ಟಿ20 ಮತ್ತು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರ ದಾಖಲೆ ಅತ್ಯುತ್ತಮವಾಗಿದೆ. ಅಂತಾರಾಷ್ಟ್ರೀಯ ಟಿ20ಯಲ್ಲಿ 4 ಶತಕ ಸಿಡಿಸಿದ ಏಕೈಕ ಬ್ಯಾಟ್ಸ್ಮನ್. ಅವರು ಏಕದಿನ ಪಂದ್ಯಗಳಲ್ಲಿ 3 ದ್ವಿಶತಕಗಳನ್ನು ಸಹ ಗಳಿಸಿದ್ದಾರೆ. ವಿಶ್ವದ ಯಾವುದೇ ಬ್ಯಾಟ್ಸ್ಮನ್ಗಳು ಇದನ್ನು ಮಾಡಲು ಸಾಧ್ಯವಾಗಿಲ್ಲ, ಆದರೆ ನಾಯಕ ರೋಹಿತ್ ಕಳೆದ 35 ತಿಂಗಳಿಂದ ರನ್ಗಾಗಿ ಪರದಾಡುತ್ತಿದ್ದಾರೆ.
ರೋಹಿತ್ ಶರ್ಮಾ ಕಳೆದ ODI ಮತ್ತು T20 ಅಂತರಾಷ್ಟ್ರೀಯ 54 ಪಂದ್ಯಗಳಲ್ಲಿ ಒಂದೇ ಒಂದು ಶತಕವನ್ನು ಗಳಿಸಲು ಸಾಧ್ಯವಾಗಲಿಲ್ಲ. ಅವರು ತಮ್ಮ ಕೊನೆಯ ಶತಕವನ್ನು 19 ಜನವರಿ 2020 ರಂದು ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಸಿಡಿಸಿದ್ದರು. ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ ಅವರು 128 ಎಸೆತಗಳಲ್ಲಿ 119 ರನ್ ಗಳಿಸಿದ್ದರು. ಹೀಗಾಗಿ ರೋಹಿತ್ ಕಳೆದ 35 ತಿಂಗಳಿಂದ ಶತಕದ ಇನ್ನಿಂಗ್ಸ್ ಆಡಲು ಸಾಧ್ಯವಾಗಿಲ್ಲ.
ರೋಹಿತ್ ಶರ್ಮಾ ಇದುವರೆಗೆ 45 ಟೆಸ್ಟ್ ಪಂದ್ಯಗಳಲ್ಲಿ 46ರ ಸರಾಸರಿಯಲ್ಲಿ 3137 ರನ್ ಗಳಿಸಿದ್ದಾರೆ. 8 ಶತಕ ಹಾಗೂ 14 ಅರ್ಧ ಶತಕ ಬಾರಿಸಿದ್ದಾರೆ. 212 ರನ್ ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಪ್ರಸ್ತುತ, ಅವರು ಟೀಮ್ ಇಂಡಿಯಾದ ಎಲ್ಲಾ ಮೂರು ಫಾರ್ಮ್ಯಾಟ್ಗಳ ನಾಯಕರಾಗಿದ್ದಾರೆ. ODI ಸರಣಿಯ ನಂತರ, ಡಿಸೆಂಬರ್ 14 ರಿಂದ ಭಾರತ ಮತ್ತು ಬಾಂಗ್ಲಾದೇಶ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ಕೂಡ ನಡೆಯಲಿದೆ.