಂಡಿಯಾದ ಆರಂಭಿಕರಿಂದ ಹಿಡಿದು ಬ್ಯಾಟಿಂಗ್ ಕ್ರಮಾಂಕದವರೆಗೆ ಪ್ರತಿ ಪಂದ್ಯದಲ್ಲೂ ಪ್ರಯೋಗ ಮಾಡುತ್ತಿರುವ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಂಡಕ್ಕೆ ತಯಾರಿ ನಡೆಸಲು ಸಮಯ ನೀಡುತ್ತಿಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.